Advertisement

ಬಿಎಂಸಿ ಶಾಲೆ: ಆನ್‌ಲೈನ್‌ ಬೋಧನೆ ಪ್ರಾರಂಭಿಸಲು ಸೂಚನೆ

11:02 AM Jun 21, 2020 | Suhan S |

ಮುಂಬಯಿ, ಜೂ. 20: ರಾಜ್ಯಾದ್ಯಂತ ಕೆಂಪು ವಲಯಗಳಲ್ಲಿ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆ ಇನ್ನೂ ವಿವರವಾದ ಮಾರ್ಗಸೂಚಿಗಳನ್ನು ನೀಡದಿರುವ ಹಿನ್ನೆಲೆ, ಮುಬಯಿ ಮನಪಾದ ಶಿಕ್ಷಣ ಇಲಾಖೆ ನಗರದ ಶಾಲೆಗಳಿಗೆ ಪಠ್ಯಪುಸ್ತಕಗಳ ವಿತರಣೆಯನ್ನು ಪೂರ್ಣಗೊಳಿಸಲು ಮತ್ತು ಆನ್‌ಲೈನ್‌ನಲ್ಲಿ ಬೋಧನೆ ಮುಂದುವರಿಸಲು ಹೇಳಿದೆ.

Advertisement

ಶುಕ್ರವಾರ ಬಿಡುಗಡೆಯಾದ ಸುತ್ತೋಲೆಯಲ್ಲಿ, ನಗರದ ಎಲ್ಲ ನಾಗರಿಕ ಮತ್ತು ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಸಾಮಾಜಿಕ ಅಂತರ ಮಾನದಂಡಗಳ ಪ್ರಕಾರ ಪಠ್ಯಪುಸ್ತಕಗಳನ್ನು ವಿತರಿಸುವಂತೆ ಇಲಾಖೆ ಸೂಚನೆ ನೀಡಿದೆ. ಸಂಸ್ಥೆಯ ಅವಶ್ಯಕತೆಗೆ ಅನುಗುಣವಾಗಿ ನಾಗರಿಕ ಸಂಸ್ಥೆಯ ಅಡಿಯಲ್ಲಿ ಶಾಲೆಗಳನ್ನು ಹೊಂದಿರುವ ಶಿಕ್ಷಕರನ್ನು ಕೆಲಸಕ್ಕೆ ವರದಿ ಮಾಡುವಂತೆ ಸುತ್ತೋಲೆಯಲ್ಲಿ ತಿಳಿಸಿದೆ. ಪುಸ್ತಕ ವಿತರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶಿಕ್ಷಕರನ್ನು ಕೆಲಸಕ್ಕೆ ಕರೆಯಬಹುದು. ಇತರ ಸಮಯಗಳಲ್ಲಿ, ಅವರು ಜೂನ್‌ 30ರ ವರೆಗೆ ಮೆಸೇಜಿಂಗ್‌ ಅಪ್ಲಿಕೇಶನ್‌ಗಳು, ಲೈವ್‌ ವೀಡಿಯೊಗಳು, ರೆಕಾರ್ಡ್‌ ಮಾಡಿದ ಪಾಠಗಳು ಇತ್ಯಾದಿಗಳ ಮೂಲಕ ಆನ್‌ಲೈನ್‌ ಬೋಧನೆಯನ್ನು ಮುಂದುವರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next