Advertisement
ಇದಕ್ಕಾಗಿ, ನಗರದ ಎಲ್ಲ ಉದ್ದಿಮೆ ದಾರರು ತಮ್ಮ ಉದ್ದಿಮೆ ಸ್ಥಳದ ಮುಂಭಾಗ ದಲ್ಲಿ (ಹಸಿ ತ್ಯಾಜ್ಯಕ್ಕೆ) ಹಸುರು ಬಣ್ಣದ ಬಿನ್ ಹಾಗೂ (ಒಣ ತ್ಯಾಜ್ಯಕ್ಕೆ) ನೀಲಿ ಬಣ್ಣದ ಬಿನ್‌ಗಳನ್ನು ಕಡ್ಡಾಯವಾಗಿ ಹಾಗೂ ತಮ್ಮ ಉದ್ದಿಮೆಯಲ್ಲಿ “ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆ ಮತ್ತು ಮಾರಾಟ ಮಾಡುವುದಿಲ್ಲ’ ಎಂಬ ನಾಮಫಲಕವನ್ನು ಅಳವಡಿಸಬೇಕಾಗಿದೆ. ಈ ನಿಯಮ ಪಾಲಿಸದಿದ್ದರೆ ಅಂತಹ ಉದ್ದಿಮೆದಾರರ ಪರವಾನಿಗೆಯನ್ನು ರದ್ದುಗೊಳಿಸುವ ಅಥವಾ ನವೀಕರಣಗೊಳಿಸದಂತೆ ಅಥವಾ ತ್ಯಾಜ್ಯವನ್ನು ಸಂಗ್ರಹಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.
ಸಣ್ಣ ಹಾಗೂ ಸ್ವಂತ ಪ್ರತ್ಯೇಕ ಮನೆ ಯನ್ನು ಹೊಂದಿದವರು ಈ ವ್ಯವಸ್ಥೆಯ ಸಂಪೂರ್ಣ ಅರಿವು ಮೂಡುವ ತನಕ ತ್ಯಾಜ್ಯ ವಿಂಗಡಣೆ ವ್ಯವಸ್ಥೆಗೆ ಹೊಂದಿ ಕೊಳ್ಳಲು ಒಂದು ವಾರಗಳ ವಿನಾಯಿತಿ ನೀಡಲಾಗಿದೆ. ಆ ಬಳಿಕವೂ ತ್ಯಾಜ್ಯ ವಿಂಗಡಿ ಸದಿದ್ದರೆ ಅಂತಹವರಿಂದ ಮಹಾನಗರ ಪಾಲಿಕೆಯು ಕಸ ಸ್ವೀಕರಿಸುವುದಿಲ್ಲ. ತ್ಯಾಜ್ಯ ವಿಂಗಡಣೆ ಮಾಡದವರಿಗೆ ಹಾಗೂ ರಸ್ತೆ ಬದಿಯಲ್ಲಿ ಬಿಸಾಡುವವರಿಗೆ 1,000 ರೂ.ಗಳಿಂದ 25,000 ರೂ.ವರೆಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.