ಚಂದ್ರನ ಪಥ ದೀರ್ಘ ವೃತ್ತಾಕಾರ. ಇದು ಒಮ್ಮೊಮ್ಮೆ ಭೂಮಿಗೆ ಹತ್ತಿರವೂ ಒಮ್ಮೊಮ್ಮೆ ದೂರವೂ ಇರುತ್ತದೆ. ಸಮೀಪವಿರುವ ದೂರವನ್ನು ಪೆರಿಜಿ ಎಂದೂ ದೂರದ ದೂರವನ್ನು ಅಪೊಜಿ ಎಂದೂ ಕರೆಯುತ್ತಾರೆ.
ಈ ಸೂಪರ್ ಮೂನ್ ಭೂಮಿಗೆ ಅತೀ ಸಮೀಪದ ಸೂಪರ್ ಮೂನ್. ಈ ದಿನ ಚಂದ್ರ, ಭೂಮಿಗೆ ಸುಮಾರು 3,57,462 ಕಿ.ಮೀ. ಅಂತರದಲ್ಲಿ ಬರಲಿದೆ. (ಸರಾಸರಿ ದೂರ 3,84,000 ಕಿ.ಮೀ.). ಈ ವರ್ಷ ಮಾ. 28, ಎ.27ರಂದು ಎರಡು ಸೂಪರ್ ಮೂನ್ ಆಗಿದೆ. ಜೂ. 24ರಂದು ಇನ್ನೊಂದು ಸೂಪರ್ ಮೂನ್ ಆಗಲಿದೆ.
ಅಷ್ಟು ಮಾತ್ರವಲ್ಲದೆ ಈ ಬಾರಿಯ ಗ್ರಹಣದ ಸಂದರ್ಭ ಚಂದ್ರ ಕೆಂಪು ಬಣ್ಣದಲ್ಲಿ ಕಂಗೊಳಿಸಲಿದ್ದಾನೆ. ಹೀಗಾಗಿ ಈ ಚಂದ್ರನನ್ನು ರೆಡ್ ಬ್ಲಿಡ್ ಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಮೂನ್ ಹುಣ್ಣಿಮೆಯ ಚಂದ್ರ ನೋಡಲು ಬಲು ಚೆಂದ.