Advertisement

ರಕ್ತ ನಿಧಿ ಪ್ರಾರಂಭ ಕನಸು ನನಸಾಗುವುದೇ?

12:43 PM Oct 11, 2021 | Team Udayavani |

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆಯ ಎಂವಿಜೆ ಮೆಡಿಕಲ್‌ ಕಾಲೇಜ್‌ ಆ್ಯಂಡ್‌ ರಿಸರ್ಚ್‌ ಹಾಸ್ಪಿಟಲ್‌, ನೆಲಮಂಗಲದಲ್ಲಿ ಹರ್ಷ ಆಸ್ಪಿಟಲ್‌ ಬ್ಲಿಡ್‌ ಸಂಗ್ರಹಣಾ ಬ್ಯಾಂಕ್‌ ಹೊಂದಿದ್ದು, ಉಳಿದೆರಡು ತಾಲೂಕುಗಳಲ್ಲಿ ಯಾವುದೇ ರಕ್ತ ನಿಧಿ ಸ್ಥಾಪನೆ ಯಾಗದಿರುವುದು ವಿಪರ್ಯಾಸವಾಗಿದೆ.

Advertisement

ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತಿದ್ದರೂ, ದೇವನಹಳ್ಳಿ ಪಟ್ಟಣ ಪ್ರದೇಶದಲ್ಲಿ ಮಾತ್ರ ರಕ್ತನಿಧಿ ಪ್ರಾರಂಭಿಸಲು ಜನಪ್ರತಿನಿಧಿಗಳ ಹಾಗೂ ಅಧಿಕಾರಿ ವರ್ಗದ ಇಚ್ಛಾಶಕ್ತಿ

ಕೊರತೆ ಎದ್ದು ಕಾಣಿಸುತ್ತಿದೆ. ರಕ್ತಕ್ಕಾಗಿ ಬೆಂಗಳೂರಿನ ಕೆಲವು ಕಡೆಗಳಲ್ಲಿನ ಬ್ಲಿಡ್‌ ಬ್ಯಾಂಕ್‌ಗಳಿಗೆ ಹೋಗುವ ಪರಿಸ್ಥಿತಿ ಇದ್ದು, ಸ್ಥಳೀಯವಾಗಿ ದೇವನಹಳ್ಳಿ ಕೇಂದ್ರದಲ್ಲಿ ರಕ್ತ ನಿಧಿ ಪ್ರಾರಂಭಿಸಿದರೆ, ಸುತ್ತಮುತ್ತಲಿನ ತಾಲೂಕುಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂಬುವುದು ಜನರ ಅಭಿಪ್ರಾಯವಾಗಿದೆ.

ಇದನ್ನೂ ಓದಿ;-  ‘ಡ್ರೀಮ್‌ 11’ ಸ್ಥಗಿತ ನಿರ್ಧಾರಕ್ಕೆ ಖುಷಿಪಟ್ಟವರ ಸಂಖ್ಯೆಯೇ ಹೆಚ್ಚು!

ಶೀಘ್ರ ಬ್ಲಿಡ್‌ ಬ್ಯಾಂಕ್‌ ಪ್ರಾರಂಭಿಸಿ: ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ರಕ್ತನಿಧಿ ತೆರೆದರೆ, ಸಾಕಷ್ಟು ಸ್ಥಳೀಯರಿಗೆ ಅನುಕೂಲವಾಗಲಿದ್ದು, ರಕ್ತ ನಿಧಿಗಾಗಿ ಬೆಂಗಳೂರು ನಗರ ಪ್ರದೇಶಕ್ಕೆ ಅವಲಂಬಿತರಾಗಿದ್ದೇವೆ. ಪಟ್ಟಣದಲ್ಲಿ ಬ್ಲಿಡ್‌ ಬ್ಯಾಂಕ್‌ ತೆರೆದರೆ ಹೆಚ್ಚಿನ ಅನುಕೂಲವಾಗುತ್ತದೆ ಎಂಬುವುದು ನಗರ ವಾಸಿಗಳ ಒತ್ತಾಯವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ಪಟ್ಟಣದಲ್ಲಿ ಶೀಘ್ರ ಬ್ಲಿಡ್‌ ಬ್ಯಾಂಕ್‌ ಸೇವೆ ಪ್ರಾರಂಭಿಸಬೇಕೆಂಬುವುದು ನಾಗರಿಕರ ಒತ್ತಾಸೆಯಾಗಿದೆ.

Advertisement

ಬೆಂಗಳೂರು ನಗರ ಪ್ರದೇಶಕ್ಕೆ ಹೋಗುವ ತಾಪತ್ರಯ ತಪ್ಪುತ್ತದೆ. ಸಂಬಂಧಪಟ್ಟ ಪುರ ಸಭೆಯವರು ಮತ್ತು ಸ್ಥಳೀಯ ಶಾಸಕರು ಕಾಳಜಿವಹಿಸಿ ಆರೋ ಗ್ಯದ ಹಿತದೃಷ್ಟಿಯಿಂದ ರಕ್ತನಿಧಿ ಪ್ರಾರಂಭಕ್ಕೆ ಒತ್ತು ನೀಡಬೇಕು. ಸಾಕಷ್ಟು ಜನರಿಗೆ ರಕ್ತದ ಅವಶ್ಯ ಕತೆ ಇರುತ್ತದೆ. ಸ್ಥಳೀಯವಾಗಿ ರಕ್ತ ನಿಧಿ ಪ್ರಾರಂಭಿಸಿದರೆ, ಇಲ್ಲಿನ ಸ್ಥಳೀಯರಿಗೆ ಅನುಕೂಲ ವಾಗುತ್ತದೆ.

ಜಿ.ಅನಿಲ್‌ ಕುಮಾರ್‌, ಸ್ಥಳೀಯ ನಾಗರಿಕ

ಈಗಾಗಲೇ ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕು ಕಚೇರಿಯ ಬಳಿ ಜಾಗವನ್ನು ಗುರುತಿಸಲಾಗಿದ್ದು, ಖಾಸಗಿ ಕಂಪನಿಯ ಸಹಭಾಗಿತ್ವದಲ್ಲಿ ಬ್ಲಿಡ್‌ ಬ್ಯಾಂಕ್‌ ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸಿಎಸ್‌ಆರ್‌ ಅನುದಾನದಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಬೇಗ ಪ್ರಗತಿಗೆ ಬರುತ್ತದೆ. ಯಾರಿಗಾದರೂ ರಕ್ತದವಶ್ಯಕತೆ ಇದ್ದರೆ ನಾಲ್ಕು ತಾಲೂಕುಗಳಲ್ಲಿ ಎಲ್ಲ ರೀತಿಯ ಕ್ರಮಕೈಗೊಳ್ಳಲು ಸಿದ್ಧರಿದ್ದೇವೆ.

ಡಾ. ತಿಪ್ಪೇಸ್ವಾಮಿ, ಡಿಎಚ್‌

ನಮ್ಮ ಕ್ಷೇತ್ರದಲ್ಲಿ ರಕ್ತನಿಧಿ ಸ್ಥಾಪನೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಶೀಘ್ರ ಸೂಚಿಸಲಾಗುತ್ತದೆ.

 ನಾರಾಯಣಸ್ವಾಮಿ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next