Advertisement

ರಕ್ತದಾನ ಮಾಡಿ ಹೋರಾಟ ಆರಂಭ: ಜಯ ಮೃತ್ಯುಂಜಯ ಶ್ರೀ

07:31 PM Dec 23, 2020 | Suhan S |

ದಾವಣಗೆರೆ: ಕಳೆದ ಎರಡು ದಶಕಗಳಿಂದ ಆಡಳಿತ ನಡೆಸಿದ ಎಲ್ಲಾ ಮುಖ್ಯಮಂತ್ರಿಗಳಿಗೂ ಸಮಾಜದಿಂದ ಸನ್ಮಾನ, ಗೌರವ ಮಾಡಲಾಗಿದೆ. 2ಎ ಮೀಸಲಾತಿ ಕುರಿತಂತೆ ಸಾಕಷ್ಟು ಮನವಿಯನ್ನೂ ಸರ್ಕಾರಕ್ಕೆ ನೀಡಲಾಗಿದೆ.

Advertisement

ಶಾಂತಿಯುತವಾಗಿ ಹೋರಾಟ ಸಹ ಮಾಡಿ ಸರ್ಕಾರದ ಗಮನ ಸೆಳೆದಿದ್ದೇವೆ. ಯಾರೂಸಹ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದ್ದರಿಂದ ನಮ್ಮ ಜನ್ಮದಿನದಂದು ರಕ್ತದಾನಶಿಬಿರ ಹಮ್ಮಿಕೊಳ್ಳುವ ಮೂಲಕ ಸರ್ಕಾರವನ್ನು ಎಚ್ಚರಗೊಳಿಸುತ್ತಿದ್ದೇವೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಮಂಗಳವಾರ ಡಾ| ಸದ್ಯೋಜಾತ ಮಠದಲ್ಲಿ ಹಮ್ಮಿಕೊಂಡಿದ್ದ ತಮ್ಮ ಜನ್ಮದಿನಾಚರಣೆ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು.ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2ಎ ಮೀಸಲಾತಿಗೆ ಒತ್ತಾಯಿಸಿ ಬೆಳಗಾವಿ ವಿಧಾನಸೌಧದ ಬಳಿ ಉಪವಾಸಸತ್ಯಾಗ್ರಹ ಮಾಡಿದ್ದೇವೆ. ಇದೀಗ ಜನ್ಮಭೂಮಿದಾವಣಗೆರೆಯಿಂದಲೇ ರಕ್ತ ಕೊಡುವ ಮೂಲಕ ಹೋರಾಟಕ್ಕೆ ಚಾಲನೆ ಕೊಡಬೇಕೆಂದು ಬಂದಿದ್ದೆ. ಆದರೆ ಮಹಾಪೌರರಾದ ಅಜಯ್‌ಕುಮಾರ್‌ರವರು ಕೂಡಲಸಂಗಮದಲ್ಲೇ ನೀವು ರಕ್ತದಾನ ಮಾಡಿ. ಭಕ್ತರು ಮೊದಲು ಇಲ್ಲಿಂದ ರಕ್ತ ಕೊಟ್ಟುಹೋರಾಟ ಆರಂಭಿಸುತ್ತೇವೆ ಎಂದಿದ್ದರಿಂದ ಕೂಡಲಸಂಗಮದಿಂದಲೇ ರಕ್ತದಾನ ಮಾಡಿ ಹೋರಾಟ ಆರಂಭಿಸುವೆ ಎಂದು ತಿಳಿಸಿದರು.

ಪಂಚಮಸಾಲಿ ಸಮಾಜಕ್ಕೆ ಕೇಂದ್ರದಿಂದ ಒಬಿಸಿ ಹಾಗೂ ರಾಜ್ಯದಿಂದ 2ಎ ಮೀಸಲಾತಿ ನೀಡಬೇಕು ಹಿನ್ನೆಲೆಯಲ್ಲಿ ದಾವಣಗೆರೆಯಿಂದಲೇ ಚಾಲನೆ ಕೊಡಲಾಗಿದೆ.ನಾವು ಇದುವರೆಗೂ ಶಾಂತಿಯುತವಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ನೀಡುವ ಮೂಲಕ ಒತ್ತಾಯ ಮಾಡಿದ್ದೇವೆ. ಇದೀಗ ಸಮಾಜದ ಮುಖಂಡರ ತೀರ್ಮಾನದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ “ರಕ್ತ ಕೊಡುತ್ತೇವೆ, ಮೀಸಲಾತಿ ಕೊಡಿ’ ಎಂಬ ಘೋಷಣೆ ಮೂಲಕ ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಜ. 14 ರೊಳಗೆ ಈ ಬಗ್ಗೆ ತೀರ್ಮಾನ ಕೈಗೊಂಡುನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಇಲ್ಲವಾದರೆ ಕೂಡಲಸಂಗಮದಲ್ಲಿ ಜ. 14 ರಂದು ನಡೆಯುವ ಕೃಷಿ ಸಮ್ಮೇಳನದಲ್ಲಿಬೃಹತ್‌ ರಕ್ತದಾನ ಶಿಬಿರ ಹಮ್ಮಿಕೊಂಡು ರಕ್ತ ಕೊಟ್ಟು ಹೋರಾಟ ಮಾಡುತ್ತೇವೆ. ಅಲ್ಲಿಂದಲೇ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಮೂಲಕಶಕ್ತಿಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಸರ್ಕಾರ ಅದಕ್ಕೂ ಮಣಿಯದಿದ್ದರೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಿಎಂ ಯಡಿಯೂರಪ್ಪ ಈಗಾಗಲೇ ಈಬಗ್ಗೆ ನಮ್ಮ ಜೊತೆ ಮಾತುಕತೆ ನಡೆಸಿದ್ದಾರೆ. ನಮಗೆ 2ಎ ಮೀಸಲಾತಿ ಕಲ್ಪಿಸುತ್ತಾರೆ ಎಂಬವಿಶ್ವಾಸವಿದೆ. ಅವರ ಆಡಳಿತಾವ ಧಿಯಲ್ಲಿಪಂಚಮಸಾಲಿ ಸಮಾಜಕ್ಕೆ ಮೀಸಲಾತಿಸಿಗುತ್ತದೆ ಎಂಬ ವಿಶ್ವಾಸವಿದೆ. ನಮ್ಮ ಹೋರಾಟಮಾತ್ರ ನಿಲ್ಲುವುದಿಲ್ಲ. ಕೆಲವು ಸಚಿವರು ಮತ್ತು ರಾಜಕೀಯ ಮುಖಂಡರು ಗ್ರಾಪಂಚುನಾವಣೆ ಹಿನ್ನೆಲೆಯಲ್ಲಿ ಪಾದಯಾತ್ರೆ ಬೇಡ ಎಂದ ಕಾರಣ ಪಾದಯಾತ್ರೆಯನ್ನು ಜ.14 ಕ್ಕೆ ಮುಂದೂಡಲಾಗಿದೆ ಎಂದರು.

Advertisement

ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ಶ್ರೀಧರ್‌ ಪಾಟೀಲ್‌, ಅಶೋಕ್‌, ಪ್ರಭುದೇವ್‌, ಗಂಗಾಧರ ಇತರರು ಇದ್ದರು.ಲಡ್ಡು ವಿತರಣೆ, ವಿಶೇಷ ಸಂಚಿಕೆ ಬಿಡುಗಡೆ, ರಕ್ತದಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು

ಹರಿಹರದ ಪಂಚಮಸಾಲಿ ಶ್ರೀಗಳು ಹಾಗೂ ನಾವು ಮೀಸಲಾತಿ ವಿಚಾರದಲ್ಲಿ ಚರ್ಚೆ ನಡೆಸಿದ್ದು ಹೋರಾಟ ಮಾಡುತ್ತಿದ್ದೇವೆ. ಎರಡು ಮಠಗಳು ಮೀಸಲಾತಿ ವಿಚಾರದಲ್ಲಿ ಒಂದಾಗಿವೆ. ಯಾರಿಂದ ಆದರೂ ಸರಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗಬೇಕು. -ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next