Advertisement
ಬೆಳಗ್ಗೆ 8.30ರಿಂದ ಮಧ್ಯಾಹ್ನದವರೆಗೆ ನ್ಯೂ ಪನ್ವೇಲ್ ಪಶ್ಚಿಮದ ಸೆಕ್ಟರ್-10, ಕಾಂದಾ ಕಾಲನಿಯ ನೀಲ್ ಆರ್ಚಿಡ್‌ನ ಮಂಗಳೂರ್ ಟ್ಯೂಟೋರಿಯಲ್ಸ್ ಶಾಪ್ ನಂಬರ್-14ರಲ್ಲಿ ನಡೆಯಿತು.
Related Articles
Advertisement
ಅತಿಥಿ-ಗಣ್ಯರನ್ನು ಹಾಗೂ ವೈದ್ಯಾಧಿಕಾರಿಗಳನ್ನು ಉಭಯ ಸಂಸ್ಥೆಗಳ ಪದಾಧಿಕಾರಿಗಳು ಪುಷ್ಪಗುತ್ಛ ಮತ್ತು ಸ್ಮರಣಿಕೆಯನ್ನಿತ್ತು ಗೌರವಿಸಿದರು. ಕರಾವಳಿ ನ್ಪೋರ್ಟ್ಸ್
ಅಕಾಡೆಮಿ ಕಾರ್ಯಾಧ್ಯಕ್ಷ ಮಹಾಬಲ ಟಿ. ಶೆಟ್ಟಿ ರಸಾ ಯನಿ, ಅಧ್ಯಕ್ಷ ಮಹೇಶ್ ಹೆಗ್ಡೆ, ಗೌರವ ಕಾರ್ಯದರ್ಶಿ ಕೆ. ತಾರಾನಾಥ ಶೆಟ್ಟಿ ಕಡೆಕಾರ್, ಕೋಶಾಧಿಕಾರಿ ಸುರೇಶ್ ಎಂ. ಶೆಟ್ಟಿ ಖಾಂದಾಕಾಲನಿ, ಉಪಾಧ್ಯಕ್ಷರಾದ ವಿನೋದ್ ವಿ. ಕಾಮತ್ ಮತ್ತು ವಿಕಾಸ್ ಪಾಟೀಲ್, ಜತೆ ಕಾರ್ಯ ದರ್ಶಿ ನಾಗರಾಜ್ ಪಾಲ್, ಜತೆ ಕಾರ್ಯದರ್ಶಿ ಪ್ರಸಾದ್ ದಲಾಲ್, ಗಣೇಶ್ ಶೆಟ್ಟಿ ಖಾಂದಾಕಾಲನಿ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ರಸಾಯನಿ ಸೋಶಿಯಲ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸ್ಥಳೀಯ ತುಳು, ಕನ್ನಡಿಗರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಶಿಬಿರದಲ್ಲಿ ಪ್ರಸಿದ್ಧ ವೈದ್ಯರಾದ ನೇತ್ರ ತಜ್ಞ ಗಣೇಶ್ ಶೆಟ್ಟಿ, ಡಾ| ಆರತಿ ಮಲಿಕ್, ಡಾ| ಉಮೇಶ್ ಅಮುರುಟ್ಕರ್ ಅವರು ಪಾಲ್ಗೊಂಡು ಸಹಕರಿಸಿದರು. ಶಿಬಿರದಲ್ಲಿ ಕಣ್ಣಿನ ತಪಾಸಣೆ, ಆರೋಗ್ಯ ತಪಾಸಣೆ, ಪಥೊಲಜಿ ಟೆಸ್ಟ್, ಸಿಬಿಸಿ, ಬ್ಲಿಡ್, ಶುಗರ್ ಟೆಸ್ಟ್, ರಕ್ತದಾನ ಶಿಬಿರ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಕೋವಿಡ್ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಡೆಯಿತು. ತುಳು, ಕನ್ನಡಿಗರು ಸಹಿತ ನೂರಾರು ಮಂದಿ ಪಾಲ್ಗೊಂಡು ಉಚಿತ ವೈದ್ಯಕೀಯ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಅಲ್ಲದೆ ಪರಿಸರದ ಅನೇಕ ಮಂದಿ ರಕ್ತದಾನ ಮಾಡಿದರು.