Advertisement

ಬಿಜೆಪಿ ವಿರುದ್ದ ಬಯ್ನಾಪುರ ವಾಗ್ಧಾಳಿ

02:39 PM Jun 06, 2022 | Team Udayavani |

ಕುಷ್ಟಗಿ: ಬಿಜೆಪಿ ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರನ್ನು ಕೈ ಬಿಟ್ಟು ಆರ್‌ಎಸ್‌ಎಸ್‌ನವರನ್ನು ಸೇರಿಸುವ ಕೆಲಸ ಮಾಡಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ವಾಗ್ಧಾಳಿ ನಡೆಸಿದರು.

Advertisement

ಇಲ್ಲಿನ ಕೊಪ್ಪಳ ರಸ್ತೆಯ ಎಸ್‌.ಪಿ. ಸಭಾಭವನದಲ್ಲಿ ರವಿವಾರ ನಡೆದ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕುಷ್ಟಗಿ- ಹನುಮಸಾಗರ, ಕುಷ್ಟಗಿ ವಿಧಾನಸಭಾ ಕ್ಷೇತ್ರ ಸಹಯೋಗದಲ್ಲಿ ಸಾಮಾಜಿಕ ಜಾಲತಾಣ ವಿಭಾಗದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಆದೇಶ ಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ ಇಪಿ) ಹೊಸ ಶಿಕ್ಷಣ ಅನುಷ್ಠಾನದ ಹಿನ್ನೆಲೆಯಲ್ಲಿ ಏನೂ ಹೊಸದನ್ನು ಮಾಡದೇ ಕಾಲಹರಣ ಮಾಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಪಠ್ಯ ಪುಸ್ತಕದಲ್ಲಿ ಕೈ ಬಿಟ್ಟು ವಿದ್ಯಾರ್ಥಿಗಳಿಗೆ ಗೊತ್ತಾಗದಂತೆ ಮಾಡುವ ಹುನ್ನಾರ ನಡೆದಿದೆ ಎಂದರು.

ರಾಜ್ಯದಲ್ಲಿ 1.5 ಲಕ್ಷ ಹುದ್ದೆ ಖಾಲಿ ಇದ್ದು, ಇದರಲ್ಲಿ 38 ಸಾವಿರ ಶಿಕ್ಷಕ ಹುದ್ದೆ ಖಾಲಿ ಇವೆ. 15ಸಾವಿರ ಹುದ್ದೆ ಭರ್ತಿ ಮಾಡಿಕೊಳ್ಳುವುದಾಗಿ ಹೇಳಿ ಇನ್ನೂ ಏನೂ ಮಾಡಿಲ್ಲ ಎಂದ ಅವರು, ಬಿಜೆಪಿ ಸರ್ಕಾರ 40 ಪರ್ಸೆಂಟೇಜ್‌ ಸರ್ಕಾರ ಅಲ್ಲ 60 ಪರ್ಸೆಂಟೇಜ್‌ಗೆ ವಿಸ್ತಾರವಾಗಿದೆ ಎಂದು ಟೀಕಿಸಿದರು.

ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಹಾಗೂ 8 ವರ್ಷಗಳ ಹಿಂದಿನ ಡಾ| ಮನಮೋಹನ ಸಿಂಗ್‌ ಸರ್ಕಾರದ ಅವಧಿಯ ಜನಪರ, ದೀನ ದಲಿತರ ಪರ ಕೆಲಸಗಳಾಗಿರುವುದನ್ನು ಸ್ಮರಿಸಿದ ಅವರು, 2023ರಲ್ಲಿ ನಮ್ಮದೇ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ನಮ್ಮ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಪಕ್ಷದ ಕಾರ್ಯಕರ್ತರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರು.

Advertisement

ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಹಸನಸಾಬ್‌ ದೋಟಿಹಾಳ ಮಾತನಾಡಿ, ಡಿ.ಕೆ. ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸಾಮಾಜಿಕ ಜಾಲತಾಣ ವಿಭಾಗಕ್ಕೆ ಆದ್ಯತೆ ನೀಡಲಾಗಿದೆ. 2023ರಲ್ಲಿ ಅಧಿಕಾರ ಬಂದರೆ ಅದರ ಶ್ರೇಯಸ್ಸು ಸಾಮಾಜಿಕ ಜಾಲತಾಣ ವಿಭಾಗಕ್ಕೆ ಸೇರುತ್ತದೆ. ಪಕ್ಷದ ಯಾವೂದೇ ಕಾರ್ಯಕ್ರಮಕ್ಕೆ ಹೋದರು ಸಾಮಾಜಿಕ ಜಾಲತಾಣಕ್ಕೆ ಮಾಹಿತಿ ನೀಡುವುದು ಮರೆಯಬಾರದು. ಯಾಕೆಂದರೆ ಪಕ್ಷದ ಕಾರ್ಯ ಚಟುವಟಿಕೆಗಳು ಮನೆ ಮನೆಗೂ ತಲುಪಿಸುವ ಕಾರ್ಯ ಈ ವಿಭಾಗದ ಹೊಣೆಗಾರಿಕೆ ಆಗಿದೆ ಎಂದರು.

ಪಕ್ಷದ ಮುಖಂಡ ಕಲ್ಲಪ್ಪ ತಳವಾರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಮಾಲತಿ ನಾಯಕ, ಲಾಡ್ಲೆಮಷಕ್‌ ದೋಟಿಹಾಳ, ಪುರಸಭೆ ಸದಸ್ಯರಾದ ಸೈಯದ್‌ ಖಾಜಾ ಮೈನುದ್ದೀನ್‌ ಮುಲ್ಲಾ, ಮಹಿಬೂಬಸಾಬ್‌ ಕಮ್ಮಾರ, ಶಕುಂತಲಮ್ಮ ಹಿರೇಮಠ, ಶಾರದಾ ಕಟ್ಟಿಮನಿ, ಶಿವರಾಜ ಕಟ್ಟಿಮನಿ, ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ವೀರೇಶ ಬಿ.ಟಿ. ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next