Advertisement
ವೀರಾಜಪೇಟೆಯ ಮೀನುಪೇಟೆ ಮೂಲದ ಹವಾಲ್ದಾರ್ ಅಲ್ತಾಫ್ ಅಹಮದ್ (37) ಹುತಾತ್ಮ ಯೋಧ. ಅವರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ದಂಪತಿಯ ಪುತ್ರ. ಮೀನುಪೇಟೆಯಲ್ಲಿ ಹುಟ್ಟಿ ಬೆಳೆ ದವರು. ಬಾಲ್ಯದಿಂದಲೇ ದೇಶ ಭಕ್ತಿ ಮೈಗೂಡಿಸಿಕೊಂಡಿದ್ದರು. ವೀರಾಜ ಪೇಟೆಯ ಸೈಂಟ್ ಆ್ಯನ್ಸ್ ಶಾಲೆಯಲ್ಲಿ 10ನೇ ತರಗತಿ ವರೆಗೂ ಸ್ಥಳೀಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರೈಸಿ ದೇಶ ಸೇವೆ ಮಾಡುವ ತನ್ನ ಕನಸನ್ನು ನನಸಾಗಿಸುವ ಉದ್ದೇಶದಿಂದ ಭಾರತೀಯ ಭೂ ಸೇನೆಯ ಆರ್ಮಿ ಆರ್ಡ್‌ನಾನ್ಸ್ ಕಾಪ್ಸ್ì (ಎಒಸಿ) ರೆಜಿಮೆಂಟ್‌ಗೆ ಸೇರ್ಪಡೆಯಾಗಿದ್ದರು.
Related Articles
19 ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಇತ್ತೀಚೆಗೆ ಶ್ರೀನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಬುಧವಾರ ಮುಂಜಾನೆ ಗಡಿ ರಕ್ಷಣಾ ಕರ್ತವ್ಯದಲ್ಲಿದ್ದ ಸಂದರ್ಭ ಹಿಮಪಾತವಾಗಿದ್ದು ಅವರು ಅದರಡಿ ಸಿಲುಕಿದರು.
Advertisement