Advertisement

ಬದಿಯಡ್ಕ ಬಿರುಸಿನ ಮತದಾನ

12:53 PM Apr 24, 2019 | sudhir |

ಕಾಸರಗೋಡು: ಲೋಕಸಭಾ ಚುನಾವಣೆಗೆ ಜಿಲ್ಲೆ ಸಂಪೂರ್ಣ ಸಿದ್ಧಗೊಂಡಿದ್ದು ಬೆಳಗಿನಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

Advertisement

 

ಕಾಸರಗೋಡಿನ ಬದಿಯಡ್ಕದಲ್ಲಿನ ನೆಟ್ಟಣಿಗೆ , ಬೆಳ್ಳೂರು , ಬೆಳಿಂಜ , ಚೆಂಗಳ ಹಾಗೂ ಪೆರಡಾಲ ಪ್ರದೇಶಗಳಲ್ಲಿ ಮತದಾರರು ಅತಿ ಉತ್ಸಾಹದಿಂದ ಮತದಾನ ಮಾಡಿದರು.

ಕಾಸರಗೋಡು ಲೋಕಸಭೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 13,63,937 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶ ಪಡೆದಿದ್ದಾರೆ.

Advertisement

ಬದಿಯಡ್ಕ:ನೆಟ್ಟಣಿಗೆ ಶಾಲೆಯಲ್ಲಿ ಮುಂಜಾನೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ ಚಲಾಯಿಸಿದರು.

ಬದಿಯಡ್ಕ: ಬೆಳ್ಳೂರು ಪಂಚಾಯತಿನ ಜಿಎಚ್‌ಎಸ್‌ ನಾಟೆಕಲ್‌ ಶಾಲೆಗೆ ಮತ ಚಲಾಯಿಸಲು ಆಗಮಿಸಿದ ಹಿರಿಯ ಮಹಿಳೆ. ಹಿರಿಯರಿಗೆ ಸರತಿ ಸಾಲಲ್ಲಿ ನಿಲ್ಲದೆ ನೇರವಾಗಿ ಮತಚಲಾಯಿಸುವ ವ್ಯವಸ್ಥೆಯನ್ನು ಎಲ್ಲಾ ಕಡೆಗಳಲ್ಲೂ ಮಾಡಲಾಗಿದೆ.

ಬದಿಯಡ್ಕ: ಬೆಳಿಂಜ ಶಾಲೆಯ 76ನೇ ಬೂತ್‌ನಲ್ಲಿ ಹಕ್ಕು ಚಲಾಯಿಸಲು ಸಾಲಲ್ಲಿ ನಿಂತು ಕಾಯುತ್ತಿರುವ ಪ್ರಜ್ಞಾವಂತ ಪ್ರಜೆಗಳು.

ಬದಿಯಡ್ಕ: ಮುಂಜಾನೆ ಬೆಳಿಂಜ 74ನೇ ಮತಗಟ್ಟೆಯಲ್ಲಿ ಮಹಿಳೆಯರು ಹಾಗೂ ಪುರುಷರು ಮತ ಚಲಾಯಿಸಲು ಸಾಲಲ್ಲಿ ನಿಂತಿರುವ ದೃಶ್ಯ.

ಬದಿಯಡ್ಕ:ಚೆಂಗಳ ಪಂಚಾಯತಿನ ಮಾವಿನಕಟ್ಟೆ ಶಾಲೆಯಲ್ಲಿ ಮತದಾರರು ಅವಕಾಶಕ್ಕಾಗಿ ಕಾಯುತ್ತಿರುವುದು.

ಬದಿಯಡ್ಕ:ಜಿ.ಎಚ್‌.ಎಸ್‌ ಪೆರಡಾಲ ಶಾಲೆಯಲ್ಲಿ ಮತದಾನ ಮಾಡಲು ಸಾಲಾಗಿ ನಿಂತಿರುವ ಮಹಿಳೆಯರು ಹಾಗೂ ಪುರುಷರು.

ಬದಿಯಡ್ಕ: ಕಾಸರಗೋಡು ಶಾಸಕ ಎನ್‌.ಎ.ನೆಲ್ಲಿಕುನ್ನು ಜಿವಿಎಚ್‌ಎಸ್‌ಎಸ್‌ ನೆಲ್ಲಿಕುನ್ನು ಶಾಲೆಯ 141ನೇ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.

ಬದಿಯಡ್ಕ:ಮೊಗ್ರಾಲ್‌ ಶಾಲಾ ಪರಿಸರದಲ್ಲಿ ಮತ ಚಲಾಯಿಸಲು ಆಗಮಿಸಿದ ತಾಯಿ ಮಗುವಿಗೆ ಐಸ್‌ಕ್ರೀಂ ತಿನ್ನಿಸುತ್ತಿರುವುದು.

ಬದಿಯಡ್ಕ:ಮೊಗ್ರಾಲ್‌ 158ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ಕಾಯುತ್ತಿರುವ ಪುರುಷರು ಹಾಗೂ ಮಹಿಳೆಯರು.

ಬದಿಯಡ್ಕ: ಕಾಸರಗೋಡಿನ ಮತಗಟ್ಟೆಯೊಂದರಲ್ಲಿ ತಮ್ಮ ಗುರುತುಚೀಟಿಯನ್ನು ತೋರಿಸುತ್ತಿರುವ ಮಹಿಳೆಯರು.

ಬದಿಯಡ್ಕ:ಏರುತ್ತಿರುವ ಬಿಸಿಲಿನ ಬೇಗೆಯಿಂದಲಾಗಿ ಹೆಚ್ಚಿನ ಮತದಾರರೂ ಆಟೋ ರಿಕ್ಷಾವನ್ನು ಆಶ್ರಯಿಸಿ ಮತಗಟ್ಟೆಗಳಿಗೆ ಆಗಮಿಸುವುದು ಜಿಲ್ಲೆಯಲ್ಲಿ ಕಂಡುಬರುತ್ತಿತ್ತು.

ಬದಿಯಡ್ಕ:ರಾಜ್ಯ ಕಂದಾಯ ಸಚಿವರಾದ ಇ.ಚಂದ್ರಶೇಖರನ್‌ ತನ್ನ ಕುಟುಂಬದೊಂದಿಗೆ ಕೋಳಿಯಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಸಿದರು.

ಬದಿಯಡ್ಕ:ರಾಜ್ಯ ಕಂದಾಯ ಸಚಿವರಾದ ಇ.ಚಂದ್ರಶೇಖರನ್‌ ತನ್ನ ಕುಟುಂಬದೊಂದಿಗೆ ಕೋಳಿಯಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಸಿದರು.

ಉರಿಬಿಸಿಲಿನ ಬೇಗೆಗೆ ತಡೆಯಲಾಗದ ದಾಹ. ಶಾಲೆಯ ಬಾವಿಯಿಂದ ನೀರು ಎಳೆದು ದಾಹ ತಣಿಸುತ್ತಿರುವ ಮಹಿಳೆ. ಜಿಎಲ್‌ಪಿಎಸ್‌ ಉದ್ಯಾವ‌ನದಲ್ಲಿ ಕಂಡು ಬಂದ ದೃಶ್ಯ.

ಬದಿಯಡ್ಕ; ಜಿಎಚ್‌ಎಸ್‌ಎಸ್‌ ಮಂಗಲ್ಪಾಡಿಯಲ್ಲಿ ಕುಟುಂಬಶ್ರೀ ಉದ್ಯೋಗಸ್ಥರಿಂದ ಊಟದ ವ್ಯವಸ್ಥೆ.

Advertisement

Udayavani is now on Telegram. Click here to join our channel and stay updated with the latest news.

Next