Advertisement

ಅಂಧರ ಟಿ20 ವಿಶ್ವಕಪ್‌: ಭಾರತಕ್ಕೆ 3ನೇ ಜಯ

03:45 AM Feb 03, 2017 | Team Udayavani |

ನವದೆಹಲಿ: ಅಂಧರ ಟಿ20 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡ 3ನೇ ಗೆಲುವು ಸಾಧಿಸಿದೆ. ಭಾರತ ಲೀಗ್‌ ಹಂತದ ತನ್ನ ನಾಲ್ಕನೇ ಪಂದ್ಯದಲ್ಲಿ ಗುರುವಾರ ಇಂಗ್ಲೆಂಡ್‌ ತಂಡವನ್ನು 10 ವಿಕೆಟ್‌ಗಳಿಂದ ಪರಾಭವಗೊಳಿಸಿತು. 

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡ ದೊಡ್ಡದೊಂದು ರನ್‌ ಪೇರಿಸಲಿಲ್ಲ. 19.4 ಓವರ್‌ಗಳಲ್ಲಿ ಕೇವಲ 158 ರನ್‌ಗಳಿಸಿ ಆಲೌಟಾಯಿತು. ಈ ಗುರಿ ಬೆನ್ನಟ್ಟಿದ ಭಾರತ ಅಬ್ಬರದ ಆಟ ಪ್ರದರ್ಶಿಸಿತು. ಆರಂಭಿಕರಾದ ಸುಖ್‌ರಾಮ್‌ ಮಾಂಜಿ (ಅಜೇಯ 67 ರನ್‌) ಮತ್ತು ಗಣೇಶ್‌ ಬಾಬುಬಾಯಿ (ಅಜೇಯ 78 ರನ್‌) ಗಳಿಸಿದರು.

ಪರಿಣಾಮ ಭಾರತ ಯಾವುದೇ ವಿಕೆಟ್‌ ಕಳೆದುಕೊಳ್ಳದೆ 11 ಓವರ್‌ಗಳಲ್ಲಿ 159 ರನ್‌ಗಳಿಸಿ ಗೆಲುವು ಸಾಧಿಸಿತು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ 19.4 ಓವರ್‌ಗಳಲ್ಲಿ 158/10 ( ಎಡ್ವರ್ಡ್‌ ಜೇಮ್ಸ್‌ 57, ಜಸ್ಟಿಂಗ್‌ 24,ಕೇತನ್‌ ಪಟೇಲ್‌ 40ಕ್ಕೆ2), ಭಾರತ 11 ಓವರ್‌ಗಳಲ್ಲಿ 159/0 (ಸುಖ್‌ರಾಮ್‌ ಮಾಂಜಿ ಅಜೇಯ 67,ಗಣೇಶ್‌ ಬಾಬುಬಾಯಿ ಅಜೇಯ 78).

ವಿಶ್ವ ಅಂಧರ ಕ್ರಿಕೆಟ್‌ ಸಮಿತಿಗೆ
ಸಮರ್ಥನಂ ಮಹಾಂತೇಶ್‌ ಅಧ್ಯಕ್ಷ
ಬೆಂಗಳೂರು:
ಭಾರತ ಅಂಧರ ಕ್ರಿಕೆಟ್‌ ಮಂಡಳಿ (ಸಿಎಬಿಐ) ಅಧ್ಯಕ್ಷ ಜಿ.ಕೆ.ಮಹಾಂತೇಶ್‌ ಡಬ್ಲೂéಬಿಸಿಸಿ(ವಿಶ್ವ ಅಂಧರ ಕ್ರಿಕೆಟ್‌ ಕೌನ್ಸಿಲ್‌)ಗೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

Advertisement

ಜ.29ರಂದು ನಡೆದ ಅಂಧರ ಕ್ರಿಕೆಟ್‌ ವಾರ್ಷಿಕ ಸಭೆಯಲ್ಲಿ ವಿಶ್ವ ಅಂಧರ ಕ್ರಿಕೆಟ್‌ನ ಪದಾಧಿಕಾರಿಗಳು ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಿದರು. ಮಹಾಂತೇಶ್‌ ಹಲವಾರು ವರ್ಷಗಳಿಂದ ಸಮರ್ಥನಂ ಟ್ರಸ್ಟ್‌ ಜತೆಗೆ ಅಂಧರ ಕ್ರಿಕೆಟ್‌ಗೆ ಪ್ರೋತ್ಸಾಹ ನೀಡಿಕೊಂಡು ಬಂದಿದ್ದಾರೆ. ಸಿಎಬಿಐ ಅನ್ನು ದೊಡ್ಡ ಮಟ್ಟದಲ್ಲಿ ಕಟ್ಟಿ ಬೆಳೆಸಿದ ಕೀರ್ತಿ ಮಹಾಂತೇಶ್‌ಗೆ ಸಲ್ಲುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next