Advertisement

ಬಾಗ್ರಾಮ್ ವಾಯುನೆಲೆಯ ಬಳಿ ಬಾಂಬ್ ಸ್ಪೋಟ: 30 ಜನರಿಗೆ ಗಾಯ

10:03 AM Dec 12, 2019 | Team Udayavani |

ಪರ್ವಾನ್: ಅಫ್ಘಾನಿಸ್ಥಾನದ ಬಾಗ್ರಾಮ್ ವಾಯುನೆಲೆಯಲ್ಲಿ ಬುಧವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸುಮಾರು 30 ಜನರು ಗಾಯಗೊಂಡಿದ್ಧಾರೆ.

Advertisement

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತ್ಮಾಹುತಿ ಕಾರಿನಿಂದಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಮತ್ತೊಂದು ವರದಿಯ ಪ್ರಕಾರ ವಾಯುನೆಲೆಗೆ ಸಮೀಪದ ಇನ್ನೂ ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಗೆ ದಾಳಿ ಮಾಡಲಾಗಿದೆ ಎಂದಿದೆ.

ವಾಯುನೆಲೆಗೆ ಹೋಗುವ ಎಲ್ಲಾ ರಸ್ತೆಗಳನ್ನು ಮುಚ್ಚಲಾಗಿದ್ದು, ಬಿಗು ಭದ್ರತೆ ಒದಗಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next