Advertisement

ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್‌: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು

01:02 PM Jan 21, 2021 | Team Udayavani |

ಬೆಂಗಳೂರು: ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಇಬ್ಬರು ಸ್ನೇಹಿತರ ವಿರುದ್ಧ ಯುವತಿಯೊಬ್ಬರು ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

19 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಈಕೆಯ ಸ್ನೇಹಿತರಾದ ದೇವಸಂದ್ರ ನಿವಾಸಿಗಳಾದ ಬ್ರಿಜ್‌ ಭೂಷಣ್‌ ಯಾದವ್‌ (21) ಮತ್ತು ವಿವೇಕ್‌ ರೆಡ್ಡಿ (20) ಎಂಬವರ ವಿರುದ್ಧ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಕೆ.ಆರ್‌.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ಆರೋಪಿ ಬ್ರಿಜ್ ಭೂಷಣ್‌ ಪರಿಚಯವಾಗಿತ್ತು. ಬಳಿಕ ಇಬ್ಬರು ಸ್ನೇಹಿತರಾಗಿದ್ದರು. ಆರೋಪಿ ಪದೇ ಪದೆ ಸಂತ್ರಸ್ತೆಯ ಮನೆಗೆ ಬರುತ್ತಿದ್ದ. ಅನಂತರ ಯುವತಿ ಆರೋಪಿಯಿಂದ ಅಂತರ ಕಾಯ್ದುಕೊಂಡು, ಮಾತನಾಡುವುದನ್ನು ಬಿಟ್ಟಿದ್ದರು.

ಇದನ್ನೂ ಓದಿ:ನಕಲಿ ವೋಟರ್‌ ಐಡಿ ಪತ್ತೆ ಪ್ರಕರಣ: ಶಾಸಕ ಮುನಿರತ್ನಗೆ ರಿಲೀಫ್

ಈ ನಡುವೆ ಆರೋಪಿ 2018ರಲ್ಲಿ “ನನ್ನ ಬಳಿ ನಿನ್ನ ಬೆತ್ತಲೆ ಫೋಟೋಗಳಿವೆ. ಹಣ, ಚಿನ್ನಾಭರಣ ಕೊಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋಗಳನ್ನು ಹಾಕುತ್ತೇನೆ’ ಎಂದು ಬೆದರಿಕೆಯೊಡುತ್ತಿದ್ದ. ಅದರಿಂದ ಆತಂಕಗೊಂಡ ಯುವತಿ ಮನೆಯಲ್ಲಿದ್ದ 218 ಗ್ರಾಂ ಚಿನ್ನಾಭರಣ, 75 ಸಾವಿರ ರೂ. ನಗದು ಕೊಟ್ಟಿದ್ದರು.

Advertisement

ಮತ್ತೂಬ್ಬ ಸ್ನೇಹಿತನಿಂದಲೂ ಹಣಕ್ಕೆ ಬೇಡಿಕೆ: ಯುವತಿಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದ ಬ್ರಿಜ್ ಭೂಷಣ್‌ ಸ್ನೇಹಿತ ವಿವೇಕ್‌ ರೆಡ್ಡಿ 2019ರಲ್ಲಿ ಫೇಸ್ ‌ಬುಕ್‌ನಲ್ಲಿ ಯುವತಿಯೊಂದಿಗೆ ಚಾಟ್‌ ಮಾಡುತ್ತಿದ್ದ. ಬಳಿಕ ರಾಚೇನಹಳ್ಳಿ ಕೆರೆ ಬಳಿ ಕರೆಸಿಕೊಂಡು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ. ಒಮ್ಮೆ ಕರೆ ಮಾಡಿ “ನಿನ್ನ ಖಾಸಗಿ ಫೋಟೋ’ ಇದೆ ಎಂದು ಬೆದರಿಸಿ, ಹಣ, ಒಡವೆ ಕೊಡದಿದ್ದರೆ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ ಲೋಡ್‌ ಮಾಡುತ್ತೇನೆ ಎಂದು ಬೆದರಿಸಿದ್ದ.

ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿಗೆ ಜಾಮೀನು ನೀಡಿದ ಸುಪ್ರೀಂ

ಅದರಿಂದ ಹೆದರಿದ ಸಂತ್ರಸ್ತೆ, ತನ್ನ ಮಾವನ ಪತ್ನಿಯ ಮಾಂಗಲ್ಯ ಸರ ತಂದು ಕೊಟ್ಟಿದ್ದರು. ಆದರೂ ಆರೋಪಿಗಳು ಪದೇ ಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಅದರಿಂದ ಬೇಸತ್ತ ಸಂತ್ರಸ್ತೆ, ಕುಟುಂಬಸ್ಥರ ಜತೆ ಬಂದು ದೂರು ನೀಡಿದ್ದಾರೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next