Advertisement

ಮಿಲಿಟರಿ ಹೆಲಿಕಾಪ್ಟರ್ ಪತನ: 14 ಮಂದಿ ಸಾವು

08:28 AM Jul 16, 2022 | Team Udayavani |

ಸಿನಾಲೋವಾ: ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು 14 ಮಂದಿ ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡ ಘಟನೆ ಮೆಕ್ಸಿಕೋದ ಸಿನಾಲೋವಾದಲ್ಲಿ ನಡೆದಿದೆ.

Advertisement

ಅಪಘಾತದ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ಆದರೆ ಈ ಘಟನೆಗೂ ಶುಕ್ರವಾರ ಸಿನಾಲೋವಾದ ಮತ್ತೊಂದು ಭಾಗದಲ್ಲಿ ಡ್ರಗ್ ಲಾರ್ಡ್ ರಾಫೆಲ್ ಕ್ಯಾರೊ ಕ್ವಿಂಟೆರೊನನ್ನು ಬಂಧಿಸಿದ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.

1985 ರಲ್ಲಿ ಆಂಟಿ-ನಾರ್ಕೋಟಿಕ್ ಏಜೆಂಟ್‌ನ ಕೊಲೆ ಪ್ರಕರಣದಲ್ಲಿ  ಶಿಕ್ಷೆಗೊಳಗಾಗಿದ್ದ ಕುಖ್ಯಾತ ಡ್ರಗ್ ಲಾರ್ಡ್ ರಾಫೆಲ್ ಕ್ಯಾರೊ ಕ್ವಿಂಟೆರೊನನ್ನು ನೌಕಾಪಡೆಯು ಶುಕ್ರವಾರ ಬಂಧಿಸಿತ್ತು.

1980 ರ ದಶಕದಲ್ಲಿ ಲ್ಯಾಟಿನ್ ಅಮೆರಿಕದ ಅತ್ಯಂತ ಶಕ್ತಿಶಾಲಿ ಮಾದಕವಸ್ತು ಕಳ್ಳಸಾಗಣೆ ಸಂಸ್ಥೆಗಳಲ್ಲಿ ಒಂದಾದ ಗ್ವಾಡಲಜರಾ ಕಾರ್ಟೆಲ್‌ನ ಸಹ-ಸಂಸ್ಥಾಪಕನಾಗಿದ್ದ ರಾಫೆಲ್ ಕ್ಯಾರೋ ಕ್ವಿಂಟೊರೊ ಅಮೆರಿಕದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next