Advertisement

ಚಿಂತಾಮಣಿ: ಇಬ್ಬರಲ್ಲಿ ಬ್ಲಾಕ್‌ ಫಂಗಸ್‌ ಪತ್ತೆ

09:28 PM May 21, 2021 | Team Udayavani |

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ: ಜಿಲ್ಲೆಯ ಚಿಂತಾಮಣಿತಾಲೂಕಿನಲ್ಲಿ ಇಬ್ಬರಿಗೆ ಬ್ಲಾಕ್‌ ಫಂಗಸ್‌ ಲಕ್ಷಣಗಳುಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ಚಿಕಿತ್ಸೆಗೆಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾತಿಳಿಸಿದರು.

Advertisement

ಜಿಲ್ಲೆಯ ಶಿಡ್ಲಘಟ್ಟ ನಗರದ ತಾಲೂಕು ಕಚೇರಿಯಸಭಾಂಗಣದಲ್ಲಿ ಕೋವಿಡ್‌-19 ನಿಯಂತ್ರಣಕ್ಕೆಸಂಬಂಧಿಸಿದಂತೆ ಕೈಗೊಂಡ ಕ್ರಮಗಳನ್ನು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲಿಸಿ ಮಾತನಾಡಿದಅವರು, ಜಿಲ್ಲೆಯ ಬ್ಲಾಕ್‌ ಫಂಗಸ್‌ ಲಕ್ಷಣಗಳು ಕಂಡುಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆಸೂಚನೆ ನೀಡಲಾಗಿದೆ ಎಂದು ವಿವರಿಸಿದರು.ಸೋಂಕು ಮುಕ್ತಕ್ಕೆ ಸಹಕರಿಸಿ: ಜಿಲ್ಲೆಯಲ್ಲಿ ಕೊರೊನಾಸೋಂಕು ನಿಯಂತ್ರಿಸಲು ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಜನತಾ ಕರ್ಫ್ಯೂ ನಂತರಇಂದಿನಿಂದ ಜಿಲ್ಲಾದ್ಯಂತ ಸಂಪೂರ್ಣವಾಗಿ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ.

ಜಿಲ್ಲೆಯ ಜನರಿಗೆಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದ ಜಿಲ್ಲಾಧಿಕಾರಿಗಳು ಸರ್ಕಾರದ ಮಾರ್ಗಸೂಚಿಗಳನ್ನುಕಡ್ಡಾಯವಾಗಿ ಪಾಲಿಸಿ ಮನೆಯಲ್ಲಿದ್ದು, ಜಿಲ್ಲೆಯನ್ನುಸೋಂಕು ಮುಕ್ತ ಮಾಡಲು ಸಹಕರಿಸಬೇಕೆಂದುಮನವಿ ಮಾಡಿದರು.

ಹೋಂಐಸೋಲೇಷನ್‌ ತಪಾಸಣೆ: ಶಿಡ್ಲಘಟ್ಟತಾಲೂಕಿನಲ್ಲಿ 900ಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಆಪೈಕಿ 600ಕ್ಕೂ ಹೆಚ್ಚು ಮಂದಿ ಹೋಂಐಸೋಲೇಷನ್‌ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಅಷ್ಟುಜನರಿಗೆ ಪ್ರತ್ಯೇಕವಾಗಿ ಶೌಚಾಲಯ, ಮತ್ತಿತರೆಸೌಲಭ್ಯಗಳ ಕೊರತೆಯಿದೆ ಎಂಬ ಅನುಮಾನಕಾಡುತ್ತಿದೆ. ಹೀಗಾಗಿ ರ್‍ಯಾಂಡಮ್‌ ಆಗಿ ಸೋಂಕಿತರಮನೆಗಳ ಸ್ಥಿತಿಗತಿ ಪರಿಶೀಲಿಸಿ, ಸೌಲಭ್ಯವಿದ್ದರೇಹೋಂಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯಲಿ,ಇಲ್ಲದಿದ್ದರೆ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿಸ್ಥಳಾಂತರಿಸಿ, ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದು ಹೇಳಿದರು.

ಪ್ರತಿ ತಾಲೂಕಿಗೆ ಎರಡು ಬಸ್‌ ಸೌಲಭ್ಯ: ನಗರ ಮತ್ತುಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕಿತರಿಗೆಸೂಕ್ತ ರೀತಿಯ ಚಿಕಿತ್ಸೆ ಒದಗಿಸುವ ಉದ್ದೇಶದಿಂದಜಿಲ್ಲಾಡಳಿತ ಈಗಾಗಲೇ 10 ಸಾವಿರ ಬೆಡ್‌ಗಳ ವ್ಯವಸ್ಥೆಮಾಡಿಕೊಂಡಿದ್ದು, ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆಪಡೆಯುತ್ತಿರುವ ಸೋಂಕಿತರಿಗೆ ಮನೆಯಲ್ಲಿ ಪ್ರತ್ಯೇಕಕೊಠಡಿ, ಶೌಚಾಲಯದ ವ್ಯವಸ್ಥೆ ಇರುವುದಿಲ್ಲವೆಂದುಖಾತ್ರಿ ಆದರೆ, ತಕ್ಷಣ ಅವರನ್ನು ಕೋವಿಡ್‌ ಕೇರ್‌ಸೆಂಟರ್‌ಗಳಿಗೆ ಸ್ಥಳಾಂತರಿಸಲು ಪ್ರತಿಯೊಂದುತಾಲೂಕು ಕೇಂದ್ರಗಳಿಗೆ ತಲಾ 2 ಬಸ್‌ಗಳ ಸೌಲಭ್ಯಒದಗಿಸಲಾಗಿದೆ.

Advertisement

ಆದಿಚುಂಚನಗಿರಿ ಮಠದ 6 ಹಾಗೂಜಿಲ್ಲಾ ಉಸ್ತುವಾರಿ ಸಚಿವರು ಟ್ರಸ್ಟ್‌ ಮೂಲಕ 6 ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿಸಿದರು.ಪ್ರಾಥಮಿಕ ತುರ್ತು ವಾಹನ: ಜಿಲ್ಲೆಯಲ್ಲಿಕೊರೊನಾಸೋಂಕಿತರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲಿಯಾವುದೇ ರೀತಿಯ ತೊಂದರೆ ಆಗಬಾರದೆಂದುಈಗಾಗಲೇ ಪ್ರತಿ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿತುರ್ತು ವಾಹನಗಳ ಸೌಲಭ್ಯ ಒದಗಿಸಲಾಗಿದೆ. ಈಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಕೊರೊನಾ ಸೋಂಕಿತರಿಗೆ ಮೆಡಿಕಲ್‌ಕಿಟ್‌ ಅಭಾವಆಗದಂತೆ ಎಚ್ಚರಿವಹಿಸಲು ಕಟ್ಟುನಿಟ್ಟಿನಿಂದನಿರ್ದೇಶನ ನೀಡಲಾಗಿದೆ. 20 ದಿನಗಳಿಗೆ ಆಗುವಔಷಧ ಮೀಸಲಿಡಲು ತಾಕೀತು ಮಾಡಿ, ಸ್ಥಳೀಯಮಟ್ಟದಲ್ಲಿ ಅಗತ್ಯ ಔಷಧ ಖರೀದಿಸಲು ಅವಕಾಶಕಲ್ಪಿಸಲಾಗಿದೆ ಎಂದು ಹೇಳಿದರು.ಈ ವೇಳೆ ಎಸಿ ರಘುನಂದನ್‌, ತಾಲೂಕು ನೋಡಲ್‌ಅಧಿಕಾರಿ ಮೊಹ್ಮದ್‌ ಅತೀಖ್‌ ಉಲ್ಲಾ ಶರೀಫ್‌, ಶಿಡ್ಲಘಟ್ಟ ತಹಶೀಲ್ದಾರ್‌ ಬಿ.ಎಸ್‌.ರಾಜೀವ್‌, ತಾಪಂ ಇಒಚಂದ್ರಕಾಂತ್‌, ನಗರಸಭೆ ಪೌರಾಯುಕ್ತ ಶ್ರೀನಿವಾಸ್‌,ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಡಾ.ವಾಣಿ, ಶಿಡ್ಲಘಟ್ಟ ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ಮುರಳಿ ಉಪಸ್ಥಿತರಿದ ªರು.

Advertisement

Udayavani is now on Telegram. Click here to join our channel and stay updated with the latest news.

Next