Advertisement

ಏಳು ವರ್ಷದ ಬಾಲಕನಿಗೆ ಬ್ಲ್ಯಾಕ್‌ ಫಂಗಸ್‌

04:40 PM Jun 06, 2021 | Team Udayavani |

ಬೆಂಗಳೂರು: ಹಾಸನ ಮೂಲದ ಏಳು ವರ್ಷದ ಬಾಲಕನಿಗೆ ಬ್ಲ್ಯಾಕ್‌ ಫ‌ಂಗಸ್‌ ಸೋಂಕು ತಗುಲಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಾ ಗಿದ್ದು, ಮೊದಲು ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಬಳಿಕ ಮಗುವಿಗೆ ಹರಡಿದೆ. ಈ ವೇಳೆ ಮಗುವಿಗೆ ಬ್ಲ್ಯಾಕ್‌ ಫ‌ಂಗಸ್‌ ಸೋಂಕು ಉಂಟಾಗಿದೆ.

ಈಗಲೂ ಸೋಂಕು ಪಾಸಿಟಿವ್‌ ಇದ್ದು ಕೊರೋನಾ ವಾರ್ಡ್‌ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಕಣ್ಣಿಗೆ ಈಗಾಗಲೇ ಸೋಂಕು ವ್ಯಾಪಿಸಿದೆ. ನಿಮ್ಹಾನ್ಸ್‌ ಹಾಗೂ ವಿಕ್ಟೋರಿಯಾ ಎರಡೂ ಕಡೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next