Advertisement

B.L ಸಂತೋಷ ಲಿಂಗಾಯತ ಮತ ಬೇಡ ಎಂದಿಲ್ಲ: ಜೋಶಿ

09:10 PM May 06, 2023 | Team Udayavani |

ಹುಬ್ಬಳ್ಳಿ: ಬಿ.ಎಲ್‌.ಸಂತೋಷ ಲಿಂಗಾಯತರ ಮತಗಳು ಬೇಡ ಹೇಳಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನುಮಂತನಿಂದ ಲಂಕೆ ಹೇಗೆ ಸುಟ್ಟು ಬೂದಿಯಾಗಿದೆಯೋ ಅದೇ ರೀತಿ ಕಾಂಗ್ರೆಸ್‌ನ ರಾಜಕೀಯ ಭವಿಷ್ಯ ಬಜರಂಗಬಲಿಯ ಆಕ್ರೋಶದಲ್ಲಿ ಸುಟ್ಟು ಬಲಿಯಾಗಲಿದೆ. ಬಜರಂಗದಳ ನಿಷೇಧದ ವಿಷಯದಲ್ಲಿ ಕಾಂಗ್ರೆಸ್‌ ನಾಯಕರು ಗೊಂದಲದಲ್ಲಿ ಸಿಲುಕಿದ್ದಾರೆ. ಒಂದು ಕಡೆ ವೀರಪ್ಪ ಮೊಯ್ಲಿ ಬಜರಂಗದಳ ನಿಷೇಧಿಸುವುದಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ಸುರ್ಜೇವಾಲ, ಡಿ.ಕೆ. ಶಿವಕುಮಾರ, ಸಿದ್ದರಾಮಯ್ಯ ನಿಷೇಧಿಸುತ್ತೇವೆ ಎನ್ನುತ್ತಿದ್ದಾರೆ. ಮೊದಲು ತಮ್ಮ ಪಕ್ಷದ ನಿಲುವು ಸ್ಪಷ್ಟಪಡಿಸಲಿ. ಅವರ ಪಕ್ಷದಲ್ಲಿ ಬಜರಂಗದಳದ ಬಲ ಹಾಗೂ ಬಜರಂಗಬಲಿಯ ಭಯ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳಲಿ ಎಂದರು.

Advertisement

ಮಾಜಿ ಸಿಎಂ ಜಗದೀಶ ಶೆಟ್ಟರ ಬಜರಂಗದಳ ನಿಷೇಧದ ಕುರಿತು ಅವರ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಲಿ. ಅದನ್ನು ನಿಷೇಧಿಸುವ ಕುರಿತು ಅವರ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಲಿ. ಗೋವಾದಲ್ಲಿನ ವ್ಯವಸ್ಥೆ ನೋಡಿ ಅಲ್ಲಿಯ ಸರ್ಕಾರ ಶ್ರೀರಾಮಸೇನೆ ನಿಷೇಧಿಸಿದೆ. ಬಜರಂಗದಳ ನಮ್ಮ ಸಂಘ-ಪರಿವಾರದ ಅಂಗಸಂಸ್ಥೆಯಾಗಿದ್ದು, ಯಾವುದೇ ಪ್ರಚೋದನೆ, ಕೋಮುಗಲಭೆ ಸೃಷ್ಟಿಸುವ ಕೆಲಸ ಮಾಡಿಲ್ಲ. ಆದರೆ, ಕಾಂಗ್ರೆಸ್‌ ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿರುವ ಪಿಎಫ್‌ಐ ಜತೆ ಬಜರಂಗದಳ ಹೋಲಿಕೆ ಮಾಡುತ್ತಿದೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next