Advertisement

Chennapattana: ಜೆಡಿಎಸ್‌ ಚಿಹ್ನೆಯಡಿ ಬಿಜೆಪಿಯ ಯೋಗೇಶ್ವರ್‌ ಸ್ಪರ್ಧೆ?

11:35 AM Jun 20, 2024 | Team Udayavani |

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧಿಸಲು ಡಿಸಿಎಂ ಡಿ.ಕೆ.ಶಿವಕುಮಾರ್‌ ಉತ್ಸಾಹ ತೋರುತ್ತಿದ್ದಂತೆ ಎನ್‌ ಡಿಎ ಮೈತ್ರಿಕೂಟದಿಂದಲೂ ಇಂತಹದ್ದೇ ಪ್ರಯೋಗಕ್ಕೆ ಚರ್ಚೆ ಪ್ರಾರಂಭವಾಗಿದೆ. ಡಿಕೆ ಸೋದರರ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಜೆಡಿಎಸ್‌ ಚಿಹ್ನೆಯ ಮೇಲೆ ಕಣಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ಈ ಮಾತು ಬಿಜೆಪಿ ವಲಯದಿಂದಲೂ ಕೇಳಿ ಬರುತ್ತಿದೆ.

Advertisement

ಸಮರಕ್ಕೆ ಸಿದ್ಧ ಎಂದು ಶಿವಕುಮಾರ್‌ ಶಂಖಾನಾದ ಮಾಡಿದ್ದು ಮೈತ್ರಿ ಪಕ್ಷದ ಅನುಮಾನಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಅಬ್ಬರ ಸೃಷ್ಟಿಸುವ ಏಕೈಕ ಕಾರಣಕ್ಕೆ ಅವರು ಈ ತಂತ್ರ ಹೆಣೆದಿದ್ದು ಅಂತಿಮವಾಗಿ ಸೋದರನನ್ನು ಕಣಕ್ಕೆ ಇಳಿಸುವ ಸಾಧ್ಯತೆ ಹೆಚ್ಚೆಂಬುದು ಜೆಡಿಎಸ್‌ ಹಾಗೂ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್‌ ಮೂಲಗಳ ಪ್ರಕಾರ, ಈ ಬಾರಿ ಎದುರಾಗಿರುವುದು ಎಲ್ಲ ಉಪಚುನಾವಣೆಯಂಥಲ್ಲ. ಕೇಂದ್ರ ಸಚಿವರಾಗಿರುವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇದು ಡಿ.ಕೆ.ಶಿವಕುಮಾರ್‌ಗೆ ಇರುವಷ್ಟೇ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸೂಪರ್‌ ಫಾಸ್ಟ್‌ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ. ಆದಾಗಿಯೂ ಚುನಾವಣಾ ಕಣಕ್ಕೆ ಇಳಿಯುವುದಕ್ಕೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಉತ್ಸುಕರಾಗಿದ್ದಾರೆ.

ಜೂನ್‌ 2026ರ ವರೆಗೂ ಸಿ.ಪಿ. ಯೋಗೇಶ್ವರ ಅವರ ವಿಧಾನ ಪರಿಷತ್‌ ಸದಸ್ಯತ್ವ ಇದೆ. ಒಂದೊಮ್ಮೆ ಅವರು ಜೆಡಿಎಸ್‌ ಚಿಹ್ನೆಯ ಮೇಲೆ ಸ್ಪರ್ಧಿಸ ಬೇಕೆಂದು ಮೈತ್ರಿಕೂಟ ನಿರ್ಧರಿಸಿದರೂ ಯಾವುದೇ ತಾಂತ್ರಿಕ ಅಡಚಣೆ ಉಂಟಾಗುವುದಿಲ್ಲ. ಸಿನಿಮಾ ಕ್ಷೇತ್ರದಿಂದ ಪರಿಷತ್‌ ಗೆ ನಾಮ ನಿರ್ದೇಶನ ಗೊಂಡಿ ರುವುದರಿಂದ ಅವರಿಗೆ ಪಕ್ಷಾಂತರದ ಸಮಸ್ಯೆ ಕಾಡು ವುದಿಲ್ಲ, ರಾಜೀನಾಮೆ ಕೊಟ್ಟೇ ಸ್ಪರ್ಧಿಸಬೇಕೆಂಬ ಅನಿವಾರ್ಯತೆಯೂ ಸೃಷ್ಟಿ ಯಾಗುವುದಿಲ್ಲ. ಆದರೆ ಬಿಜೆಪಿ ಚಿಹ್ನೆಯಡಿಯಲ್ಲಿಯೇ ಸ್ಪರ್ಧಿ ಸುವ ಬಯಕೆಯನ್ನು ಅವರು ಹೊಂದಿ ದ್ದಾರೆಂದು ಹೇಳಲಾಗುತ್ತಿದೆ. ಇದೆ ಲ್ಲದರ ಮಧ್ಯೆ ನಿಖೀಲ್‌ ಕುಮಾರಸ್ವಾಮಿ ಕೂಡಾ ಸ್ಪರ್ಧೆಗೆ ಉತ್ಸುಕರಾಗಿದ್ದು ಕುಮಾರ ಸ್ವಾಮಿ ಒಪ್ಪಿಗೆ ಸೂಚಿಸಿಲ್ಲ. ಇವರಿಬ್ಬರನ್ನು ಹೊರತುಪಡಿಸಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಡಿಕೆ ಸೋದರರಿಗೆ ಪೈಪೋಟಿ ಲೆಕ್ಕಾಚಾರ ಕುಮಾರಸ್ವಾಮಿಯವರದು.
ಜೆಡಿಎಸ್‌ ಮುಕ್ತವೇ?: ರಾಮನಗರ ಡಿ. ಕೆ.ಶಿವಕುಮಾರ್‌ ಅವರ ಜನ್ಮ ಭೂಮಿಯಾದರೆ, ಕುಮಾರಸ್ವಾಮಿಯವರ ಕರ್ಮಭೂಮಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಗಡಿ, ಕನಕಪುರ, ರಾಮನಗರದಲ್ಲಿ ಕಾಂಗ್ರೆಸ್‌ ಗೆದ್ದರೆ, ಚನ್ನಪಟ್ಟಣ ಮಾತ್ರ ಜೆಡಿಎಸ್‌ ಪಾಲಾಗಿತ್ತು. ಈಗ ಶತಪ್ರಯತ್ನದ ಮೂಲಕ ಚನ್ನಪಟ್ಟಣವನ್ನೂ ಗೆದ್ದು ರಾಮ ನಗರವನ್ನು “ಜೆಡಿಎಸ್‌ ಮುಕ್ತ’ ಗೊಳಿಸಬೇಕೆಂಬ ಹಠ ಡಿಕೆ ಸೋದರರದ್ದು. ಹೀಗಾಗಿ ದೇವೇಗೌಡ ಕುಟುಂಬ – ಡಿಕೆ ಸೋದರರ ಜಿದ್ದಾಜಿದ್ದಿಗೆ ಇದು ವೇದಿಕೆಯಾಗುವುದು ನಿಶ್ಚಿತ.

ಜ್ಯೋತಿಷಿ ಸಲಹೆ ಮೇರೆಗೆ ಚನಪಟ್ಟಣದಿಂದ ಡಿಕೆಶಿ ಸ್ಪರ್ಧೆ?  

Advertisement

ಈಗಿರುವ ಚರ್ಚೆಯ ಪ್ರಕಾರ ಜ್ಯೋತಿಷಿಯೊಬ್ಬರ ಸಲಹೆ ಪ್ರಕಾರ ಶಿವಕುಮಾರ್‌ ಚನ್ನಪಟ್ಟಣದಿಂದ ಸ್ಪರ್ಧೆಗೆ ಇಳಿದಿದ್ದಾರೆ ಎನ್ನಲಾಗಿದೆ. ಇದೊಂದು ತಂತ್ರಗಾರಿಕೆಯ ಆಟ. ಏಕೆಂದರೆ ಚನ್ನಪಟ್ಟಣದ ಜಾತಿ ಸಮೀಕರಣ ಶಿವಕುಮಾರ್‌ಗೆ ಸ್ಪಷ್ಟವಾಗಿ ಗೊತ್ತು. ಇಲ್ಲಿ ಸುಮಾರು 25 ಸಾವಿರ ಕುರುಬರು, 30 ಸಾವಿರ ಮುಸ್ಲಿಮರು ಹಾಗೂ 25 ಸಾವಿರ ದಲಿತ ಸಮುದಾಯದ ಮತಗಳಿವೆ. ಸಿದ್ದರಾಮಯ್ಯ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಪ್ರಯತ್ನಕ್ಕೆ ಈ “ಅಹಿಂದ’ ಮತ ಕ್ರೋಡೀಕರಣ ಹೇಗೆ ಆಗಲಿದೆ ಎಂಬುದು ಗೊತ್ತಿಲ್ಲ. ಆಗ ಶಿವಕುಮಾರ್‌ ಪಾಲಿಗೆ ಸ್ಪರ್ಧೆ ದುಬಾರಿ ಆಗಲೂಬಹುದೆಂಬ ವಾದವೂ ಇದೆ. ಖ್ಯಾತ ಜ್ಯೋತಿಷಿಯೊಬ್ಬರ ಜತೆಗೆ ಡಿ.ಕೆ.ಸುರೇಶ್‌ ಕೂಡ 2 ದಿನಗಳ ಹಿಂದೆ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿರುವುದರಿಂದ ಸುರೇಶ್‌ ಸ್ಪರ್ಧೆ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

 

-ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next