Advertisement
ಸೋಮವಾರ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ನಾಮಪತ್ರ ಸಲ್ಲಿಸುವ ಮುನ್ನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಂದಿಗ್ಧ ಸ್ಥಿತಿಯಲ್ಲಿ ಸಮ್ಮಿಶ್ರ ಸರಕಾರವನ್ನು ಒಪ್ಪಿಕೊಂಡಿದ್ದೇವೆ. ಕೋಮುವಾದಿ ಪಕ್ಷ ಸೋಲಿಸಲು ಜೆಡಿಎಸ್- ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿವೆ. ಹೊಂದಾಣಿಕೆಯ ಹಿಂದೆ ಅನೇಕ ರಹಸ್ಯಗಳಿವೆ, ಸತ್ವಗಳಿವೆ. ಸುಳ್ಳು ಹೇಳುವ ಪಕ್ಷಕ್ಕೆ ಮತ ಹಾಕಕೂಡದು ಎಂದು ಡಾ| ಜಯಮಾಲಾ ಕರೆ ನೀಡಿದರು.
Related Articles
ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಎರಡೂ ಪಕ್ಷದವರು ಸಹಕಾರ ಕೊಡಬೇಕು. ಬಂಗಾರಪ್ಪನವರ ಅಭಿಮಾನಿಗಳು ಈ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಅವರೂ ನಿಮಗೆ ಸಹಕಾರ ನೀಡುತ್ತಾರೆ. ನಾವಿಬ್ಬರೂ ಜತೆಯಾಗಿ ಸಂಸತ್ತನ್ನು ಪ್ರವೇಶಿಸಲು ಮತದಾರರು ಆಶೀರ್ವದಿಸಬೇಕು ಎಂದರು.
Advertisement
ಹಿರಿಯ ಮುಖಂಡರಾದ ಅಶೋಕ ಕುಮಾರ್ ಕೊಡವೂರು, ಡಾ| ವಿಜಯಕುಮಾರ್, ಯೋಗೀಶ ಶೆಟ್ಟಿ, ಜಯಕುಮಾರ ಪರ್ಕಳ, ಸಂದೀಪ್, ರಾಜೇಗೌಡ, ಯು.ಆರ್. ಸಭಾಪತಿ, ಕೆ. ಗೋಪಾಲ ಭಂಡಾರಿ, ಶ್ರೀನಿವಾಸ, ಜನಾರ್ದನ ತೋನ್ಸೆ, ಎಂ.ಪಿ. ಮೊಯ್ದಿನಬ್ಬ, ಪ್ರಖ್ಯಾತ ಶೆಟ್ಟಿ, ನರಸಿಂಹಮೂರ್ತಿ, ಸಚಿನ್ ಮೀಗಾ, ಗುಲಾಂ ಅಹಮದ್, ಕಿಶನ್ ಹೆಗ್ಡೆ, ವಿಶ್ವಾಸ್ ಅಮೀನ್, ರಾಜು ಪೂಜಾರಿ, ಜನಾರ್ದನ ಭಂಡಾರ್‌ಕರ್ ಇದ್ದರು. ಎಂ.ಎ. ಗಫೂರ್ ಸ್ವಾಗತಿಸಿದರು.