ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಚಿಕ್ಕಮಗಳೂರಿನಲ್ಲಿ ಬಂಡಾಯ ಎದ್ದಿದೆ. ಸಿ.ಟಿ ರವಿ ಬದಲು ತನಗೆ ಟಿಕೆಟ್ ನೀಡಬೇಕು ಎಂದು ಚಿಕ್ಕಮಗಳೂರು ನಗರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ತಮ್ಮಯ್ಯ ಆಗ್ರಹಿಸಿದ್ದಾರೆ.
15 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರನಾಗಿರುವ ತಮ್ಮಯ್ಯ ಅವರು ತನಗೆ ಟಿಕೆಟ್ ಕೊಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ನಾವು ಜನರ ಧ್ವನಿ ಎತ್ತಿದಾಗ ಹೆದರಿ ಮಹಾದಾಯಿ ಡಿಪಿಆರ್ ಗೆ ಅನುಮತಿ: ಡಿ.ಕೆ.ಶಿವಕುಮಾರ್
ನಾಲ್ಕು ಬಾರಿ ನಗರಸಭೆ ಸದಸ್ಯನೂ ಆಗಿರುವ ಲಿಂಗಾಯತ ಸಮುದಾಯದ ತಮ್ಮಯ್ಯ ನೂರಾರು ಕಾರ್ಯಕರ್ತರೊಂದಿಗೆ ಬಿಜೆಪಿ ಕಚೇರಿ ಪಾಂಚಜನ್ಯಕ್ಕೆ ಆಗಮಿಸಿ ಮನವಿ ನೀಡಿದ್ದಾರೆ.