Advertisement

ಕಾಂಗ್ರೆಸ್ ‘ಪೇ ಸಿಎಂ’ಬಾಣಕ್ಕೆ ಬಿಜೆಪಿಯಿಂದ ‘ಸ್ಕ್ಯಾಮ್‌ ರಾಮಯ್ಯ’ಪ್ರತಿಬಾಣ

05:05 PM Sep 22, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಹೋರಾಟ ತೀವ್ರಗೊಳಿಸಿದ್ದ ಕಾಂಗ್ರೆಸ್ ಈಗ ” ಪೇಸಿಎಂ” ಎಂಬ ವಿಶಿಷ್ಟ ಅಭಿಯಾನ ಆರಂಭಿಸಿದ್ದು, ಬಿಜೆಪಿ ‘ಸ್ಕ್ಯಾಮ್‌ ರಾಮಯ್ಯ’ ಎಂದು ತಿರುಗೇಟು ನೀಡುತ್ತಿದೆ.

Advertisement

ಬೆಂಗಳೂರಿನ ಆಯಕಟ್ಟಿ‌ನ ಸ್ಥಳಗಳಲ್ಲಿ “ಪೇಸಿಎಂ” ಪೋಸ್ಟರ್ ಅಂಟಿಸಿ, ಸಾಮಾಜಿಕ ಜಾಲತಾಣದಲ್ಲೂ ” ಪೇಸಿಎಂ” ಅಭಿಯಾನ ತೀವ್ರಗೊಳಿಸಿತ್ತು. ಪ್ರತಿಯಾಗಿ ಬಿಜೆಪಿ ಹೋರಾಟಕ್ಕಿಳಿದು ಸಿದ್ದರಾಮಯ್ಯ ವಿರುದ್ಧ ಸಮರ ಸಾರಿದೆ.

ಇದನ್ನೂ ಓದಿ : ಪ್ರಬಲ ಕನ್ನಡ ವಿಧೇಯಕ ಮಂಡಿಸಿದ ರಾಜ್ಯ ಸರಕಾರ; ಕಾಯಿದೆ ಉಲ್ಲಂಘನೆಗೆ ದಂಡ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ‘ಸ್ಕ್ಯಾಮ್‌ ರಾಮಯ್ಯ’ ಎಂಬ ವ್ಯಂಗ್ಯವಾದ ಚಿತ್ರಗಳುಳ್ಳ, ಹಲವು ಆರೋಪಗಳುಳ್ಳ ಪುಸ್ತಕವನ್ನು ಬಿಡುಗಡೆ ಮಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ . ರವಿ ಕುಮಾರ್, ಸಿದ್ದರಾಜು, , ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ, ರಾಜ್ಯ ಮುಖ್ಯ ವಕ್ತಾರ ಎಂ. ಜಿ. ಮಹೇಶ್ ಉಪಸ್ಥಿತರಿದ್ದರು.

‘ಸ್ಕ್ಯಾಮ್‌ ರಾಮಯ್ಯನ ಹಗರಣಗಳ ಪುರಾಣದ ಕುರಿತಾದ ʼಸ್ಕ್ಯಾಮ್‌ ರಾಮಯ್ಯʼ ಪುಸ್ತಕವನ್ನು ಬಿಡುಗಡೆ ಮಾಡಿರುವುದಾಗಿ ನಳಿನ್ ಕುಮಾರ್ ಕಟೀಲ್ ಹೇಳಿದರು.

Advertisement

ಜನರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರಕಾರದ ಅವಧಿಯ ಎಲ್ಲಾ ಕರ್ಮಕಾಂಡವನ್ನು ಹೊರ ಹಾಕುತ್ತೇವೆ ಎಂದು ಕಿಡಿ ಕಾರಿದ್ದಾರೆ.

”ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ #ಪೇ ಹೈ ಕಮಾಂಡ್ ಸರ್ಕಾರ ಎಂಬ ಖ್ಯಾತಿ ಪಡೆದಿತ್ತು.ಗೋವಿಂದ ರಾಜು ಡೈರಿಯಲ್ಲಿ ನಕಲಿ ಗಾಂಧಿ ಪರಿವಾರಕ್ಕೆ ಸಲ್ಲಿಸಲಾದ ಕಪ್ಪಕಾಣಿಕೆಯ ವಿವರ ದಾಖಲಾಗಿತ್ತು.ಕಾಂಗ್ರೆಸ್ಸಿಗರೇ, ನೀವು ಯಾವ ಮಾದರಿಯಲ್ಲಿ ಕಪ್ಪಕಾಣಿಕೆ ʼಪೇʼ ಮಾಡಿರುವುದು?” ಎಂದು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

”ನೆಹರೂ ಆದಿಯಾಗಿ ಇಂದಿರಾ, ರಾಜೀವ್, ಸೋನಿಯಾ, ರಾಹುಲ್ ಗಾಂಧಿಯವರೆಗಿನ ನಕಲಿ ಗಾಂಧಿಗಳು ಭ್ರಷ್ಟಾತಿ ಭ್ರಷ್ಟರಾಗಿದ್ದಾರೆ. ಹೀಗಿರುವಾಗ ಅವರ ಹಿಂಬಾಲಕರು ತಿಹಾರ್ ಜೈಲಿಗೆ ಹೋಗಿ ಬರುವುದರಲ್ಲಿ ಅಚ್ಚರಿಯಿಲ್ಲ. ಕಾಂಗ್ರೆಸ್‌ ಈಗ ಬೇಲ್‌ ಪಾರ್ಟಿಯಾಗಿದೆ, ಜಾಮೀನು ಕೈಯಲ್ಲಿ ಹಿಡಿದುಕೊಂಡೇ ಹೊರಗೆ ತಿರುಗಾಡುತ್ತಿದ್ದಾರೆ” ಎಂದು ಇನ್ನೊಂದು ಟ್ವೀಟ್ ಮೂಲಕ ತಿರುಗೇಟು ನೀಡಿದೆ.

”ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಎಷ್ಟು ಆದ್ಯತೆ ನೀಡಿತ್ತು ಎಂದರೆ ದೇಶದ ಪ್ರಥಮ ಪ್ರಧಾನಿ ಅಧಿಕಾರಕ್ಕೇರಿದ ವರ್ಷದ ಒಳಗಾಗಿ ಸ್ವತಂತ್ರ ಭಾರತದ ಮೊದಲ ಹಗರಣ ನಡೆಸಿದ್ದರು.ಕಾಂಗ್ರೆಸ್ ‘ಕೈ’ ಇಟ್ಟಲ್ಲೆಲ್ಲ ಹಗರಣಗಳ ಸರಪಳಿಯೇ ನಡೆದಿದೆ.ಆ ಸರಪಳಿಯ ಒಂದೊಂದು ಕೊಂಡಿಯಲ್ಲೂ ಒಬ್ಬೊಬ್ಬ ಕಾಂಗ್ರೆಸ್ ನಾಯಕರು ಸಿಲುಕಿಕೊಂಡಿದ್ದಾರೆ.” ಎಂದು ಸರಣಿ ಟ್ವೀಟ್ ಗಳನ್ನು ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next