Advertisement

ಚಂಡೀಗಢ ಮೇಯರ್ ಪಟ್ಟ ಬಿಜೆಪಿಗೆ: 1 ಮತದಿಂದ ಸೋತ ಆಪ್, ಕೋಲಾಹಲ

03:16 PM Jan 08, 2022 | Team Udayavani |

ಚಂಡೀಗಢ : ಬಿಜೆಪಿಯ ಸರಬ್ಜಿತ್ ಕೌರ್ ಚಂಡೀಗಢದ ಮೇಯರ್ ಆಗಿ ಶನಿವಾರ ಆಯ್ಕೆಯಾಗಿದ್ದು, ಆಪ್ ಪ್ರತಿಸ್ಪರ್ಧಿಯನ್ನು ಕೇವಲ 1 ಮತದಿಂದ ಸೋಲಿಸಿದ್ದಾರೆ.

Advertisement

ಬಿಜೆಪಿ ಕೌನ್ಸಿಲರ್ ಸರಬ್ಜಿತ್ ಕೌರ್ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಮೇಯರ್ ಆಗಿ ನೇರ ಸ್ಪರ್ಧೆಯಲ್ಲಿ ಆಮ್ ಆದ್ಮಿ ಪಕ್ಷದ ಅಂಜು ಕತ್ಯಾಲ್ ಅವರನ್ನು ಕೇವಲ ಒಂದು ಮತದಿಂದ ಸೋಲಿಸಿದರು. ಒಟ್ಟು 36 ಮತಗಳಲ್ಲಿ 28 ಮತ ಚಲಾವಣೆಯಾಗಿದ್ದು, ಏಳು ಕಾಂಗ್ರೆಸ್ ಕೌನ್ಸಿಲರ್‌ಗಳು ಮತ್ತು ಶಿರೋಮಣಿ ಅಕಾಲಿದಳದ ಏಕೈಕ ಕೌನ್ಸಿಲರ್ ಗೈರಾಗಿದ್ದರು.

ಕೌರ್ 14 ಮತಗಳನ್ನು ಪಡೆದರೆ, ಕತ್ಯಾಲ್ 13 ಮತಗಳನ್ನು ಪಡೆದರು ಮತ್ತು ಒಂದು ಅಸಿಂಧು ಎಂದು ಘೋಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫಲಿತಾಂಶ ಪ್ರಕಟವಾದ ನಂತರ ಎಎಪಿ ಕೌನ್ಸಿಲರ್‌ಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿದರು. ಅವರನ್ನು ನಿಯಂತ್ರಿಸಲು ಪೊಲೀಸರನ್ನು ಕರೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next