Advertisement

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

08:41 PM Sep 16, 2024 | Team Udayavani |

ಕಲಬುರಗಿ:ರಾಜ್ಯದಲ್ಲಿ ಬಿಜೆಪಿಯವರು ಅಭಿವೃದ್ಧಿ ಮತ್ತು ಪಾಸಿಟಿವ್‌ ಪಾಲಿಟಿಕ್ಸ್‌ ಮಾಡುವುದಿಲ್ಲ. ಅದಕ್ಕೆ ಅವರಿಗೆ ಮನಸ್ಸು ಇಲ್ಲ. ಅವರದೇನಿದ್ದರೂ ಜಗಳ ಹಚ್ಚುವ ಪಾಲಿಟಿಕ್ಸ್‌ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ|ಶರಣಪ್ರಕಾಶ ಪಾಟೀಲ ಆರೋಪಿಸಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಗಮಂಗಲ ಕೋಮು ಗಲಭೆ ಪ್ರಕರಣದ ಕುರಿತು ತನಿಖೆ ಮಾಡಲಾಗುತ್ತಿದೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಆದರೂ ಸಮಿತಿ ರಚನೆ ಮಾಡಿಕೊಂಡು ಅಲ್ಲಿಗೆ ಹೋಗಿ ಇನ್ನಷ್ಟು ಬೆಂಕಿ ಹಚ್ಚುವ ಪ್ರಯತ್ನ ಏಕೆ ಮಾಡುತ್ತಿದ್ದಾರೆ. ಇದೆಂತಹ ಪಾಲಿಟಿಕ್ಸ್‌,ಘಟನೆ ಆಕಸ್ಮಿಕವಾಗಿ ನಡೆದಿದೆ.

ಆದರೆ, ಬಿಜೆಪಿಯವರು ಹಾಗೂ ಕೇಂದ್ರ ಸಚಿವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. 2008ರಿಂದ 2013 ಹಾಗೂ 2019ರಿಂದ 2023ರವರೆಗೆ ರಾಜ್ಯದಲ್ಲಿ ಎಷ್ಟು ವಿಕಾಸ ಆಗಿದೆ ಎನ್ನುವುದು ಜನರಿಗೆ ಗೊತ್ತಿದ್ದೇ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ.

ಈಗಲಾದರೂ ಸುಮ್ಮನಿದ್ದು ಅಭಿವೃದ್ಧಿ ಪಾಲಿಟಿಕ್ಸ್‌ ಮಾಡಲಿ. ಅದು ಬಿಟ್ಟು ಜಗಳ ಹಚ್ಚುವ ಕೆಲಸ ಮಾಡಿದರೆ ಅದು ಬಹಳ ದಿನ ನಡೆಯಲ್ಲ  ಒಂದಿನ ಎಲ್ಲವೂ ಬಯಲಾಗಲಿದೆ ಎಂದರು.

 

Advertisement
Advertisement

Udayavani is now on Telegram. Click here to join our channel and stay updated with the latest news.