Advertisement

“ಬಿಜೆಪಿಯವರಿಗೆ ಸಾಧನೆಗಳ ಬದಲಿಗೆ ಭಾವನೆಗಳೇ ಅಜೆಂಡ’

11:16 PM Apr 12, 2019 | Sriram |

ಕೋಟ: ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಪ್ರತಿ ಚುನಾವಣೆಗಳನ್ನು ಅಭಿವೃದ್ಧಿಯ ಅಜೆಂಡದ ಮೂಲಕ ಎದುರಿಸಿದ್ದವು. ಆದರೆ ಇಂದು ಬಿಜೆಪಿ ಸರಕಾರದಲ್ಲಿ ಹೇಳಿಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಹೀಗಾಗಿ ಸೈನಿಕರು, ದೇಶ ಮುಂತಾದ ಭಾವನಾತ್ಮಕ ವಿಚಾರಗಳನ್ನು ಅಜೆಂಡವಾಗಿಸಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಮೀನುಗಾರಿಕೆ ಹಾಗೂ ಪಶುಸಂಗೋಪನೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು.

Advertisement

ಬುಧವಾರ ಕೋಟ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಘೋಷಣೆಯಿಂದ ದೇಶ ಬದಲಾಗದು
ಉದ್ಯೋಗ, ಅರ್ಥಿಕ ಅಭಿವೃದ್ಧಿ, ಜೀವನಮಟ್ಟದ ಸುಧಾರಣೆ ಮುಂತಾದ ವಿಚಾರಗಳು ದೇಶದ ಅಭಿವೃದ್ಧಿಗೆ ಪ್ರಮುಖವಾಗಿ ಅಗತ್ಯವಿದೆ. ಆದರೆ ಮೋದಿ ಈ ಎಲ್ಲಾ ವಿಚಾರಗಳನ್ನು ಬದಿಗಿಟ್ಟು ಚೌಕಿದಾರ್‌ ಎಂದು ಓಡಾಡುತ್ತಿದ್ದಾರೆ ಎಂದರು.
ಕಪ್ಪುಹಣ ವಾಪಸು ಏನಾಯಿತು ಬಿಜೆಪಿಗರು ಮತ ಕೇಳಲು ಬಂದಾಗ ನರೇಂದ್ರ ಮೋದಿಯವರು ಕಪ್ಪುಹಣ ವಾಪಸು ತಂದು ಬಡವರ ಖಾತೆಗೆ ಹಣ ಹಾಕುವ ಯೋಜನೆ ಏನಾಯಿತು ಎಂದು ಕೇಳಿ ಎಂದರು.

ಬದಲಾವಣೆಗೆ ಅವಕಾಶ ನೀಡಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಅವರು ಹಿಂದೆ ಮೀನುಗಾರಿಕೆ ಸಚಿವರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಆದ್ದರಿಂದ ಈ ಬಾರಿ ಅವರನ್ನು ಸಂಸದರನ್ನಾಗಿ ಮಾಡುವ ಮೂಲಕ ಕ್ಷೇತ್ರದ ಅಬಿವೃದ್ಧಿ,ಮೀನುಗಾರರ ಅಭಿವೃದ್ಧಿಗೆ ಸಹಕರಿಸಿ ಎಂದು ನಾಡಗೌಡರ್‌ ವಿನಂತಿಸಿದರು.

ಕೆ.ಪಿ.ಸಿ.ಸಿ.ಕಾರ್ಯದರ್ಶಿ ಎಂ.ಎ. ಗಪೂರ್‌, ಮಾಜಿ ಶಾಸಕ ಯು.ಆರ್‌. ಸಭಾಪತಿ ಕಾಂಗ್ರೆಸ್‌ ಪರ ಮತಯಾಚಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌ ಕುಂದರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Advertisement

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಬ್ಲಾಕ್‌ನ ಚುನಾವಣೆ ಉಸ್ತುವಾರಿ ಕೇಶವ ಕೋಟ್ಯಾನ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ಜೆಡಿಎಸ್‌ ಕುಂದಾಪುರ ಕ್ಷೇತ್ರಾಧ್ಯಕ್ಷ ಪ್ರಕಾಶ್‌ ಶೆಟ್ಟಿ ತೆಕ್ಕಟ್ಟೆ, ಮಹಿಳಾ ಮೋರ್ಚಾದ ಜಯಶ್ರೀ ಉಪಸ್ಥಿತರಿದ್ದರು.ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಅಮೀನ್‌, ಗಣೇಶ್‌ ನೆಲ್ಲಿಬೆಟ್ಟು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next