Advertisement

ಪರಿಶಿಷ್ಟ ವರ್ಗದ ಉನ್ನತಿಗೆ ಬಿಜೆಪಿ ಕೊಡುಗೆ ಮಹತ್ತರ: ಸಚಿವ ಎಸ್‌. ಅಂಗಾರ

12:50 AM Nov 14, 2022 | Team Udayavani |

ಮಂಗಳೂರು: ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರಕಾರಗಳ ಕೊಡುಗೆ ಮಹತ್ತರವಾದುದು ಎಂದು ರಾಜ್ಯ ಬಂದರು, ಮೀನುಗಾರಿಕೆ ಸಚಿವ ಎಸ್‌.ಅಂಗಾರ ಅವರು ಹೇಳಿದ್ದಾರೆ.

Advertisement

ಬಿಜೆಪಿ ಎಸ್‌ಸಿ ಮೋರ್ಚಾ ದ.ಕ. ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ರವಿವಾರ ಜರಗಿದ ಜಿಲ್ಲಾ ಪರಿಶಿಷ್ಟ ಜಾತಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ವಿಚಾರಧಾರೆಯಡಿ ಸಧೃಡ ಸಮಾಜ, ಸಶಕ್ತ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು. ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಶೋಷಿತ, ದಲಿತ ಸಮುದಾಯದ ಬಾಳಿಗೆ ಹೊಸ ಬೆಳಕು ನೀಡಿದರು. ಸಮು ದಾಯದ ಉನ್ನತಿಗೆ ಹಕ್ಕುಗಳನ್ನು ಒದಗಿಸಿ ಕೊಟ್ಟರು. ಈ ಹಕ್ಕುಗಳನ್ನು ಪಡೆದು ಕೊಂಡ ನಾವು ಇವುಗಳನ್ನು ಸದುಪಯೋಗಪಡಿಸಿ ಕೊಂಡು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸಿದಾಗ ಇದರ ಹಿಂದಿರುವ ಆಶಯಗಳು ಈಡೇರುತ್ತವೆ ಎಂದರು.

ಸಮಾವೇಶವನ್ನು ಉದ್ಘಾಟಿಸಿದ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಅವರು ಮಾತನಾಡಿ ಕಾಂಗ್ರೆಸ್‌ ಪಕ್ಷ ದಲಿತ ಸಮುದಾಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿತು. ಆದರೆ ನಿಜಾರ್ಥದಲ್ಲಿ ಅವರ ಏಳಿಗೆಗೆ ಏನು ಮಾಡಿಲ್ಲ. ಬಿಜೆಪಿ ಪಕ್ಷದ ಆಡಳಿತದಲ್ಲಿ ಪರಿಶಿಷ್ಟ ಜಾತಿ, ಪಂಗಡಕ್ಕೆ ರಾಜಕೀಯ ವಾಗಿ, ಆಡಳಿತಾತ್ಮಕವಾಗಿ ಉನ್ನತ ಸ್ಥಾನಮಾನಗಳನ್ನು, ಅಭಿವೃದ್ಧಿಗೆ ಆನೇಕ ಕಾರ್ಯಕ್ರಮಗಳನ್ನು ನೀಡಿದೆ ಎಂದರು.

ಎಸ್‌ಸಿ ಎಸ್‌ಟಿ ಆಯೋಗ ಅಧ್ಯಕ್ಷ ನೆಹರು ಓಲೇಕಾರ್‌, ಶಾಸಕರಾದ ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌, ಡಾ| ವೈ .ಭರತ್‌ ಶೆಟ್ಟಿ, ಹರೀಶ್‌ ಪೂಂಜ, ವಿಧಾನಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ಮೇಯರ್‌ ಜಯಾನಂದ ಅಂಚನ್‌, ಅಂಬೇಡ್ಕರ್‌ ನಿಗಮದ ಅಧ್ಯಕ್ಷ ನಾಗೇಶ್‌, ವಿಧಾನಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಎಸ್‌ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರಬಾಬು, ಬಿಜೆಪಿ ಎಸ್‌ಸಿ ಮೋರ್ಚಾ ಪ್ರಭಾರಿ ಮಂಗಳಾ ಆಚಾರ್ಯ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ದಿನೇಶ್‌ ಅಮೂrರ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿ ಅತಿಥಿಗಳಾಗಿದ್ದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ವಿನಯನೇತ್ರ ದಡ್ಡಲ್‌ಕಾಡ್‌ ಅವರು ಮಾತನಾಡಿ ಇದೊಂದು ಅಭೂತಪೂರ್ವ ಸಮಾ ವೇಶವಾಗಿದೆ. ಜಿಲ್ಲೆಯ 8 ಎಂಟುಸಭಾ ಕ್ಷೇತ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.

Advertisement

ಪ್ರಶಸ್ತಿ ಪ್ರದಾನ, ಸಮ್ಮಾನ
ಕವಿ ದಿ| ಸಿದ್ಧಲಿಂಗಯ್ಯ ಅವರ ಪುಸ್ತಕ ಬಿಡುಗಡೆ, ಅಂಬೇಡ್ಕರ್‌ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸಮ್ಮಾನ, ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಸಮಾ ವೇಶಕ್ಕೆ ಮುನ್ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದಿಂದ ಅಂಬೇಡ್ಕರ್‌ ಭವನದವರೆಗೆ ಡಾ| ಬಿ.ಆರ್‌.ಅಂಬೇಡ್ಕರ್‌ ಹಾಗೂ ಭಾರತಮಾತೆಯ ಭಾವಚಿತ್ರ ಗಳೊಂದಿಗೆ ಮೆರವಣಿಗೆ ನಡೆಯಿತು. ವಿವಿಧ ಸಮಾಜದ ಪ್ರಮುಖರನ್ನು ಗೌರವಿಸಲಾಯಿತು.

ಎಸ್‌ಸಿ ಮೋರ್ಚಾ ಮಂಡಲ ಅಧ್ಯಕ್ಷರುಗಳಾದ ರಘುವೀರ್‌ ಬಾಬುಗುಡ್ಡೆ, ಸಂದೇಶ್‌, ಕೇಶವ ದೈಪಲ, ಗೋಪಾಲಕೃಷ್ಣ ಕುಕ್ಕಳ, ಆನಂದ್‌, ಅಚ್ಚುತ ಗುತ್ತಿಗಾರ್‌, ಆನಂದ ಪಾಂಗಾಳ, ಬಾಬು ಬೊಮ್ಮನಗುಂಡಿ, ತಿಮ್ಮಪ್ಪ ನೀರ್ಪಾಜೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next