Advertisement

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟು ಬೆದರಿಕೆ: ಬಿಜೆಪಿಯಿಂದ ದೂರು

03:35 PM Jul 05, 2023 | Team Udayavani |

ತೀರ್ಥಹಳ್ಳಿ: ಯುವ ಕಾಂಗ್ರೆಸ್ ಹಾಗೂ NSUI ಗುರುತಿಸಿಕೊಂಡಿರುವ ತೀರ್ಥಹಳ್ಳಿ ವಾಸಿಯಾದ ಸೈಫದ್ ಅಲಿ ಎನ್ನುವ ಕಿಡಿಗೇಡಿ, ಯುವತಿಯ ಜೊತೆಯಲ್ಲಿ ಇರುವ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ವಾಟ್ಸಾಪ್ ಮತ್ತು ಇತರೆ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟು ಬೆದರಿಕೆ ಹಾಕುತ್ತಿರುವ ಕುರಿತು ಸುದ್ದಿ ಹರಿದಾಡುತ್ತಿದೆ.

Advertisement

ಆತನು ಹುಡುಗಿಯೊಂದಿಗೆ ಇರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಆತನ ಕೃತ್ಯಕ್ಕೆ ಸಾಕ್ಷಿಯಾಗಿದೆ.

ಮಹಿಳೆಯರಿಗೆ ಬೆದರಿಕೆ ಒಡ್ಡಿ ಮಾನಹಾನಿ ಮಾಡುತ್ತಿರುವುದಲ್ಲದೆ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಬಿಜೆಪಿಯ ಯುವ ಮುಖಂಡರು ಮನವಿ ಮೂಲಕ ದೂರನ್ನು ನೀಡಿದ್ದಾರೆ.

ಇದನ್ನೂ ಓದಿ: Bangalore mysore expressway: ಎಕ್ಸ್‌ಪ್ರೆಸ್‌ ವೇನಲ್ಲಿ ತಗ್ಗಿದ ಅಪಘಾತ

Advertisement

Udayavani is now on Telegram. Click here to join our channel and stay updated with the latest news.

Next