Advertisement
ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಗದೀಶ ಶಟ್ಟರ, ಲಕ್ಷ್ಮಣ ಸವದಿ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಯತ್ನಾಳ್, ತಮಗೆ ಎಲ್ಲವನ್ನೂ ನೀಡಿದ ಬಿಜೆಪಿ ಪಕ್ಷಕ್ಕೆ ಜೀವಿತಾವಧಿವರೆಗೂ ಪಕ್ಷದ ಕಛೇರಿ ಕಸಗೂಡಿಸಿ ಕೃತಜ್ಞರಾಗಿರಬೇಕಿದ್ದ ಮೊನ್ನೆ ಕಾಂಗ್ರೆಸ್ ಸೇರಿದ ಇಬ್ಬರು ಉತ್ತರ ಕರ್ನಾಟಕದ ಆ ಇಬ್ಬರು ನಾಯಕರು, ತಾವು ಬಿಜೆಪಿ ತೊರೆದ ಕಾರಣವೇ ಬಿಜೆಪಿ ಸೋತಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಪುಣ್ಯಾತ್ಮನೇ ಸಿಎಂ ಎಂದು ಘೋಷಸಿಯೇ ಹಿಂದೆ ರಾಜ್ಯದಲ್ಲಿ ಬಿಜೆಪಿ 40 ಸ್ಥಾನ ಗೆಲ್ಲಲು ಆಗಲಿಲ್ಲ ಎಂದು ಶಟ್ಟರ್ ವಿರುದ್ಧ ಕುಟುಕಿದರು.
Related Articles
Advertisement
ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಬಿಜೆಪಿ ಮತ್ತೆ 25 ಸ್ಥಾನ ಗೆಲ್ಲಲಿದೆ. ಮುಂದಿನ ಆರು ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಹಣೆ ಬರಹ ಏನಾಗುತ್ತದೆ ಎಂದು ದೇಶದ ಜನ ನೋಡಲಿದ್ದಾರೆ ಎಂದರು.
ಮೂರು ತಿಂಗಳ ಹಿಂದಿದ್ದ ಕಾಂಗ್ರೆಸ್ ಈಗ ಇಲ್ಲ. ಮೂರೇ ತಿಂಗಳಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ಧ ಜನಾಕ್ರೋಶ ಜೋರಾಗಿದೆ. ಕೆಲವೇ ತಿಂಗಳಲ್ಲಿ ಗ್ಯಾರಂಟಿನೂ ಇಲ್ಲ ವಾರೆಂಟಿನೂ ಇಲ್ಲ. ಕಾಂಗ್ರೆಸ್ಸಿನ ವಾರಂಟಿನೇ ಮುಗಿಯಲಿದೆ ಎಂದು ಯತ್ನಾಳ ಟೀಕಿಸಿದರು.
ಮಾಜಿ ಶಾಸಕ ಕುಮಾರ ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರನ್ನು ಭೇಟಿ ಮಾಡಿರಲಿ, ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.