Advertisement

ಸರ್ವ ಪಕ್ಷದ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತನ ಹುಟ್ಟುಹಬ್ಬ ಆಚರಣೆ

04:52 PM May 10, 2023 | Team Udayavani |

ಕೊಟ್ಟಿಗೆಹಾರ : ಮತದಾನದ ದಿನವಾದ ಬುಧವಾರ ಬಿಜೆಪಿ ಕಾರ್ಯಕರ್ತ ಪೂರ್ಣೇಶ್ ಅವರ ಹುಟ್ಟುಹಬ್ಬವನ್ನು ಸರ್ವ ಪಕ್ಷದ ಮುಖಂಡರು ಕೊಟ್ಟಿಗೆಹಾರದಲ್ಲಿ ಆಚರಸಿ ಗಮನ ಸೆಳೆದರು.

Advertisement

ಚುನಾವಣೆ ಸಂದರ್ಭದಲ್ಲಿ ಪಕ್ಷ ಪಕ್ಷಗಳ ನಡುವೆ ಮನಸ್ತಾಪಗಳು, ವಾಗ್ವಾದಗಳು ಇರುವುದು ಸಹಜ. ಆದರೆ ಕೊಟ್ಟಿಗೆಹಾರದಲ್ಲಿ ಸರ್ವ ಪಕ್ಷದ ಕಾರ್ಯಕರ್ತರು ಒಂದಾಗಿ ಬಿಜೆಪಿ ಕಾರ್ಯಕರ್ತ ಪೂರ್ಣೇಶ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿ ಪಕ್ಷ ಭೇದ ಮರೆತರು.

ರಾಜ್ಯದ ವಿವಿಧೆಡೆ ವಿರೋಧಿ ಪಕ್ಷಗಳ ನಡುವೆ ವಾಗ್ವಾದ, ಕೈ ಕೈ ಮಿಲಾಯಿಸಿದ ಘಟನೆಗಳು ವರದಿಯಾಗಿದೆ ಈ ಘಟನೆ ಸ್ನೇಹ ಮತ್ತು ರಾಜಕೀಯ ಪ್ರತ್ಯೇಕ ಎನ್ನುವ ಸಂದೇಶ ಸಾರಿದೆ.

Advertisement

Udayavani is now on Telegram. Click here to join our channel and stay updated with the latest news.

Next