Advertisement

ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ; ಖಾತೆ ತೆರೆದ ಓವೈಸಿ ಪಕ್ಷ

11:59 AM Oct 31, 2022 | Team Udayavani |

ವಿಜಯಪುರ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ 33 ವಾರ್ಡ್ ಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದ್ದರೂ 17 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮೇಲುಗೈ ಸಾಧಿಸಿದೆ. ಇದರೊಂದಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶಕ್ತಿ ವೃದ್ಧಿಸಿಕೊಂಡಿದ್ದಾರೆ.

Advertisement

ಎಲ್ಲಾ 35 ವಾರ್ಡ್ ಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ 10 ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಜೆಡಿಎಸ್ 20 ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದು ವಾರ್ಡ್ ನಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಇದರೊಂದಿಗೆ ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಮುಖಭಂಗ ಅನುಭವಿಸಿವೆ.

ಮತ್ತೊಂದೆಡೆ ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಸ್ಪರ್ಧಿಸಿದ ನಾಲ್ಕು ಸ್ಥಾನಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದೆ. ಇದರೊಂದಿಗೆ ವಿಧಾನಸಭೆ ಮುಂದಿನ ಚುನಾವಣೆಗೆ ಇತರೆ ರಾಜಕೀಯ ಪಕ್ಷಗಳಿಗೆ ಹೊಸ ಸಂದೇಶ ನೀಡಲು ಮುಂದಾಗಿದೆ.

ಗಮನೀಯ ಅಂಶ ಎಂದರೆ ಈ ಬಾರಿ ಐವರು ಪಕ್ಷೇತರರು ಗೆಲ್ಲುವ ಮೂಲಕ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ತಮ್ಮ ಬಲ ವೃದ್ಧಿಸಿಕೊಂಡಿದ್ದಾರೆ. ಇದಲ್ಲದೇ ಇತರೆ ಒಂಬತ್ತು ವಾರ್ಡಗಳಲ್ಲಿ ದ್ವಿತೀಯ ಸ್ಥಾನದಲ್ಲಿದ್ದು, ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

Advertisement

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಪೊರಕೆ ಒಂದೂ ಖಾತೆ ತೆರೆಯದೇ ಮೂಲೆ ಸೇರಿದೆ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ ಕೆಆರ್ ಎಸ್ ಪಕ್ಷದ ಕಥೆಯೂ ಶೂನ್ಯಸಾಧನೆ ಎನಿಸಿದೆ.

35 ಸದಸ್ಯ ಬಲದ ಪಾಲಿಕೆ ಅಧಿಕಾರಕ್ಕೆ ಏರಲು ಸರಳ ಬಹುಮತಕ್ಕೆ 18 ಸದಸ್ಯರ ಅಗತ್ಯವಿದೆ. ಪ್ರಕಟಿತ ಫಲಿತಾಂಶದಿಂದ ಬಿಜೆಪಿ ಸರಳ ಬಹುಮತದೊಂದಿಗೆ ಪಾಲಿಕೆ ಗದ್ದುಗೆ ಏರಲು ಓರ್ವ ಸದಸ್ಯರ ಬೆಂಬಲ ಬೇಕಿದೆ.

ಆದರೆ ಸರ್ಕಾರ ಚುನಾವಣೆ ಪೂರ್ವದಲ್ಲಿ ಪ್ರಕಟಿಸಿರುವ ಮೀಸಲು ಪ್ರಕಾರ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮೀಸಲಾಗಿದೆ. ಹಾಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಿನೇಶ ವಿಜಯ ಸಾಧಿಸಿದ್ದು, ಸರ್ಕಾರ ಮೇಯರ್ ಸ್ಥಾನದ ಮೀಸಲು ಬದಲಿಸದಿದ್ದರೆ ಮೇಯರ್ ಸ್ಥಾನ ಸುಲಭವಾಗಿ 10 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಾಲಾಗಲಿದೆ. ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next