Advertisement

ಗುಜರಾತ್‌-ಹಿಮಾಚಲದಲ್ಲಿ ಬಿಜೆಪಿಗೆ ಜಯ: ಸಿಎಂ ಬೊಮ್ಮಾಯಿ ಭವಿಷ್ಯ

08:46 PM Nov 22, 2022 | Team Udayavani |

ಚಿತ್ರದುರ್ಗ: ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅ ಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ಹೋಗುತ್ತದೆ. ಇದು ಕರ್ನಾಟಕದ ಚುನಾವಣೆಗೆ ಮುನ್ನುಡಿಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದರು.

Advertisement

ಹಿರಿಯೂರಿನಲ್ಲಿ ನಡೆದ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಾರೆ, ಏಕೆ ನಿಮ್ಮನ್ನು ಅ ಧಿಕಾರಕ್ಕೆ ತರಬೇಕಪ್ಪ? ಕಾಂಗ್ರೆಸ್‌ನವರು ಅನ್ನಭಾಗ್ಯ ಯೋಜನೆಗೆ ಕನ್ನ ಹಾಕಿದವರು. ಮಕ್ಕಳ ಹಾಸ್ಟೆಲ್‌ಗೆ ಹಾಸಿಗೆ, ದಿಂಬು ನೀಡುವ ಯೋಜನೆಯಲ್ಲೂ ಹಣ ಹೊಡೆದರು. ಎಲ್ಲಾ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಸಿದ್ದರು. ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ. ಇದನ್ನೆಲ್ಲಾ ಮುಚ್ಚಿ ಹಾಕಲು ಲೋಕಾಯುಕ್ತ ಮುಚ್ಚಿ ಎಸಿಬಿ ಎಂದು ಹೊಸ ನಾಟಕ ಮಾಡಿದರು. ನಮ್ಮ ಸರ್ಕಾರ ಮತ್ತೆ ಲೋಕಾಯುಕ್ತ ವ್ಯವಸ್ಥೆ ತಂದು ಸದೃಢವನ್ನಾಗಿ ಮಾಡುತ್ತಿದೆ ಎಂದರು.

ಜನ ವಿರೋಧಿ , ಅಭಿವೃದ್ಧಿ ವಿರೋಧಿ , ಭ್ರಷ್ಟಾಚಾರದ ಪರವಾಗಿರುವ, ಹಿಂದುಳಿದ, ಪರಿಶಿಷ್ಟ ವರ್ಗದ ಜನರ ವಿರೋ ಧಿಯಾಗಿರುವ ಕಾಂಗ್ರೆಸ್‌ನ್ನು ಈ ಬಾರಿ ಹೆಸರಿಲ್ಲದಂತೆ ಮಾಡಬೇಕು. ಇಷ್ಟು ವರ್ಷ ಅ ಧಿಕಾರದಲ್ಲಿದ್ದ ಕಾಂಗ್ರೆಸ್‌ ಮೀಸಲಾತಿ ನೀಡದೇ ಈಗ ಮಾತನಾಡುತ್ತಿದೆ ಎಂದರು.

ಸಾರಿಗೆ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಕಾಂಗ್ರೆಸ್‌ ಪಕ್ಷದ ವ್ಯಾಲಿಡಿಟಿ ಮುಗಿಯುತ್ತಿದೆ. ಮುಂದಿನ ದಿನಗಳಲ್ಲಿ ಜನ ಅದನ್ನು ಡಸ್ಟ್‌ಬಿನ್‌ಗೆ ಹಾಕಲಿದ್ದಾರೆ. ದೇಶದ ಎಲ್ಲೆಲ್ಲಿ ರಾಹುಲ್‌ ಗಾಂ ಧಿ ಓಡಾಡುತ್ತಿದ್ದಾರೋ ಅಲ್ಲೆಲ್ಲ ಕಾಂಗ್ರೆಸ್‌ ಸೋಲುತ್ತಿದೆ. ಅವರು ಸಾಧ್ಯವಾದಷ್ಟು ದಿನ ಓಡಾಡಿಕೊಂಡಿರಲಿ. ಕಾಂಗ್ರೆಸ್‌ ಪಕ್ಷದಿಂದ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಮತಗಳು ಕೈಬಿಟ್ಟು ಹೋಗುತ್ತಿವೆ. ಅಂಬೇಡ್ಕರ್‌, ಮಹರ್ಷಿ ವಾಲ್ಮೀಕಿ ಭಾವಚಿತ್ರ ಬಳಸಿಕೊಂಡು ಪರಿಶಿಷ್ಟರನ್ನು ಮತ ಬ್ಯಾಂಕ್‌ ಆಗಿ ಬಳಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ. ಆದರೆ ಪರಿಶಿಷ್ಟರಿಗೆ ಏಕೆ ಮೀಸಲಾತಿ ನೀಡಲಿಲ್ಲ. ಸಿದ್ದರಾಮಯ್ಯ ಪದೇ ಪದೇ ಧಮ್‌, ತಾಕತ್ತಿನ ಬಗ್ಗೆ ಮಾತನಾಡುತ್ತಾರೆ. ಅವರಿಗೆ ತಾಕತ್ತಿದ್ದಿದ್ದರೆ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡಿ ತೋರಿಸಬೇಕಾಗಿತ್ತು ಎಂದರು.

ಮೂರು ತಲೆಮಾರಿಗೆ ಆಗುವಷ್ಟು ಹಣ ಮಾಡಿಕೊಂಡಿದ್ದೇವೆ ಎಂದು ಖುದ್ದು ಕಾಂಗ್ರೆಸ್‌ ನಾಯಕ ರಮೇಶಕುಮಾರ್‌ ಹೇಳಿದ್ದಾರೆ. ಕಾಂಗ್ರೆಸ್‌ನವರು ಸ್ವಾತಂತ್ರ್ಯ ನಂತರ ಹೇಗೆ ದರೋಡೆ ಮಾಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಕಾಂಗ್ರೆಸ್‌ ನಾಯಕರು ಈ ಹೇಳಿಕೆಯನ್ನು ಅಲ್ಲಗಳೆದಿಲ್ಲ, ಬದಲಾಗಿ ಒಪ್ಪಿಕೊಂಡಿದ್ದಾರೆ.
– ಬಿ.ಎಸ್‌. ಯಡಿಯೂರಪ್ಪ, ಮಾಜಿ ಸಿಎಂ

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next