ಭೋಪಾಲ್: ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ 230 ವಿಧಾನಸಭಾ ಸ್ಥಾನಗಳ ಪೈಕಿ 200ಕ್ಕೂ ಹೆಚ್ಚು ಸ್ಥಾನಗಳನ್ನು ತಮ್ಮ ಪಕ್ಷ ಗೆಲ್ಲಲಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭಾನುವಾರ ಹೇಳಿದ್ದಾರೆ.
ಬಿಜೆಪಿ ಕಚೇರಿಯ ಶಂಕುಸ್ಥಾಪನೆಗಾಗಿ ಆಗಮಿಸಿದ ಅವರು ಈ ಹೇಳಿಕೆ ನೀಡಿದರು. ಭೋಪಾಲ್‌ನ ಈ ಕಚೇರಿಯು ಅತ್ಯಂತ ಆಧುನಿಕ ಮತ್ತು ಭವ್ಯವಾಗಿರಲಿದೆ. ನಮ್ಮ ಕಚೇರಿಗಳು ಸಂಸ್ಕಾರ ಕೇಂದ್ರಗಳು, ಬಿಜೆಪಿ ಕಾರ್ಯಕರ್ತರು ಸಂಸ್ಕಾರ ಸ್ವೀಕರಿಸಲು ಇಲ್ಲಿಗೆ ಬರುತ್ತಾರೆ ಮತ್ತು ಸಮಾಜ ಮತ್ತು ರಾಷ್ಟ್ರದ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಾರೆ ಎಂದು ನಡ್ಡಾ ಹೇಳಿದರು. ಬಳಿಕ ಬೂತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಉತ್ಸಾಹಭರಿತ ಬಿಜೆಪಿ ಕಾರ್ಯಕರ್ತರು ನನಗೆ ನೀಡಿದ ಆತ್ಮೀಯ ಸ್ವಾಗತವು ನಾವು ಎಂಪಿಯಲ್ಲಿ 200 ಕ್ಕೂ ಹೆಚ್ಚು ಅಸೆಂಬ್ಲಿ ಸ್ಥಾನಗಳಿಗೆ ಹೋಗುತ್ತಿದ್ದೇವೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು.
ಮಧ್ಯಪ್ರದೇಶದಲ್ಲಿ 2018 ರ ಚುನಾವಣೆಯಲ್ಲಿ ಹಂಗ್ ಅಸೆಂಬ್ಲಿ ನಿರ್ಮಾಣವಾಗಿತ್ತು ಕಾಂಗ್ರೆಸ್ 230 ಸದಸ್ಯರ ಸದನದಲ್ಲಿ 114 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು, ಬಿಜೆಪಿ 109 ಸ್ಥಾನಗಳಲ್ಲಿ ಗೆದ್ದಿತ್ತು. ಬಿಜೆಪಿಗೆ 41.02 ರಷ್ಟು ಮತಗಳು ಬಂದಿದ್ದು, ಕಾಂಗ್ರೆಸ್‌ನ 40.89 ರಷ್ಟು ಮತಗಳನ್ನು ಪಡೆದಿತ್ತು.
Related Articles
ಕಮಲ್ ನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿತು, 2020ರ ಮಾರ್ಚ್ ತಿಂಗಳಿನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ನಿಷ್ಠರಾಗಿರುವ ಶಾಸಕರು ಬಂಡಾಯವೆದ್ದು, ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಮರಳಲು ದಾರಿ ಮಾಡಿಕೊಟ್ಟಿದ್ದರು.