ನವ ದೆಹಲಿ : ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳದ ಅಧ್ಯಕ್ಷ ದಿಲೀಪ್ ಘೋಶ್ ಪರಿವರ್ತನ್ ಯಾತ್ರೆಯಲ್ಲಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೃಣ ಮೂಲ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.
ಹರಿರಾಜ್ ಪುರದ ಪಶ್ಚಿಮ ಮಿಡ್ನಾ ಪೋರ್ ನ ನಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಚುನಾವಣೆಯಲ್ಲಿ ಗೆದ್ದು ಪಶ್ಚಿಮ ಬಂಗಾಳದ ಅಧಿಕಾರ ಹಿಡಿಯಲಿದೆ ಎಂದು ಹೇಳಿದ್ದಾರೆ.
ಓದಿ : “ಮಸಿ’ಗೆ ಮೀಸಲಿಟ್ಟ 1 ಲಕ್ಷ ರೂ.ಗಳನ್ನು 10 ವಿದ್ಯಾರ್ಥಿಗಳಿಗೆ ವಿತರಿಸಿದ ಪ್ರತಿಭಾ ಕುಳಾಯಿ!
ಮಮತಾ ದೀದಿಯವರ ಸಹೋದರರಿಗೆ, ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ನಾನು ಹೇಳಲು ಇಚ್ಛಿಸುತ್ತೇನೆ. ಪರಿವರ್ತನಾ ಯಾತ್ರೆಯನ್ನು ತಡೆಯುವ ಕುತಂತ್ರವೂ ಕೂಡ ನಡೆದಿದೆ ಎಂದು ನನಗೆ ಗೊತ್ತು. ಹಾಗಾಗಿ ಖುದ್ದಾಗಿ ನಾನು ನಿಮ್ಮೊಂದಿಗೆ ಮಾತಾಡಲು ಇಲ್ಲಿಗೆ ಬಂದಿದ್ದೇನೆ. ನಿಮ್ಮ ಮತಗಳನ್ನು ಪ್ರಾಮಾಣಿಕರಿಗೆ ಚಲಾಯಿಸಲು ಸಾಧ್ಯವಾಗುತ್ತದೆ ಎಂದು ನಾವು ಖಚಿತಪಡಿಸುತ್ತೇವೆ ಎಂದರು.
ಇನ್ನು, ವಿರೋಧ ಪಕ್ಷಗಳು ನಮ್ಮ ಆಟ ಮುಗಿದಿದೆ ಎಂದು ಹೇಳುತ್ತಿದ್ದಾರೆ. ಆದರೇ, ನಮ್ಮ ಆಟ ಇನ್ನೂ ಮುಗಿಯಲಿಲ್ಲ ಎಂದು ನಾನು ಅವರಿಗೆ ಖಚಿತಪಡಿಸಲು ಇಚ್ಛಿಸುತ್ತೇನೆ. ಒಂದು ವೇಳೆ ಚುನಾವಣೆಯಾದ ಬಳಿಕವೂ ತಮ್ಮ ಅನುಯಾಯಿಗಳನ್ನು ನೋಡಬೇಕೆಂದು ಬಯಸಿದ್ದಲ್ಲಿ ದೀದಿಯವರಿಗೆ ತಮ್ಮ ಅನುಯಾಯಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಹೇಳಿ. ನಾವು ನಾಗರಿಕರು ಮತ್ತು ಆ ಬಗ್ಗೆ ಪ್ರಜ್ಞೆ ಉಳ್ಳವರು. ಕಾನೂನನ್ನು ಪಾಲಿಸುವವರು. ಹಾಗಂತ ನಾವು ದುರ್ಬಲರು ಎಂದರ್ಥವಲ್ಲ. ಹೇಡಿಗಳು ಅಲ್ಲ ಎಂದು ದಿಲೀಪ್ ಟಿ ಎಮ್ ಸಿ ವಿರುದ್ಧ ಕಿಡಿ ಕಾರಿದ್ದಾರೆ.
ಓದಿ : ಗೂಗಲ್ ಮ್ಯಾಪ್ ಗೆ ಟಕ್ಕರ್ ನೀಡಲಿದೆ ಭುವನ್ ಆ್ಯಪ್…!