Advertisement

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಸಿಎಂ ಬೊಮ್ಮಾಯಿ ವಿಶ್ವಾಸ

12:51 PM Jan 02, 2023 | Team Udayavani |

ಬೆಂಗಳೂರು: ನಮ್ಮ ಕೆಲಸ, ಆಡಳಿತದ ಆಧಾರದ ಮೇಲೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಅವರು ಇಂದು ವೈಯ್ಯಾಲಿಕಾವಲ್ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಇದನ್ನೂ ಓದಿ:ಮಾಲ್ಡೀವ್ಸ್ ನಲ್ಲಿ ರಶ್ಮಿಕಾ – ದೇವರಕೊಂಡ ನ್ಯೂ ಇಯರ್?‌: ಹಾಟ್‌ ಫೋಟೋ ಆಪ್ಲೋಡ್‌ ಮಾಡಿ ಫ್ಯಾನ್ಸ್‌ ಗೆ ವಿಶ್

ಹಿಂದೂ ಧರ್ಮದಲ್ಲಿ ಪವಿತ್ರವಾದ ದಿನ. ಇಂದು ವೆಂಕಟೇಶ್ವರನ ದರ್ಶನ ಮಾಡಬೇಕೆಂದು ಪ್ರತೀತಿ. ತಿರುಪತಿಗೆ ಹೋಗಲು ಸಾಧ್ಯವಿಲ್ಲದಿರುವರರಿಂದ ಟಿಟಿಡಿ ಯವರ ದೇವಸ್ಥಾನಕ್ಕೆ ಬಂದು ಪುನೀತ ಭಾವನೆ ಮೂಡಿದೆ. ಕರ್ನಾಟಕದ ಜನತೆ ಅಭಿವೃದ್ಧಿ, ಸಮೃದ್ಧಿಯಾಗುವಂತೆ ದೇವರಲ್ಲಿ ಬೇಡಿಕೊಂಡಿದ್ದು, ಖಂಡಿತವಾಗಿ 2023 ರಲ್ಲಿ ವೆಂಕ್ತೇಶ್ವನ ಆಶೀರ್ವಾದ ಇರುತ್ತದೆ. ವೆಂಕಟೇಶ್ವರ ಎಂದರೆ ಅಭಿವೃದ್ಧಿ, ಸಮೃದ್ಧಿಯ ಸಂಕೇತ. ಕರ್ನಾಟಕ ಹಿಂದೆಂದೂ ಕಾಣದ ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಕಾನೂನು ಪ್ರಕಾರ ಕ್ರಮ: ಉದ್ಯಮಿ ಪ್ರದೀಪ್ ಅವರು ಶಾಸಕ ಅರವಿಂದ ಲಿಂಬಾವಳಿ ಯವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಎಫ್.ಐ.ಆರ್ ಆಗಿರುವ ಬಗ್ಗೆ  ಪ್ರತಿಕ್ರಿಯೆ ನೀಡಿ,  ಪ್ರಕ್ರಿಯೆ ಏನಾಗಬೇಕೋ ಆಗಿದೆ. ಮುಂದೂ ಕೂಡ ಕಾನೂನು ಪ್ರಕಾರವಾಗಿ ಆಗಲಿದೆ ಎಂದರು.

Advertisement

ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ನಿರಂತರ ಮಾಹಿತಿ

ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಮಾತನಾಡಿ ಅವರನ್ನು ಭೇಟಿ ಯಾದಾಗ ಗುರುತು ಹಿಡಿದರು. ಮಾತನಾಡಲು ಆಗುತ್ತಿರಲಿಲ್ಲ ಎನ್ನುವುದನ್ನು ಬಿಟ್ಟರೇ ಅವರ ಎಲ್ಲಾ ಅಂಗಾಂಗಗಳ ಮಾನದಂಡಗಳು ಸಾಮಾನ್ಯವಾಗಿಯೇ ಇತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾತನಾಡಿದಾಗ ಧ್ವನಿ ಗುರುತು ಹಿಡಿದು ಶುಭ ಕೋರಿದರು. ಇಂದೂ ಕೂಡ ಅವರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಂಬಂಧ ಪಟ್ಟವರ ಸಂಪರ್ಕದಲ್ಲಿದ್ದೇನೆ. ಯಾವುದೇ ಆತಂಕಕ್ಕೆ ಅವಕಾಶವಿಲ್ಲ. ಸಿದ್ಧೇಶ್ವರ ಸ್ವಾಮಿಗಳಿಗೆ ಅವರದ್ದೇ ಆದ ಅಂತರ್ಗತ ಶಕ್ತಿ ಇದೆ. ಅದರ ಮೂಲಕ ಅನಾರೋಗ್ಯವನ್ನು ಗೆದ್ದು ಜಯಶಾಲಿಯಾಗಿ ಬರುತ್ತಾರೆ. ದೀರ್ಘಕಾಲ ನಮ್ಮ ಜೊತೆಗಿದ್ದು, ಆಶೀರ್ವಾದ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next