Advertisement
“ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ನಿವಾಸದಿಂದ ತೆರವುಗೊಳಿಸಲಾಗಿದೆ. ಬಿಜೆಪಿಯ ಆಜ್ಞೆಯ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಮುಖ್ಯಮಂತ್ರಿ ಅತಿಶಿಯವರ ವಸ್ತುಗಳನ್ನು ಮುಖ್ಯಮಂತ್ರಿ ನಿವಾಸದಿಂದ ಬಲವಂತವಾಗಿ ಹೊರಹಾಕಿದ್ದಾರೆ” ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ. ಸಿಎಂ ಅಧಿಕೃತ ನಿವಾಸದಿಂದ ಹಲವಾರು ಪೆಟ್ಟಿಗೆಗಳು ಮತ್ತು ಸಾಮಗ್ರಿಗಳ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ವಿಡಿಯೋ ವೈರಲ್ ಆಗಿದೆ.
ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ಸಿಎಂ ನಿವಾಸ (ನಂಬರ್ 6, ಫ್ಲ್ಯಾಗ್‌ಸ್ಟಾಫ್ ರಸ್ತೆ ಸಿವಿಲ್ ಲೈನ್ಸ್) ತೆರವಾಗಿತ್ತು. ನಂತರ, ಅತಿಶಿ ಸಿಎಂ ಆದ ನಂತರ ಆ ಮನೆಗೆ ತೆರಳಿದ್ದರು. ಇದೀಗ ಸಿಎಂ ಮನೆ ತೆರವು ಹಾಗೂ ಹಸ್ತಾಂತರ ವಿಚಾರವಾಗಿ ವಿವಾದ ಉಂಟಾಗಿದ್ದು, ಬಳಿಕ ಪಿಡಬ್ಲ್ಯುಡಿ ಕ್ರಮ ಕೈಗೊಂಡಿದೆ.
Related Articles
ದೆಹಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ ಅ.6ರಂದು ಪಿಡಬ್ಲ್ಯುಡಿ ಪತ್ರ ಹಂಚಿಕೊಂಡಿದ್ದಾರೆ, ಕೇಜ್ರಿವಾಲ್ “ತಮ್ಮ ಬಂಗಲೆಯನ್ನು ಪೂರ್ಣವಾಗಿ ಖಾಲಿ ಮಾಡಿಲ್ಲ” ಮತ್ತು ಅವರ ಹೆಚ್ಚಿನ ವಸ್ತುಗಳು ಇನ್ನೂ ಇವೆ. ಎಂದು ಆರೋಪಿಸಿದ್ದಾರೆ. ಸಿಎಂ ಅತಿಶಿ ಅಕ್ರಮವಾಗಿ ಈ ಅಧಿಕೃತ ನಿವಾಸಕ್ಕೆ ಪ್ರವೇಶಿಸಿದ್ದರು. ಮುಖ್ಯಮಂತ್ರಿಯವರಿಗೆ ಮಥುರಾ ರಸ್ತೆಯ ಎಬಿ-17 ಬಂಗಲೆ ನೀಡಲಾಗಿತ್ತು. ಅರವಿಂದ ಕೇಜ್ರಿವಾಲ್ ಸರಕಾರದಲ್ಲಿ ಅತಿಶಿ ಸಚಿವರಾಗಿದ್ದಾಗಲೂ ಅದೇ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು ಎಂದು ಬಿಜೆಪಿ ಹೇಳಿದೆ.
Advertisement