Advertisement

ಬಿಜೆಪಿ ಜಯಭೇರಿ; ಸಾಗರದಲ್ಲಿ ಸಂಭ್ರಮಾಚರಣೆ

03:45 PM Mar 10, 2022 | Suhan S |

ಸಾಗರ: ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿರುವ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ವತಿಯಿಂದ ಸಾಗರ ಹೋಟೆಲ್ ವೃತ್ತದಲ್ಲಿ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಾಲ್ಕು ರಾಜ್ಯಗಳ ಫಲಿತಾಂಶ ನರೇಂದ್ರ ಮೋದಿ ನಾಯಕತ್ವವನ್ನು ಮೆಚ್ಚಿ ಜನರು ನೀಡಿದ ತೀರ್ಪು ಎನ್ನುವುದು ಸೂರ್ಯ ಚಂದ್ರರಿರುವಷ್ಟೇ ಸತ್ಯ. ಬಿಜೆಪಿ, ಮೋದಿ ಅವರ ವ್ಯಕ್ತಿತ್ವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದರು. ಜನರು ಬಿಜೆಪಿ ಮತ್ತು ಮೋದಿಯನ್ನು ಮೆಚ್ಚಿದ್ದೇವೆ ಎಂದು ಈ ಫಲಿತಾಂಶದ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಧೂಳಿವಾಗಿರುವ ಸೂಚನೆ ಈ ಫಲಿತಾಂಶದ ಮೂಲಕ ಕಂಡುಕೊಳ್ಳಬಹುದು. ಕಾಂಗ್ರೆಸ್‌ನ ಕೆಲವು ನಾಯಕರನ್ನು ಚುನಾವಣೆ ಉಸ್ತುವಾರಿಗಳಾಗಿ ಬೇರೆಬೇರೆ ರಾಜ್ಯಕ್ಕೆ ಹೈಕಮಾಂಡ್ ಕಳಿಸಿತ್ತು. ಎಲ್ಲ ಕಡೆಯೂ ತೀವ್ರ ಮುಖಭಂಗ ಕಾಂಗ್ರೆಸ್ ನಾಯಕರು ಅನುಭವಿಸಿದ್ದಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಸ್ವಲ್ಪ ಉಸಿರು ಹಿಡಿದುಕೊಂಡಿದ್ದು, 2023 ರ ಚುನಾವಣೆಯಲ್ಲಿ ಮತದಾರರು ಅದಕ್ಕೂ ಒಂದು ಗತಿ ಕಾಣಿಸುತ್ತಾರೆ ಎಂದರು.

ಸಿಎಎ, 370ನೇ ವಿಧಿ ತಿದ್ದುಪಡಿ, ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮನ್ನಣೆ ನೀಡಿ ಐದು ರಾಜ್ಯದ ಜನರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಉಕ್ರೇನ್ ಯುದ್ಧಭೂಮಿಯಿಂದ ಭಾರತೀಯರನ್ನು ಕರೆತರುವಲ್ಲಿ ಮೋದಿ ನೇತೃತ್ವದ ಸರ್ಕಾರ ನಿರ್ವಹಿಸಿದ ರೀತಿಗೆ ಐದು ರಾಜ್ಯಗಳ ಪೈಕಿ ೪ ರಾಜ್ಯಗಳ ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ, ಅಮಿತ್ ಷಾ, ಜೆ.ಪಿ.ನಡ್ಡಾ, ಯೋಗಿ ಆದಿತ್ಯನಾಥ್ ಅವರ ಸಮರ್ಥ ನಾಯಕತ್ವವನ್ನು ಜನರು ಬೆಂಬಲಿಸಿದ್ದಾರೆ. ಈ ಫಲಿತಾಂಶಕ್ಕೆ ಕಾರಣವಾದ ನಾಲ್ಕೂ ರಾಜ್ಯಗಳ ಮತದಾರರಿಗೆ ಜಿಲ್ಲಾ ಬಿಜೆಪಿ ತುಂಬ ಹೃದಯದ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಲೋಕನಾಥ್ ಬಿಳಿಸಿರಿ, ಗಣೇಶ್ ಪ್ರಸಾದ್, ಚೇತನರಾಜ್ ಕಣ್ಣೂರು, ಮಧುರಾ ಶಿವಾನಂದ್, ವಿ.ಮಹೇಶ್, ಮೈತ್ರಿ ಪಾಟೀಲ್, ಶರಾವತಿ ಸಿ. ರಾವ್, ಸತೀಶಬಾಬು, ಪುರುಷೋತ್ತಮ್, ಸಂತೋಷ್ ಶೇಟ್, ಅರವಿಂದ ರಾಯ್ಕರ್, ಆರ್.ಶ್ರೀನಿವಾಸ್, ಕೃಷ್ಣಮೂರ್ತಿ ಭಂಡಾರಿ, ಕೆ.ವಿ.ಪ್ರವೀಣ, ಸವಿತಾ ವಾಸು, ಪ್ರೇಮ ಸಿಂಗ್, ದೇವೇಂದ್ರಪ್ಪ, ಪರಶುರಾಮ್, ವಿನೋದ್ ರಾಜ್ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next