Advertisement

ಯು ಟರ್ನ್; ದೆಹಲಿ ಮೇಯರ್ ಹುದ್ದೆಗೆ ಸ್ಪರ್ಧಿಸಲು ಅಣಿಯಾದ ಬಿಜೆಪಿ

01:07 PM Dec 27, 2022 | Team Udayavani |

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯಲ್ಲಿ ದೆಹಲಿ ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ಆಮ್ ಆದ್ಮಿ ಪಕ್ಷದ ವಿರುದ್ಧವಾಗಿ ಸ್ಪರ್ಧೆ ಮಾಡಲು ಬಿಜೆಪಿ ನಿರ್ಧರಿಸಿದೆ. ಚುನಾವಣೆಯ ಸೋಲಿನ ನಂತರ ವ್ಯತಿರಿಕ್ತ ಹೇಳಿಕೆಗಳ ನಂತರ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಹುದ್ದೆಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

Advertisement

ಶಾಲಿಮರ್ ಬಾಘ್ ಕೌನ್ಸಿಲರ್ ರೇಖಾ ಗುಪ್ತಾ ಅವರು ಮೇಯರ್ ಹುದ್ದೆಯ ಸ್ಪರ್ಧಿಯಾಗಿದ್ದರೆ, ರಾಮ್ ನಗರ ವಾರ್ಡ್ ನ ಕಮಲ್ ಬಗ್ರಿ ಅವರು ಬಿಜೆಪಿಯಿಂದ ಡೆಪ್ಯುಟಿ ಮೇಯರ್ ಹುದ್ದೆಗೆ ಸ್ಪರ್ಧೆ ಮಾಡಲಿದ್ದಾರೆ.

ಅತೀ ಹೆಚ್ಚು ಮಂದಿ ಕೌನ್ಸಿಲರ್ ಗಳನ್ನು ಹೊಂದಿರುವ ಆಪ್, ಮೇಯರ್ ಹುದ್ದೆಗೆ ಪೂರ್ವ ಪಟೇಲ್ ನಗರದ ಶೆಲ್ಲಿ ಒಬೆರಾಯ್ ಅವರನ್ನು ಸ್ಪರ್ಧಿಯಾಗಿ ನೇಮಕ ಮಾಡಿದೆ. ಉಪ ಮೇಯರ್ ಹುದ್ದೆಗೆ ಚಾಂದನಿ ಮಹಲ್ ನ ಕೌನ್ಸಿಲರ್ ಆಲೆ ಮೊಹಮ್ಮದ್ ಇಕ್ಬಾಲ್ ಅವರನ್ನು ಸ್ಪರ್ಧಿಯಾಗಿ ಕಣಕ್ಕಿಳಿಸಿದೆ.

ಇದನ್ನೂ ಓದಿ:ಮುಂಬಯಿಯಲ್ಲಿ ಎಷ್ಟು ಮರಾಠಿ ಭಾಷಿಕರಿದ್ದಾರೆಂದು ಠಾಕ್ರೆ ನೋಡಲಿ: ಅಶ್ವಥ ನಾರಾಯಣ ತಿರುಗೇಟು

ಡಿಸೆಂಬರ್ 4ರಂದು ನಡೆದಿದ್ದ ದೆಹಲಿ ಮುನ್ಸಿಪಾಲಿಟಿಯ 250 ಕ್ಷೇತ್ರಗಳ ಚುನಾವಣೆಯಲ್ಲಿ 134 ಸ್ಥಾನ ಗೆದ್ದುಕೊಂಡಿದ್ದ ಆಪ್ ಜಯಭೇರಿ ಸಾಧಿಸಿದೆ. ಬಿಜೆಪಿಯು 104 ಸ್ಥಾನಗಳನ್ನು ಗೆದ್ದುಕೊಂಡಿತ್ತು.

Advertisement

“ಈಗ ದೆಹಲಿಗೆ ಮೇಯರ್ ಆಯ್ಕೆ ನಡೆಯಲಿದೆ. ನಾಮನಿರ್ದೇಶಿತ ಕೌನ್ಸಿಲರ್‌ಗಳು ಯಾವ ರೀತಿಯಲ್ಲಿ ಮತ ಚಲಾಯಿಸುತ್ತಾರೆ ಇತ್ಯಾದಿ, ನಿಕಟ ಸ್ಪರ್ಧೆಯಲ್ಲಿ ಯಾರು ಸಂಖ್ಯೆಯನ್ನು ಹಿಡಿದಿಟ್ಟುಕೊಳ್ಳಬಹುದು ಎಂಬುದರ ಮೇಲೆ ಅವಲಂಬಿತವಾಗಿದೆ. ಉದಾಹರಣೆಗೆ ಚಂಡೀಗಢದಲ್ಲಿ ಬಿಜೆಪಿ ಮೇಯರ್ ಇದ್ದಾರೆ” ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next