Advertisement

150ಕ್ಕೂ ಹೆಚ್ಚು ಕಡೆ ಕಮಲ ಬೆಂಬಲಿತರಿಗೆ ಅಧಿಕಾರ

03:58 PM Jan 04, 2021 | Team Udayavani |

ಶಿರಸಿ: 227 ಗ್ರಾಪಂಗಳಲ್ಲಿ ಶೇ.60 ಕ್ಕೂ ಅಧಿಕ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. 150ಕ್ಕೂ ಅಧಿಕ ಪಂಚಾಯಿತಿಗಳಲ್ಲಿ ಕಮಲ ಪಕ್ಷದ ಕಾರ್ಯಕರ್ತರು ಅಧಿಕಾರನಡೆಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಸಹ ವಕ್ತಾರ ಸದಾನಂದ ಭಟ್ಟ ನಿಡಗೋಡ ಪ್ರತಿಪಾದಿಸಿದರು.

Advertisement

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,227 ಗ್ರಾಪಂಗಳಿಗೆ 2662 ಅಭ್ಯರ್ಥಿಗಳುಗೆಲುವು ಸಾಧಿಸಿದ್ದಾರೆ. ಈ ಪೈಕಿ 1400ಕ್ಕೂ ಅಧಿಕ ಜನಪ್ರತಿನಿಧಿಗಳು ನಮ್ಮ ಪಕ್ಷದ ಕಾರ್ಯಕರ್ತರು,ಪ್ರಮುಖರೇ ಆಗಿದ್ದಾರೆ. ಜಿಲ್ಲೆಯಲ್ಲಿ ಶಾಂತಿಯುತಮತದಾನ ಹಾಗೂ ಮತ ಎಣಿಕೆ ನಡೆಸಿದ್ದಕ್ಕೆ ಸಹಕರಿಸಿದಎಲ್ಲರಿಗೂ ದನ್ಯವಾದ ತಿಳಿಸುವುದಾಗಿ ಹೇಳಿದರುಗ್ರಾಮೀಣ ಅಭಿವೃದ್ಧಿ ಕಲ್ಪನೆಯಲ್ಲಿ ಗ್ರಾಮ ಸ್ವರಾಜ್ಯ ನಿರ್ಮಾಣ ಆಗಬೇಕು. ನೂತನ ಸದಸ್ಯರ ಮೂಲಕ ಇನ್ನಷ್ಟು ಕೆಲಸ ಕಾರ್ಯ ನಡೆಯುತ್ತದೆ ಎಂದ ಅವರು, ಇದು ಪಕ್ಷಾತೀತ ಚುನಾವಣೆ. ಆದರೆ, ಹಿನ್ನೆಲೆಯಲ್ಲಿ ರಾಜಕೀಯ ಬೆಂಬಲ ಇದ್ದೇ ಇದೆ. ಕಾರ್ಯಕರ್ತರನ್ನು ಆಧರಿಸಿದ ಪಕ್ಷ ಬಿಜೆಪಿ. ಕಾರ್ಯಕರ್ತರಿಗೆ ಅಧಿಕಾರ ನೀಡುತ್ತಿರುವ ಸಂದರ್ಭ. ದೊಡ್ಡ ಪ್ರಮಾಣದಲ್ಲಿ ಗ್ರಾಪಂಗಳಿಗೆ ಜಿಲ್ಲೆಯ ಜನ ದೊಡ್ಡ ಬೆಂಬಲ ನೀಡಿದ್ದಾರೆ. ಬಿಜೆಪಿ ಬೆಂಬಲಿತರ ಆಯ್ಕೆಗೆ ಸಹಕಾರ ನೀಡಿದ್ದಾರೆ ಎಂದರು.

ಈ ಮೊದಲು ಬಿಜೆಪಿ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಮುಂದಾಗಿದೆ. ಇದಕ್ಕಾಗಿ ಗ್ರಾಮ ಸ್ವರಾಜ್ಯಸಮಾವೇಶ ನಡೆಸಿದ್ದೆವು. ಪ್ರತಿ ವಾರ್ಡ್‌ನಲ್ಲಿ ಪಂಚರತ್ನ ಸಂಘಟನಾತ್ಮಕ ಚಟುವಟಿಕೆ ನಡೆಸಿದವು. ಪೇಜ್ಪ್ರಮುಖರು ಕೂಡ ಕಾರ್ಯ ಮಾಡಿದ್ದಾರೆ. ಇವರ ಚಟುವಟಿಕೆಯ ಮೂಲಕ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದ್ದೇವೆ. ಕುಟುಂಬ ಮಿಲನ ಕಾರ್ಯಕ್ರಮ ಕೂಡ ನಡೆಯಿತು. ಇದು ಯಶಸ್ಸಿನ ಗುಟ್ಟು ಎಂದರು.

ಗ್ರಾಪಂಗಳಿಗೆ ನೇರ ಅನುದಾನ ನೀಡಲು ಮೋದಿ ಮುಂದಾಗಿದ್ದಾರೆ. ಕೇಂದ್ರ ಸರಕಾರದಿಂದ 15ನೇಹಣಕಾಸಿನಲ್ಲಿ ಒಂದು ಕೋಟಿ ರೂ. ನೀಡಲುಮುಂದಾಗಿದ್ದಾರೆ. ಈ ಮೂಲಕ ಪಂಚಾಯತ್‌ ರಾಜವ್ಯವಸ್ಥೆ ಕೂಡ ಬಲವಾಗಲಿದೆ ಎಂದರು. ಬಿಜೆಪಿ ಬೆಂಬಲದೊಂದಿಗೆ ಆಯ್ಕೆ ಆದವರು ಯಾರು ಎಂಬುದು ನಮಗೆ ಗೊತ್ತಿದೆ. ಅವರ ಪಟ್ಟಿಯೂ ಇದೆ. ಜ.4 ರೊಳಗೆ ಅವರ ಯಾದಿಯನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡುತ್ತೇವೆ ಎಂದೂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಗ್ರಾಮೀಣ ಅಧ್ಯಕ್ಷ ನರಸಿಂಹ ಬಕ್ಕಳ, ತಾಲೂಕಿನ 32 ಗ್ರಾಪಂಗಳಲ್ಲಿ 27 ಪಂಚಾಯ್ತಿ ಬಿಜೆಪಿ ಬೆಂಬಲಿತರಾಗಿದ್ದಾರೆ. 323 ಅಭ್ಯರ್ಥಿಗಳಲ್ಲಿ 208 ಜನರು ಬಿಜೆಪಿ ಬೆಂಬಲಿತರು ಆಯ್ಕೆ ಆಗಿದ್ದಾರೆ. ಪಶ್ಚಿಮದಲ್ಲಿ 22ರಲ್ಲಿ 19 ನಮ್ಮ, ಪೂರ್ವ ಭಾಗದಲ್ಲಿ 10ರಲ್ಲಿ 8 ಬಿಜೆಪಿ ಪಾಳಯದ್ದಾಗಿದೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ಪ್ರಧಾನ ಕಾರ್ಯದರ್ಶಿ ರಮೇಶ ನಾಯಕ, ರಘುಪತಿ ಭಟ್ಟ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next