Advertisement

ದೇಶದ ಸುರಕ್ಷತೆಗಾಗಿ ಬಿಜೆಪಿ ಬೆಂಬಲಿಸಿ

12:43 PM May 11, 2018 | |

ಚಡಚಣ: ದೇಶದಲ್ಲಿ ಭಯೋತ್ಪಾದಕರು ಹಾಗೂ ಜಿಹಾದಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಭಯೋತ್ಪಾದಕರು ಹಾಗೂ ಜಿಹಾದಿಗಳು ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ. ಜಿಹಾದಿ ಮುಕ್ತವಾಗಿಸಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಜಿಹಾದಿಗಳಿಗೆ ರಕ್ಷಣೆ ಸಿಗುತ್ತಿದೆ. ದೇಶದ ಸುರಕ್ಷತೆಗಾಗಿ ನಾವೆಲ್ಲರೂ ಬಿಜೆಪಿ ಬೆಂಬಲಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

Advertisement

 ನಾಗಠಾಣ ಮತಕ್ಷೇತ್ರದ ಅಭ್ಯರ್ಥಿ ಡಾ| ಗೋಪಾಲ ಕಾರಜೋಳ ಅವರ ಪರ ಮತಯಾಚಿಸಲು ಪಟ್ಟಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ದೇಶದ ಇತಿಹಾಸದಲ್ಲಿಯೇ ಅತಿ ಭ್ರಷ್ಟವಾಗಿದ್ದು, ಜಾತಿ-ಜಾತಿಯ ನಡುವೆ ವಿಷಬೀಜ ಬಿತ್ತಿ ಧರ್ಮ ಒಡೆಯಲು ಮುಂದಾಗಿದೆ. ಹಿಂದುಗಳ ಪವಿತ್ರ ಹಬ್ಬಗಳಾದ ಗಣೇಶ ಚತುರ್ಥಿ, ಶಿವಾಜಿ ಜಯಂತಿ ಸೇರಿದಂತೆ ಮತ್ತಿತರ ಆಚರಣೆಗಳಿಗೆ ತಡೆಯೊಡ್ಡುವ ಸಿದ್ದರಾಮಯ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡುತ್ತದೆ. ಪಾಕಿಸ್ತಾನದಲ್ಲಿಯೂ ಕೂಡ ಟಿಪ್ಪು ಜಯಂತಿ ಆಚರಿಸುತ್ತಾರೆ. ಹಾಗಾದರೆ ಪಾಕಿಸ್ತಾನ ಹಾಗೂ ಕಾಂಗ್ರೆಸ್‌ ಪಕ್ಷದ ನಡುವಿನ ವ್ಯತ್ಯಾಸವೇನು ಎಂದು ಪ್ರಶ್ನಿಸಿದರು.

ಆಧುನಿಕ ಶಿಕ್ಷಣ, ಕೌಶಲ್ಯ ತರಬೇತಿ, ಉದ್ಯೋಗ ಸೃಷ್ಟಿ, ಉದ್ಯಮಸ್ನೇಹಿ ವಾತಾವರಣ, ವಿಭಜನಕಾರಿ ರಾಜಕಾರಣದಿಂದ ಮುಕ್ತಿ, ಮಹಿಳೆಯರಿಗೆ ಸುರಕ್ಷೆ ಬಗ್ಗೆ ಕಾಳಜಿವಹಿಸುವ ಬಿಜೆಪಿ ಅಭ್ಯರ್ಥಿ ಗೋಪಾಲ ಕಾರಜೋಳ
ಅವರ ಪರವಾಗಿ ಮತಚಲಾಯಿಸಿ ಎಂದು ಮನವಿ ಮಾಡಿದರು. ಅಭ್ಯರ್ಥಿ ಡಾ| ಗೋಪಾಲ ಕಾರಜೋಳ ತಮ್ಮ ಪರ ಮತ ಚಲಾಯಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ, ಜಿಪಂ ಸದಸ್ಯ ಭೀಮಾಶಂಕರ ಬಿರಾದಾರ, ತಾಪಂ ಸದಸ್ಯ ರಾಜು ಝಳಕಿ, ಮುಖಂಡರಾದ ಚಂದ್ರಶೇಖರ ಕವಟಗಿ, ಚಿದಾನಂದ ಚಲವಾದಿ, ಪ್ರಕಾಶ ಅಕ್ಕಲಕೋಟ, ಕಲ್ಲು ಉಟಗಿ, ಚಂದ್ರಶೇಖರ ನಿರಾಳೆ, ಡಾ| ಎಸ್‌. ಆರ್‌. ಡೊಣಗಾಂವ, ರಾಜೇಂದ್ರ ಮುತ್ತಿನ, ಎಸ್‌.ಆರ್‌. ಅವಜಿ, ಪ್ರಭಾಕರ ನಿರಾಳೆ, ರಾಮ ಅವಟಿ, ಅಶೋಕ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next