Advertisement
ಬೆಂಗಳೂರು ಪ್ರಸ್ಕ್ಲಬ್ ಹಾಗೂ ವರದಿಗಾರರ ಕೂಟದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಕಾಂಗ್ರೆಸ್ ಒಡೆದ ಮನೆ. ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸೋಲಿಸಲು ಬೇರೆ ಯಾರೂ ಬೇಕಿಲ್ಲ. ಅವರವರೇ ಸಾಕು ಎಂದು ಹೇಳಿದರು.
ಲಕ್ಷ ರೂ.ಸಾಲ ಮನ್ನಾ ಮಾಡುವ ತೀರ್ಮಾನ ಕೈಗೊಳ್ಳುತ್ತೇನೆ. ಅದು ಸಾಧ್ಯವಾಗದಿದ್ದರೆ ಒಂದು ಗಂಟೆಯೂ ಸಿಎಂ ಕುರ್ಚಿಯ ಮೇಲೆ ಕುಳಿತುಕೊಳ್ಳುವುದಿಲ್ಲ ಎಂದು ಶಪಥ ಮಾಡಿದರು. ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ವ್ಯತ್ಯಾಸ ಆಗಲಿಲ್ಲ. ನಾನು 2 ವರ್ಷಗಳ ಹಿಂದೆ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ದಿನದಂದು ರಾಜ್ಯಾಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ. ಅಲ್ಲಿಂದ ನಿರಂತರ ರಾಜ್ಯ ಪ್ರವಾಸ ಮಾಡಿ ಯಾರು ಅಭ್ಯರ್ಥಿಯಾದರೆ ಸೂಕ್ತ ಎಂಬ ಪಟ್ಟಿ ತಯಾರಿಸಿದ್ದೆ. ಅಮಿತ್ ಶಾ ಅವರು ಎರಡು ಪ್ರತ್ಯೇಕ ಸಂಸ್ಥೆಗಳ
ಮೂಲಕ ಸಮೀಕ್ಷೆ ನಡೆಸಿದ್ದರು. ನಾನು ಕೊಟ್ಟ ಪಟ್ಟಿ ಹಾಗೂ ಅಮಿತ್ ಶಾ ಸಿದಟಛಿಪಡಿಸಿದ ಪಟ್ಟಿ ಶೇ.95 ರಷ್ಟು ಸರಿಯಾಗಿಯೇ ಇತ್ತು. ಗೆಲ್ಲುವವರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಹೇಳಿದರು.