ಬೆಂಗಳೂರು : ಕಾಂಗ್ರೆಸ್‌ನವರು ಕೋರ್ಟ್‌ನ್ನು ಪ್ರಶ್ನಿಸುತ್ತಾರೆ. ಇಡಿ ಯನ್ನು ಪ್ರಶ್ನಿಸುತ್ತಾರೆ. ಅವರ ಅನುಕೂಲಕ್ಕೆ ತಕ್ಕಂತೆ ಕಾಂಗ್ರೆಸ್ ಮಾತನಾಡುತ್ತದೆ ಎಂದು ಬಿಜೆಪಿ ಮುಖ್ಯ ವಕ್ತಾರ ಎಂ. ಜಿ. ಮಹೇಶ್ ಅಭಿಪ್ರಾಯ ಪಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಇಡಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಶಿವಕುಮಾರ್ ಮೇಲೆ ಮನಿಲಾಂಡ್ರಿಂಗ್ ಕೇಸ್‌ನಲ್ಲಿ ಇ.ಡಿ ಚಾರ್ಜ್‌ಶೀಟ್ ಹಾಕಿದೆ. ಅವರು ಕೊತ್ವಾಲ್ ಗ್ಯಾಂಗ್‌ನಿಂದ ಬಂದವರು. ಅವರ ಈ ರೀತಿ ಪ್ರಕರಣ ನೋಡಿದರೆ ಕಾಂಗ್ರೆಸ್ ಏನು ಉತ್ತರ ಕೊಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು ಜಾಮೀನ್ ಮೇಲೆ ಇದ್ದಾರೆ. ಡಿ.ಕೆ ಶಿವಕುಮಾರ್ ಸದ್ಯದಲ್ಲೇ ಜೈಲಿಗೆ ಹೋಗುತ್ತಾರೆ. ಕಾಂಗ್ರೆಸ್‌ನವರು ಕೋರ್ಟ್‌ನ್ನು ಪ್ರಶ್ನೆ ಮಾಡುತ್ತಾರೆ. ಇ.ಡಿ ಯನ್ನು ಪ್ರಶ್ನೆ ಮಾಡುತ್ತಾರೆ. ಅವರ ಅನುಕೂಲಕ್ಕೆ ತಕ್ಕಂತೆ ಕಾಂಗ್ರೆಸ್ ಮಾತನಾಡುತ್ತಾರೆ. ಅವರಿಗೆ ಲಾಭ ಇದೆ ಅಂದರೆ ಅಂಬೇಡ್ಕರ್ ಹೆಸರು ಹೇಳುತ್ತಾರೆ. ಚುನಾವಣೆ ರಾಜಕೀಯಕ್ಕೆ ಈ ರೀತಿ ಪ್ರಕರಣ ದಾಖಲಿಸುವ ಅಗತ್ಯ ಬಿಜೆಪಿಗೆ ಇಲ್ಲ ಎಂದು ಹೇಳಿದರು.