Advertisement

ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ನವರೇ ಭಾರತ್ ಛೋಡೋ..; ಬಿಜೆಪಿ ಟೀಕೆ

12:13 PM May 16, 2022 | Team Udayavani |

ಬೆಂಗಳೂರು: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯನ್ನು ಭಾರತ್ ಛೋಡೋ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಐಟಿ ಘಟಕ ಕಾಂಗ್ರೆಸ್ ನಿರ್ಧಾರವನ್ನು ಟೀಕಿಸಿದೆ.

Advertisement

ಭಾರತ್ ಜೋಡೋ! ದೇಶವನ್ನು ಭೌಗೋಳಿಕವಾಗಿ ವಿಭಜನೆ ಮಾಡಿದ್ದು ಮಾತ್ರವಲ್ಲ, ಜಾತಿ, ಧರ್ಮ, ಭಾಷೆ, ಪ್ರಾಂತ್ಯದ ಆಧಾರದ ಮೇಲೆ ವಿಭಜನೆ ಮಾಡಿದ ಕಾಂಗ್ರೆಸ್ ಪಕ್ಷ ಈಗ ಹೊಸ ನಾಟಕ ಮಾಡುತ್ತಿದೆ ಎಂದು ಆರೋಪಿಸಿದೆ.

ಸೋತು ನೆಲೆ ಕಳೆದುಕೊಂಡು, ನೆಲಕಚ್ಚಿರುವ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಹೆಸರಿನಲ್ಲಿ ಯಾತ್ರೆಗೆ ಹೊರಟಿರುವುದು ಈ ಶತಮಾನದ ದೊಡ್ಡ ವ್ಯಂಗ್ಯ! ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿರುವಾಗ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ದೇಶವನ್ನು ಧರ್ಮ, ಜಾತಿ, ಭಾಷೆ, ರಾಜ್ಯ ಎಂದು ವಿಭಜಿಸಿತ್ತು. ಅದರ ಪರಿಣಾಮವಾಗಿ ದೇಶದ ಜನತೆ ಅಧಿಕಾರದಿಂದ ಕೆಳಗಿಳಿಸಿದರು, ಈಗ ಅಧಿಕಾರವಿಲ್ಲದ ಹತಾಶೆಯ ಕಾಂಗ್ರೆಸ್‌ ಪಕ್ಷವನ್ನು ಕಾಡುತ್ತಿದೆ. ಅದಕ್ಕಾಗಿ ಭಾರತ್‌ ಜೋಡೋ ಎಂದು ಹೊರಟಿದೆ. ಎಷ್ಟೆಂದು ನಾಟಕ ಮಾಡುವಿರಿ? ಎಂದು ವ್ಯಂಗ್ಯವಾಡಿದೆ.

ಬಿತ್ತಿದ್ದೇ ಬೆಳೆಯುತ್ತದೆ! ಅಧಿಕಾರದ ಅಮಲಿನಲ್ಲಿ, ಕುಟುಂಬವಾದದ ಭದ್ರ ಕೋಟೆಯಲ್ಲಿ ಕುಳಿತ ಕಾಂಗ್ರೆಸ್ ನಾಯಕರು ಜನರಿಂದ ಬಹುದೂರ ಸಾಗಿದ್ದರು. ಕಾಂಗ್ರೆಸ್ ಜನಸಾಮಾನ್ಯರಿಂದ ದೂರವಾಗಿದೆ ಎಂಬ ಸತ್ಯ ಒಪ್ಪಿಕೊಳ್ಳುವ ಸ್ಥಿತಿ ಈಗ ನಿರ್ಮಾಣವಾಗಿದೆ. ಕಾಂಗ್ರೆಸ್ ಹಾಗೂ ಜನಸಾಮಾನ್ಯರ ನಡುವೆ ದೊಡ್ಡ ಕಂದಕವಿದೆ. ಇದನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಭಾರತ್ ಜೋಡೋ ಹೆಸರಿನಲ್ಲಿ ಕಾಂಗ್ರೆಸ್ ದೇಶದ ಚುನಾವಣಾ ವ್ಯವಸ್ಥೆಯನ್ನು ಗತಕಾಲಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ. ಗೆದ್ದಾಗ ಇವಿಎಂ ಬಗ್ಗೆ ಮೌನ ವಹಿಸುವ ಕಾಂಗ್ರೆಸ್‌ ಪಕ್ಷ, ಸೋತಾಗ ಮಾತ್ರ ತನ್ನ ಕಳಪೆ ಪ್ರದರ್ಶನವನ್ನು ಇವಿಎಂ ಯಂತ್ರದ ಮೇಲೆ ಕಟ್ಟುತ್ತಾರೆ. ಮತಯಂತ್ರವನ್ನು ದೂಷಿಸಿ ಪಕ್ಷ ಪುನಶ್ಚೇತನಗೊಳಿಸಲು ಸಾಧ್ಯವೇ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ:ಬಿಜೆಪಿ ನಾಯಕರು ಗತಿಯಿಲ್ಲದೆ, ಮತಿಯಿಲ್ಲದ ನಿರ್ಮಲಾರನ್ನು ರಾಜ್ಯಸಭೆಗೆ ಕಳಿಸಲು ಹೊರಟಿದ್ದಾರೆ‌

Advertisement

ಪಕ್ಷ ಸಂಕಟದಲ್ಲಿ ಇದ್ದಾಗಲೆಲ್ಲ ವಿದೇಶ ಪ್ರವಾಸ ಮಾಡುತ್ತಿದ್ದ ರಾಹುಲ್ ಗಾಂಧಿ ಈಗ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಯಾತ್ರೆಗೆ ಹೊರಟಿದ್ದಾರೆ. ವಯನಾಡು ತಲುಪುವವರೆಗೆಯಾದರೂ ಈ ಜೋಡಣೆ ಕಾರ್ಯ‌ ನಿರಾತಂಕವಾಗಿ ನಡೆಯುವುದೋ ಅಥವಾ ಮಧ್ಯದಲ್ಲಿ ಇನ್ನೊಂದು ವಿದೇಶ ಪ್ರವಾಸದ ಸಾಧ್ಯತೆ ಇರಬಹುದೇ? ಎಂದು ವ್ಯಂಗ್ಯವಾಡಿದೆ.

ಸ್ವಾತಂತ್ರದ ನಂತರ ಭಾರತವನ್ನು ಅಖಂಡ ಭಾರತ ಮಾಡಿ ಜೋಡಿಸಿದ ಸರ್ದಾರ್ ವಲ್ಲಭ ಪಟೇಲ್ ಅವರನ್ನುಎಷ್ಟು ನೆನಪಿಸಿಕೊಂಡಿರಿ ಎಂದು ದೇಶಕ್ಕೆ ತಿಳಿದಿದೆ, ಈಗೇಕೆ ಈ ನಾಟಕ? ವೋಟ್ ನಿಮಗೆ ಸಿಗೋದಿಲ್ಲ! ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯಲ್ಲಿ ಜಿ23 ನಾಯಕರ ಪಾತ್ರವೇನು? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್‌ ಛೋಡೋ ಎಂದಿರುವ ನಾಯಕರು ಭಾರತ್‌ ಜೋಡೋ ಯಾತ್ರೆಗೆ ಬರುವರೇ? ಭಾರತ್‌ ಜೋಡೋ ಕಾರ್ಯಕ್ರಮದ ಬೆನ್ನಲ್ಲೇ ಕಾಂಗ್ರೆಸ್‌ ಛೋಡೋ ಅಭಿಯಾನ ಆರಂಭಗೊಳ್ಳಲಿದೆ! ಸ್ವಾತಂತ್ರದ ನಂತರದ ಭಾರತವನ್ನು ಅಖಂಡವಾಗಿಸಿದವರಲ್ಲಿ ರಾಷ್ಟ್ರಸೇವಕ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರೂ ಒಬ್ಬರು. ಸರ್ದಾರ್‌ ಅವರನ್ನೇ ಮರೆತ ಕಾಂಗ್ರೆಸ್‌ ಪಕ್ಷ ಭಾರತ್‌ ಜೋಡೋ ಅಭಿಯಾನ ಮಾಡುವುದು ಹಾಸ್ಯಾಸ್ಪದವಲ್ಲವೇ? ಎಂದು ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next