Advertisement

2024ರಲ್ಲಿ ಬಿಜೆಪಿಯನ್ನು ನಿರ್ನಾಮ ಮಾಡಬೇಕು: ಮಹಾಘಟಬಂಧನ್ ರ‍್ಯಾಲಿಯಲ್ಲಿ ಲಾಲು

04:38 PM Feb 25, 2023 | Team Udayavani |

ಪುರ್ನಿಯಾ : ನಾವು ಒಂದಾಗಿರುವವರೆಗೆ ಯಾರೂ ಮಹಾಘಟಬಂಧನ್ ಮುರಿಯಲು ಸಾಧ್ಯವಿಲ್ಲ. ನಾವು ದೇಶವನ್ನು ಉಳಿಸಬೇಕು. ಅಲ್ಪಸಂಖ್ಯಾತರ ಹಕ್ಕುಗಳನ್ನು ಉಳಿಸಬೇಕು. 2024 ನಮ್ಮ ಪಕ್ಷದ ಪ್ರಬಲ ಗೆಲುವನ್ನು ತೋರಿಸಲಿದೆ ಎಂದು ಶುಕ್ರವಾರ ಆರ್‌ಜೆಡಿ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.

Advertisement

ಇತ್ತೀಚೆಗಷ್ಟೇ ಕಿಡ್ನಿ ಚಿಕಿತ್ಸೆಗೆ ಒಳಗಾಗಿ ಸಿಂಗಾಪುರದಿಂದ ಮರಳಿದ ಲಾಲು ಪ್ರಸಾದ್ ಯಾದವ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು.ಈ ಬಾರಿ ಬಿಜೆಪಿ ಸರಕಾರ ಸೋಲಲಿದೆ. ಬಿಹಾರದಲ್ಲಿ ಮಹಾಘಟಬಂಧನ್ ಗೆಲ್ಲಲಿದೆ ಎಂದರು.

ದೇಶ ಮತ್ತು ಸಂವಿಧಾನವನ್ನು ಉಳಿಸಬೇಕು. 2024ರಲ್ಲಿ ಬಿಜೆಪಿಯನ್ನು ದೇಶದಿಂದ ನಿರ್ನಾಮ ಮಾಡಬೇಕು. ಇಂದು ದೇಶ ಛಿದ್ರವಾಗುವ ಹಂತದಲ್ಲಿದೆ. ಬಿಜೆಪಿ ಆರ್‌ಎಸ್‌ಎಸ್‌ನ ಮುಖವಾಡ ಎಂದು ಹೇಳಿದರು.

2024ರಲ್ಲಿ ದೇಶವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ. ಆರ್ ಎಸ್ ಎಸ್ ಬಯಸಿದ್ದನ್ನು ನರೇಂದ್ರ ಮೋದಿ ಮಾಡುತ್ತಾರೆ. ಒಗ್ಗಟ್ಟಾಗಿ ಇದ್ದರೆ ದೇಶ ಉದ್ಧಾರವಾಗುತ್ತದೆ. ಬಿಹಾರ ನಾಯಕರು, ಬಿಹಾರದ ಸಂದೇಶವು ದೇಶದಲ್ಲಿ ಪ್ರಭಾವ ಬೀರುತ್ತದೆ. 2015ರ ಇತಿಹಾಸ ಮರುಕಳಿಸಲಿದೆ ಎಂದರು.

ಅಮಿತ್ ಶಾ ತಿರುಗೇಟು

Advertisement

ಅಮಿತ್ ಶಾ ಅವರು ತಿರುಗೇಟು ನೀಡಿ, ಜೆಡಿಯು ಮತ್ತು ಆರ್‌ಜೆಡಿ ‘ಅಪವಿತ್ರ ಮೈತ್ರಿ’ ನೀರು ಮತ್ತು ಎಣ್ಣೆ ಇದ್ದಂತೆ. ನಿತೀಶ್ ಬಾಬು ಪ್ರಧಾನಿಯಾಗಲು ಅಭಿವೃದ್ಧಿವಾದಿಯಿಂದ ಅವಕಾಶವಾದಿಯಾಗಿ ಬದಲಾಗಿದ್ದಾರೆ. ಕಾಂಗ್ರೆಸ್ ಮತ್ತು ಆರ್‌ಜೆಡಿ ಆಶ್ರಯಕ್ಕೆ ಹೋಗಿದ್ದಾರೆ.ನಿತೀಶ್ ಕುಮಾರ್ ಅವರ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಬಿಹಾರವನ್ನು ಇಬ್ಭಾಗ ಮಾಡಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next