Advertisement

ಸಾಲ ಮನ್ನಾಕ್ಕಾಗಿ ಬಿಜೆಪಿ ಕ್ಷಮೆ ಕೇಳಬೇಕಾ?

06:00 AM Dec 21, 2018 | |

ಸುವರ್ಣಸೌಧ: ರೈತರು ಪಡೆದಿರುವ ಸಾಲ ಮೊತ್ತದ ಶೇಕಡಾ 50ರಷ್ಟು ಅಸಲು ಹಾಗೂ ಬಡ್ಡಿ ಮನ್ನಾ ಮಾಡಿ ಉಳಿದ ಹಣವನ್ನು ಸರ್ಕಾರದಿಂದ ಪಡೆಯಲು ಒಪ್ಪಿದ್ದ ರಾಷ್ಟ್ರೀಕೃತ ಬ್ಯಾಂಕ್‌ಗಳು, ನಂತರ ಹಿಂದೇಟು ಹಾಕುತ್ತಿವೆ. ಇದರ ಹಿಂದೆ ಬಿಜೆಪಿಯ ಹುನ್ನಾರವಿದೆ, ಅನು ಮಾನವೇ ಬೇಡ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
“ರಾಷ್ಟ್ರೀಕೃತ ಬ್ಯಾಂಕುಗಳ ಜತೆ ನಾನು ಮುಖ್ಯ ಮಂತ್ರಿಯಾದ ಹೊಸದರಲ್ಲಿ ನಡೆಸಿದ ಮಾತುಕತೆಗೆ ಬ್ಯಾಂಕ್‌ಗಳು ಒಪ್ಪಿದ್ದರೂ, ಈಗ ಯಾಕೆ ರಿವರ್ಸ್‌ ಹೊಡೆಯುತ್ತಿವೆ ಎಂಬುದು ನನಗೆ ಗೊತ್ತಿಲ್ಲವೇ?. ನಾನು ಯಡಿಯೂರಪ್ಪನವರ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಕ್ಷಮೆ ಕೇಳುವಂತಹ ಹಗುರ ಪದ ಬಳಸಿಯೂ ಇಲ್ಲ. ಬಿಜೆಪಿಯವರ ಎಲ್ಲ ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲು ನಾನು ಸಿದ್ಧನಿದ್ದೇನೆ. ಆದರೆ, ಅವರೇ ಸಿದ್ಧರಿಲ್ಲ ಎಂದು ತಿರುಗೇಟು ನೀಡಿದರು.

Advertisement

ರೈತರ ಎನ್‌ಪಿಎ ಖಾತೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಶೇ.50ರಷ್ಟು ಅಸಲು ಕಟ್ಟಿದರೆ, ಉಳಿದ ಶೇ.50ರಷ್ಟು ಅಸಲು ಮತ್ತು ಬಡ್ಡಿ ಮನ್ನಾ ಮಾಡಲಿದ್ದೇವೆ. ಇದರ ಉಪಯೋಗ ಪಡೆದುಕೊಳ್ಳಿ ಎಂದು ಸ್ವತ: ಬ್ಯಾಂಕ್‌ಗಳೇ ಜಾಹೀರಾತು
ನೀಡಿದ್ದವು. ಹಾಗಾಗಿ, ಅದೇ ಮಾದರಿಯಲ್ಲಿ ಮಾತು ಕತೆ ನಡೆಸಿದ್ದೇವು. ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ
ವಿಚಾರದಲ್ಲಿ ನಾನು ಪಲಾಯನ ಮಾಡುತ್ತಿಲ್ಲ. ಹತ್ತು ದಿನಗಳಲ್ಲಿ ಮೊದಲ ಕಂತಿನಲ್ಲಿ 50 ಸಾವಿರ ರೂ.ವರೆಗೆ ಮನ್ನಾ ಆಗಲಿದೆ. ಎರಡನೇ ಹಂತದಲ್ಲಿ 1.50 ಲಕ್ಷ ರೂ. ವರೆಗೆ ಒಂದೇ ಕಂತಿನಲ್ಲಿ ಮನ್ನಾ ಮಾಡಲು ಬಜೆಟ್‌ನಲ್ಲಿ ಹಣ ಮೀಸಲಿಡಲು ಚಿಂತನೆ ನಡೆಸಿದ್ದೇನೆ. ಈ ಹಿಂದೆ ನಾಲ್ಕು ಕಂತುಗಳಲ್ಲಿ ಪಾವತಿ ಮಾಡುತ್ತೇನೆ ಎಂದು ಹೇಳಿದ್ದು ನಿಜ. ಆದರೆ, ಇದೀಗ ಒಮ್ಮೇಲೆ
ಎರಡನೇ ಕಂತಿನಲ್ಲಿ ಸಾಲ ಮನ್ನಾ ಮಾಡುತ್ತೇನೆ. ಸಹಕಾರಿ ಸಂಘಗಳ ಸಾಲ ಮನ್ನಾಗೂ ಮಾರ್ಚ್‌ವರೆಗೆ ಬೇಕಾದ 2,500 ಕೋಟಿ ರೂ.ಗಳನ್ನು ಪೂರಕ ಬಜೆಟ್‌ನಲ್ಲಿ ತೆಗೆದಿರಿಸಿದ್ದೇನೆ. ಬಿಜೆಪಿಯವರಿಗೆ ಇದು ನುಂಗಲಾರದ ತುತ್ತಾಗಿದೆ ಎಂದು ಆರೋಪಿಸಿದರು.

ಬಿಜೆಪಿಯಿಂದ ಬೇಕೆಂತಲೆ ಧರಣಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಕ್ಷಮೆ ಕೇಳಿದರೆ ಮುಖ್ಯಮಂತ್ರಿ ಕುರ್ಚಿಗೆ ಘನತೆ ಬರುವುದಿಲ್ಲ. ರೈತರ ಸಾಲ ಮನ್ನಾ ಮಾಡಿದ್ದಕ್ಕೆ ನಾನು ಅವರ ಕ್ಷಮೆ ಕೇಳಬೇಕಾ?’ ಎಂದು ಪ್ರಶ್ನಿಸಿದರು. “46 ಸಾವಿರ
ಕೋಟಿ ರೂ.ಸಾಲ ಮನ್ನಾ ಆಗುವುದಿಲ್ಲ ಎಂದು ಕೊಂಡಿದ್ದರು. ಆದರೆ, ನಾನು ರೈತರಿಗೆ ಋಣಮುಕ್ತ ಪತ್ರ ಕೊಡುತ್ತಿರುವುದನ್ನು ಬಿಜೆಪಿಯವರಿಗೆ ಸಹಿಸಿ ಕೊಳ್ಳಲು ಆಗುತ್ತಿಲ್ಲ. ಹೀಗಾಗಿ, ಅವರು ಸದನದಲ್ಲಿ ಬೇಕೆಂತಲೇ ಪ್ರತಿಭಟನೆ, ಧರಣಿ ಮಾಡುತ್ತಿದ್ದಾರೆ.
ಆದರೂ, ನಾನು ಕೇಂದ್ರ ಸರ್ಕಾರದ ನೆರವಿಗೆ ಕಾಯು ವುದಿಲ್ಲ. ರಾಜ್ಯ ಸರ್ಕಾರವೇ ಋಣಮುಕ್ತ ಪತ್ರದ ಮೂಲಕ ಸಾಲಮನ್ನಾ ಸರ್ಟಿಕೇಟ್‌ ಕೊಟ್ಟ ಮೇಲೆ ಯಾವ ಬ್ಯಾಂಕ್‌ಗಳೂ ರೈತರಿಗೆ ತೊಂದರೆ ಕೊಡುವಂತಿಲ್ಲ’ ಎಂದರು.

” ನಾನು ಪ್ರತಿಪಕ್ಷ ಬಿಜೆಪಿಯವರನ್ನು ಮೆಚ್ಚಿಸಬೇಕಿಲ್ಲ. ರೈತರು ಹಾಗೂ ಜನರನ್ನು ಮೆಚ್ಚಿಸಿದರೆ ಸಾಕು. ಬಿಜೆಪಿಯವರಿಂದ ನಾನು ರೈತರ ಬಗ್ಗೆ ಕಾಳಜಿ ವಹಿಸುವುದನ್ನು ಕಲಿಯಬೇಕಿಲ್ಲ. ದೆಹಲಿಯಲ್ಲಿ ರೈತರು ಅರೆಬೆತ್ತಲೆ ಮೆರವಣಿಗೆ ಮಾಡಿದಾಗ ಯಾವ ಬಿಜೆಪಿ ನಾಯಕರು ಹೋಗಿ ಮಾತನಾಡಿಸಿದರು’ ಎಂದು ಪ್ರಶ್ನಿಸಿದರು. 

ನಾನು ಉತ್ತರ ಕರ್ನಾಟಕ ವಿರೋಧಿಯಲ್ಲ: ನಾನು ಉತ್ತರ ಕರ್ನಾಟಕ ವಿರೋಧಿಯಲ್ಲ. ಅನಗತ್ಯವಾಗಿ ಆ ರೀತಿ ಬಿಂಬಿಸಲಾಗುತ್ತಿದೆ. ಒಟ್ಟಾರೆ 46,753 ಕೋಟಿ . ಸಾಲ ಮನ್ನಾ ಪೈಕಿ ಉತ್ತರ ಕರ್ನಾಟಕದ 12 ಜಿಲ್ಲೆಗಳ ಬಾಬ್ತು 29,190 ಕೋಟಿ ರೂ. ಆ ಪೈಕಿ
ಬೆಳಗಾವಿಯದೇ 4719 ಕೋಟಿ ರೂ., ಬಾಗಲಕೋಟೆಯದು 3962 ಕೋಟಿ ರೂ., ವಿಜಯಪುರದ್ದು 3271 ಕೋಟಿ ರೂ., ಕಲಬುರಗಿಯದು 3065 ಕೋಟಿ ರೂ. ಇದೆ. ಕರಾವಳಿ ಭಾಗದ್ದು 1,507 ಕೋಟಿ ರೂ, ಮಧ್ಯ ಕರ್ನಾಟಕ ಭಾಗದ್ದು 3981 ಕೋಟಿ ರೂ., ಹಳೇ ಮೈಸೂರು ಭಾಗದ್ದು 12,073 ಕೋಟಿ ರೂ. ಎಂದು ವಿವರಿಸಿದರು.

Advertisement

ಅನುದಾನ ಕಡಿತ ಮಾಡಿಲ್ಲ: ಹಿಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‌ ಹಾಗೂ ಸಮ್ಮಿಶ್ರ ಸರ್ಕಾರ ಬಂದ ನಂತರ ಮಂಡಿಸಿದ ಬಜೆಟ್‌ ನಲ್ಲಿ ಘೋಷಿಸಿದ ಯಾವುದೇ ಯೋಜನೆಗಳಿಗೆ ಅನುದಾನ ಕಡಿತ ಮಾಡಿಲ್ಲ ಹಾಗೂ ಯೋಜನೆ
ರದ್ದುಪಡಿಸಿಲ್ಲ. ನೀರಾವರಿ ಇಲಾಖೆ, ಅಲ್ಪಸಂಖ್ಯಾತರ ಅಥವಾ ಯಾವುದೇ ಇಲಾಖೆಯ ಒಂದೇ ಒಂದು ಕಾರ್ಯಕ್ರಮವನ್ನೂ ನಿಲ್ಲಿಸಿಲ್ಲ. ಅನುದಾನವನ್ನು ಕಡಿತ ಮಾಡಿಲ್ಲ. ಬಿಜೆಪಿಯವರು ಸುಮ್ಮನೆ ಕಟ್ಟು ಕಥೆ ಸೃಷ್ಟಿಸುತ್ತಿದ್ದಾರೆ. ಮಾಧ್ಯಮಗಳ ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಮಗೂ ಉ. ಕ.ದ ಬಗ್ಗೆ ಕಾಳಜಿ ಇದೆ 
ವಿಧಾನ ಪರಿಷತ್‌: ಮಹಾರಾಷ್ಟ್ರದವರು ಪದೇ ಪದೆ ಬೆಳಗಾವಿಯನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದರು. ಹೀಗಾಗಿ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರಕ್ಕೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇದು ಕನ್ನಡಿಗರದ್ದು ಎಂಬ ಸಂದೇಶವನ್ನು ನೀಡುವ
ಉದ್ದೇಶದಿಂದ 2006ರಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಗುರುವಾರ ನಡೆದ ಕಲಾಪದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆಯಾಗಬೇಕು. ಸರಕಾರಕ್ಕೆ ಇದರ ಬಗ್ಗೆ ಕಾಳಜಿ ಇಲ್ಲ ಎಂದು ಪ್ರತಿಪಕ್ಷದವರು ಪ್ರತಿಭಟನೆ ನಡೆಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ, 2006ರಲ್ಲಿ ಮಹಾರಾಷ್ಟ್ರದವರು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ, ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಒತ್ತಾಯ ಮಾಡಿದ್ದರು. ಇದಕ್ಕೆ ನಾವು ತಕ್ಕ ಉತ್ತರ ನೀಡಬೇಕಾಗಿತ್ತು. ಆಗ ಇಲ್ಲಿ ಅಧಿವೇಶನ ನಡೆಸುವ ನಿರ್ಧಾರ ಕೈಗೊಂಡೆವು ಎಂದರು.

2006ರಲ್ಲಿ ಕೆಎಲ್‌ಇ ಸಂಸ್ಥೆಯ ಆವರಣದಲ್ಲಿ ಮೊದಲ ಅಧಿವೇಶನ ನಡೆಸಿದ ನಂತರ ಇಲ್ಲಿ ವರ್ಷದಲ್ಲಿ ಒಮ್ಮೆ ಅಧಿವೇಶನ
ನಡೆಸಬೇಕು ಎಂಬ ಉದ್ದೇಶದಿಂದ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಲಾಯಿತು. ಈ ಸೌಧವನ್ನು ಕಟ್ಟಿದ್ದು ಆಖಂಡ ಕರ್ನಾಟಕ ಒಡೆಯಬೇಕು ಎಂಬ ಉದ್ದೇಶದಿಂದಲ್ಲ. ನಮಗೂ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದೆ. ಇಲ್ಲಿನ ಸಮಸ್ಯೆಗಳ ಬಗ್ಗೆ ಕಳಕಳಿ ಇದೆ ಎಂದು ಪ್ರತಿಪಕ್ಷ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದರು. 2006ರ ನಂತರ ಡಾ.ನಂಜುಂಡಪ್ಪ ವರದಿ ಜಾರಿಗೆ ಪ್ರಾಮಾಣಿಕವಾಗಿ ಚಾಲನೆ ನೀಡಲಾಗಿದೆ. ಇದರ ಬಗ್ಗೆ ವಿಪಕ್ಷದವರು ಚರ್ಚೆಗೆ ಸಿದಟಛಿರಾದರೆ ನಾವು ಅದಕ್ಕೆ ತಯಾರಿದ್ದೇವೆ.
ಉತ್ತರ ನೀಡಲು ಸಮರ್ಥರಾಗಿದ್ದೇವೆ ಎಂದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ದೇಶದಲ್ಲಿ ರಾಜಕೀಯವಾಗಿ ಬದಲಾವಣೆ ಗಾಳಿ ಬೀಸುತ್ತಿದೆ. 11 ಲೋಕಸಭೆ ಕ್ಷೇತ್ರಗಳ ಉಪ ಚುನಾವಣೆ, ರಾಜ್ಯದಲ್ಲಿನ ಐದು ಉಪ ಚುನಾವಣೆ, ಇದೀಗ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಅದನ್ನು
ಸಾಬೀತುಪಡಿಸಿದೆ. ದೇಶದ ರಾಜಕೀಯ ಬದಲಾವಣೆ ರಾಜ್ಯದಿಂದಲೇ ಆರಂಭವಾಗಿದೆ. 

 ಎಚ್‌.ಡಿ.ಕುಮಾರಸ್ವಾಮಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next