ನೀಡಬಲ್ಲ ಅಭ್ಯರ್ಥಿಗಳ ಶೋಧ ಕಾರ್ಯಕ್ಕೆ ಇಳಿದಿದೆ. ಕಾಂಗ್ರೆಸ್ ಸಂಸದೀಯ ನಾಯಕ ಡಾ.ಮಲ್ಲಿ ಕಾರ್ಜುನ ಖರ್ಗೆ ಪ್ರತಿನಿಧಿಸುವ ಕಲಬುರಗಿ ಲೋಕ ಸಭೆ ಕ್ಷೇತ್ರ ಹಾಗೂ ಕೇಂದ್ರ ಮಾಜಿ ಗೃಹ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಸುಶೀಲಕುಮಾರ ಶಿಂಧೆ
ಅವರ ಸೊಲ್ಲಾಪುರ ಕ್ಷೇತ್ರದಲ್ಲಿ ಅವರ ವಿರುದ್ಧ ಯಾವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ ಸುಲಭವಾಗಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಮುಳುಗಿದೆ.
Advertisement
ಕಲಬುರಗಿಯಿಂದ ಮಲ್ಲಿಕಾರ್ಜುನ ಖರ್ಗೆ 3ನೇ ಬಾರಿಗೆ ಗೆಲುವು ಬಯಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿ ಯಾರೆಂಬುದು ಇನ್ನೂ ಅಂತಿಮಗೊಂಡಿಲ್ಲ. ಅದೇ ರೀತಿ ಮಹಾರಾಷ್ಟ್ರದ ಸೊಲ್ಲಾಪುರ ಲೋಕಸಭೆ ಕ್ಷೇತ್ರದಿಂದ ಮಾಜಿ ಸಚಿವ ಸುಶೀಲಕುಮಾರ ಶಿಂಧೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಇದು ತಮ್ಮ ಕೊನೇ ಚುನಾವಣೆ ಎಂಬುದಾಗಿ ಘೋಷಿಸಿ ದ್ದಾರೆ. ಹೀಗಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ರಾಷ್ಟ್ರ ನಾಯಕರಿಗೆ ಬಿಜೆಪಿಯಿಂದ ಎದುರಾಳಿ ಯಾರು ಎನ್ನುವುದೇ ಎರಡೂ ಜಿಲ್ಲೆಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಸಲ ನರೇಂದ್ರ ಮೋದಿ ಹವಾ ಜೋರಾಗಿತ್ತು. ಹೀಗಾಗಿ ಹೊಸಬರಾಗಿಯೂ ಬನಸೋಡೆ ಗೆಲುವು ಸಾಧಿಸಿದರು. ಆದರೆ ಈ ಸಲ ಮೋದಿ ಹೆಸರು ಜತೆಗೆ ಸ್ಥಳೀಯವಾಗಿ ಎಲ್ಲ ನಿಟ್ಟಿನಿಂದ ಬಲಿಷ್ಠರಾದರೆ ಗೆಲುವು ಸುಲಭವಾಗುತ್ತದೆ ಎಂಬುದಾಗಿ ಬಿಜೆಪಿ ವರಿಷ್ಠ
ಮಂಡಳಿ ನಂಬಿದ್ದರಿಂದ ಮಠಾಧೀಶರ ಹೆಸರು ಮುಂಚೂಣಿಗೆ ಬಂದಿವೆ. ಹೀಗಾಗಿ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಗೌಡಗಾಂವ ಮಠದ ಡಾ.ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಹೊಟಗಿ ಮಠದ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿದೆ. ಗೌಡಗಾಂವದ ಡಾ.ಜಯಸಿದ್ದೇಶ್ವರ ಸ್ವಾಮೀಜಿ
ಈಗಾಗಲೇ ಹಲವು ಗ್ರಾಮಗಳನ್ನು ಸುತ್ತಾಡುತ್ತಿದ್ದು, ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಅದೇ ರೀತಿ ಹೊಟಗಿ ಶ್ರೀಗಳನ್ನು ಪಕ್ಷದ ವರಿಷ್ಠರು ಸಂಪರ್ಕಿಸಿದ್ದಾರೆ. ಡಾ.ಜಯಸಿಭ್ಯ ಸ್ವಾಮೀಜಿ ಭಾಷಾ ಪ್ರೌಢಿಮೆ ಜತೆಗೆ ವಾಕ್ಚಾತುರ್ಯ ಹೊಂದಿದ್ದು, ಹೆಚ್ಚಿನ ಭಕ್ತರ ಸಂಪರ್ಕ ಹೊಂದಿದ್ದಾರೆ. ಇವರು ಅಭ್ಯರ್ಥಿಯಾದರೆ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ ನೀಡಬಲ್ಲರು ಎನ್ನುವುದು ಪಕ್ಷದಲ್ಲಿನ ಲೆಕ್ಕಾಚಾರ. ಬೇಡ ಜಂಗಮ ಆಧಾರದ
ಮೇಲೆ ಸ್ವಾಮೀಜಿ ಸ್ಪರ್ಧಿಸಿದರೆ ಮೇಲ್ವರ್ಗದ ಮತಗಳ ಜತೆಗೆ ಇತರ ಸಮುದಾಯಗಳ ಮತಗಳನ್ನು ಸರಳವಾಗಿ ಸೆಳೆಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ. ಇನ್ನುಳಿದಂತೆ ರಾಜ್ಯಸಭೆ ಸದಸ್ಯರಾಗಿರುವ ಪುಣೆಯ ಅಮರ ಸಾಬಳೆ ಸ್ಪರ್ಧಿಸುವ ಕುರಿತಾಗಿ
ಮಾತುಗಳು ಕೇಳಿ ಬರುತ್ತಿವೆ. ಇನ್ನೊಂದೆಡೆ ಹಾಲಿ ಸಂಸದರೂ ಮತ್ತೂಂದು ಅವಕಾಶಕ್ಕಾಗಿ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಸೊಲ್ಲಾಪುರ ಜಿಲ್ಲೆಯಿಂದ ವಿಜಯಕುಮಾರ ದೇಶಮುಖ, ಸುಭಾಷ ದೇಶ ಮುಖ ಇಬ್ಬರೂ ಸಚಿವರು ಪ್ರತಿನಿಧಿಸುತ್ತಿದ್ದು, ಇವರಿ
ಬ್ಬರ ಮೇಲೆ ಅಭ್ಯರ್ಥಿ ಆಯ್ಕೆ ಹೆಚ್ಚು ಅವಲಂಬಿತವಾಗಿದೆ.
Related Articles
ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನದಿಂದ ವಂಚಿತರಾಗಿದ್ದರಿಂದ ಪಕ್ಷದ ಮೇಲೆ ಸ್ವಲ್ಪ ಮುನಿಸಿಕೊಂಡಿದ್ದಾರೆ. ಇದು ಯಾವ ಸ್ವರೂಪ ಪಡೆದು ಕೊಳ್ಳುತ್ತದೆ ಎಂಬುದರ ಮೇಲೆ ಎಲ್ಲವೂ ಅಡಗಿದೆ.
Advertisement
ಮೋದಿ ಭಾಷಣದ ಮೇಲೆ ಕಣ್ಣುನರೇಂದ್ರ ಮೋದಿ 2014ರ ಫೆ.28ರಂದು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಸಂದರ್ಭದಲ್ಲಿ ಕಲಬುರಗಿಯಲ್ಲಿ ಪಕ್ಷದ ವಿಭಾಗೀಯ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದ್ದರು. ತದನಂತರ ಸೊಲ್ಲಾಪುರದಲ್ಲೂ ಚುನಾವಣೆ ಪ್ರಚಾರದ ಭಾಷಣ ಮಾಡಿದ್ದರು. ಸೊಲ್ಲಾಪುರದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ ಕಲಬುರಗಿಯಲ್ಲಿ ಸೋತಿತು. ಆದರೆ ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರ ವೇಳೆ 2018ರ ಮೇ 3ರಂದು ಕಲಬುರಗಿಯಲ್ಲಿ ಚುನಾವಣೆ ಪ್ರಚಾರ ಮಾಡುವಾಗ ಪ್ರಧಾನಿ ಮೋದಿ, ದಲಿತರ ಮತಗಳನ್ನು ಪಡೆದ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು
ಮುಖ್ಯಮಂತ್ರಿಯನ್ನಾಗಿ ಮಾಡದೇ ಪಕ್ಷ ಅವರನ್ನು ಕೈ ಕೊಟ್ಟಿದೆ ಎಂದು ಅನುಕಂಪದ ಮಾತುಗಳನ್ನಾಡಿದ್ದರು. ಆದರೆ ಈ ಸಲ ಪ್ರಚಾರಕ್ಕೆ ಬಂದು ಏನು ಹೇಳ್ತಾರೆ ಎಂಬುದು ಕುತೂಹಲ ಮೂಡಿಸಿದೆ. ●ಹಣಮಂತರಾವ ಭೈರಾಮಡಗಿ