Advertisement

ಕಾಂಗ್ರೆಸ್‌ ಫೈಲ್ಸ್‌ 3ನೇ ವೀಡಿಯೋ ಬಿಡುಗಡೆ

12:55 AM Apr 05, 2023 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಫೈಲ್ಸ್‌ ವೀಡಿಯೋ ಬಿಡುಗಡೆ ಮೂಲಕ ಕಾಂಗ್ರೆಸ್‌ ಸರಕಾರದ ಭ್ರಷ್ಟಾಚಾರ ಬಯಲಿಗೆಳೆಯುವ ಪಣತೊಟ್ಟಿರುವ ಬಿಜೆಪಿ, ಕಾಂಗ್ರೆಸ್‌ ಫೈಲ್ಸ್‌ನ 3ನೇ ವೀಡಿಯೋ ಬಿಡುಗಡೆಗೊಳಿಸಿದೆ.

Advertisement

ಈ ಮೂಲಕ ಯುಪಿಎ ಸರಕಾರ, ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಅಕ್ರಮವೆಸಗಿ 1.86 ಲಕ್ಷ ಕೋಟಿ ರೂ.ಲೂಟಿ ಮಾಡಿದೆ ಎಂದು ಆರೋಪಿಸಿದೆ. ಬಿಜೆಪಿ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಂಗಳವಾರ ವೀಡಿಯೋ ಅಪ್‌ಲೋಡ್‌ ಮಾಡಿದೆ.

ಅದಕ್ಕೆ “ಕಲ್ಲಿದ್ದಲು ಹಗರಣದಲ್ಲಿ ಕಪ್ಪಾದ ಕೈ’ ಎನ್ನುವ ಶೀರ್ಷಿಕೆ ನೀಡಲಾಗಿದೆ. 2004 ರಿಂದ 2009ರ ಅವಧಿಯಲ್ಲಿ ಸರಕಾರದ ಬೊಕ್ಕಸಕ್ಕೆ 1.86ಲಕ್ಷ ಕೋಟಿ ರೂ. ನಷ್ಟವಾಗಿದೆ. ಕಲ್ಲಿದ್ದಲು ಗಣಿಗಳನ್ನು ಸರಿಯಾಗಿ ಹಂಚಿಕೆ ಮಾಡದೆ ಸರಕಾರಕ್ಕೆ ನಷ್ಟವಾಗಿತ್ತು ಎಂದು ಬಿಜೆಪಿ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next