Advertisement

ಇಂದು ಬಿಜೆಪಿ 89 ರ‍್ಯಾಲಿ: ನಡ್ಡಾ,ಯೋಗಿ, ಗಡ್ಕರಿ ಭಾಗಿ

10:51 PM Nov 17, 2022 | Team Udayavani |

ಗಾಂಧಿನಗರ: ಗುಜರಾತ್‌ ವಿಧಾನಸಭೆಯ 93 ಸ್ಥಾನ ಗಳಿಗೆ ಮೊದಲ ಹಂತದಲ್ಲಿ ಡಿ.1ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಒಂದೇ ದಿನ 89 ಕ್ಷೇತ್ರಗಳಲ್ಲಿ ಬಿಜೆಪಿ ಬೃಹತ್‌ ಪ್ರಚಾರ ರ್ಯಾಲಿಗಳನ್ನು ಹಮ್ಮಿಕೊಂಡಿದೆ.

Advertisement

ಈ ರ್ಯಾಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್‌ ಸೇರಿದಂತೆ ಪ್ರಮುಖ ನಾಯಕರು ಭಾಗವಹಿ ಸುತ್ತಿದ್ದಾರೆ. ನವ್ಸಾರಿ, ಅಂಕಲೇಶ್ವರ ಮತ್ತು ರಾಜ್‌ಕೋಟ್‌ ಪೂರ್ವದಲ್ಲಿ ನಡೆಯಲಿರುವ ಚುನಾವಣಾ ರ್ಯಾಲಿಗಳಲ್ಲಿ ಜೆ.ಪಿ.ನಡ್ಡಾ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೌರಾಷ್ಟ್ರ, ಕಛ್ ಮತ್ತು ದಕ್ಷಿಣ ಗುಜರಾತ್‌ನ ಭಾಗ ಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನ.20ರಿಂದ 22ರ ವರೆಗೆ ಸೌರಾಷ್ಟ್ರ ಭಾಗದಲ್ಲಿ ನಡೆಯುವ ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಲ್ಫೇಶ್‌ ಠಾಕೂರ್‌ ಉಮೇವಾರಿಕೆ ಸಲ್ಲಿಕೆ: ಗುಜ ರಾತ್‌ನ ಗಾಂಧಿನಗರ ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಒಬಿಸಿ ನಾಯಕ ಅಲ್ಫೇಶ್‌ ಠಾಕೂರ್‌ ಅವರು ಗುರುವಾರ ಉಮೇವಾರಿಕೆ ಸಲ್ಲಿಸಿದರು. ಈ ವೇಳೆ ಅವರೊಂದಿಗೆ ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಜತೆಗಿದ್ದರು. ಈ ಹಿಂದೆ 2019ರಲ್ಲಿ ನಡೆದ ರಾಧಾನ್‌ಪುರ ಉಪಚುನಾವಣೆ ಯಲ್ಲಿ ಅಲ್ಫೇಶ್‌ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಅವರು ಕ್ಷೇತ್ರವನ್ನು ಬದಲಿಸಿದ್ದಾರೆ. ಈ ಹಿಂದೆ ಪಾಟೀ ದಾರ್‌ ಸಮುದಾಯಕ್ಕೆ ಒಬಿಸಿ ಮೀಸಲು ಕಲ್ಪಿಸ ಬೇಕೆಂದು ಆಗ್ರಹಿಸಿ ಅಲ್ಫೆàಶ್‌ ಠಾಕೂರ್‌ ನೇತೃತ್ವದಲ್ಲಿ ಬೃಹತ್‌ ಹೋರಾಟ ನಡೆದಿತ್ತು.

ಮೂವರು ಅಭ್ಯರ್ಥಿಗಳು ಅಂತಿಮ:  ಎರಡನೇ ಹಂತದಲ್ಲಿ ನಡೆಯುವ ಚುನಾವಣೆಗೆ ಖೇರಾಲು, ಮಾನ್ಸಾ, ಗರ್ಬಡಾ ಸೇರಿ ಒಟ್ಟು ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದೆ. ಒಟ್ಟು 182 ಕ್ಷೇತ್ರಗಳ ಪೈಕಿ ಇದುವೆರೆಗೂ 181 ಕ್ಷೇತ್ರ ಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಮಂಜಾಲ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹೆಸರು ಘೋಷಣೆ ಮಾತ್ರ ಬಾಕಿ ಉಳಿದಿದೆ.

Advertisement

1995ರಿಂದ ಇಲ್ಲಿಯವೆರೆಗೆ ಸತತವಾಗಿ ಆರು ಅವಧಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಗುಜರಾತ್‌ ಸಿಎಂ ಆಗಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ರಾಜ್ಯದ ಅಭಿವೃದ್ಧಿ ಪಥ  ವನ್ನೇ ಮುಂದಿನ ಹಂತಕ್ಕೆ ತೆಗದುಕೊಂಡು ಹೋಗಿ  ದ್ದರು.ಈ ಹಿಂದಿನ ಚುನಾವಣೆಗಳಲ್ಲಿ ಭಾರಿ ಬಹುಮತಕ್ಕೆ ಹೋಲಿಸಿದರೆ ಕಳೆದ ಬಾರಿ 99 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಮಾತ್ರ ಬಿಜೆಪಿಗೆ ಶಕ್ತವಾಯಿತು.

ಬಿಜೆಪಿ ಭದ್ರ ಕೋಟೆಯನ್ನು ಭೇದಿಸಲು ಕಾಂಗ್ರೆಸ್‌ ಮತ್ತು ಆಪ್‌ ಮುಂದಾಗಿದೆ. ಈಗಾಗಲೇ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಇನ್ನೊಂದೆಡೆ, ಕೆಲವು ದಿನಗಳ ಹಿಂದೆ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಗೊಳಿಸಿದ ಕಾಂಗ್ರೆಸ್‌, ರಾಜ್ಯಾದ್ಯಂತ ಬೃಹತ್‌ ಪ್ರಚಾರ ರ್ಯಾಲಿ  ಗಳನ್ನು ಆಯೋಜಿಸಿದೆ.

ರ್ಯಾಲಿಯಲ್ಲಿ ಭಾಗವಹಿಸುತ್ತಿರುವ ಪ್ರಮುಖರು:

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ನರೇಂದ್ರ ಸಿಂಗ್‌ ತೋಮರ್‌, ಅನುರಾಗ್‌ ಠಾಕೂರ್‌, ಜನರಲ್‌ ವಿ.ಕೆ.ಸಿಂಗ್‌, ಫ‌ಗ್ಗನ್‌ ಸಿಂಗ್‌ ಕುಲಸ್ತೆ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫ‌ಡ್ನವೀಸ್‌.

Advertisement

Udayavani is now on Telegram. Click here to join our channel and stay updated with the latest news.

Next