Advertisement

ದಯಾನಿಧಿ ಉಚ್ಚಾಟನೆ ಖಂಡಿಸಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಂದ ಮೋಂಬತ್ತಿ ಮೆರವಣಿಗೆ

08:49 PM Jul 06, 2022 | Team Udayavani |

ಚಾಮರಾಜನಗರ: ಬಿಜೆಪಿಯಿಂದ ತಾ.ಪಂ.ಮಾಜಿ ಉಪಾಧ್ಯಕ್ಷ ಬಿಜೆಪಿ ಮುಖಂಡ ಪಿ.ಎನ್. ದಯಾನಿಧಿ ಅವರನ್ನು ಪಕ್ಷದಿಂದ 6 ವರ್ಷಗಳವರಗೆ ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷರ ವಿರುದ್ದ , ಬಿಜೆಪಿ ಕಮಿಟಿ ಹಟಾವೋ, ಬಿಜೆಪಿ ಬಚಾವೋ ಎಂಬ ಘೋಷ ವಾಕ್ಯದಡಿ ಸಾವಿರಾರು ಮಂದಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಬುಧವಾರ ರಾತ್ರಿ ನಗರದಲ್ಲಿ ಮೋಂಬತ್ತಿ ಹಿಡಿದು ಮೌನ ಪ್ರತಿಭಟನೆ ನಡೆಸಿದರು.

Advertisement

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ತ್ಯಾಗರಾಜ ರಸ್ತೆ, ನಗರಸಭೆ ಕಚೇರಿ ವೃತ್ತ, ಅಗ್ರಹಾರ ಬೀದಿ, ಭುವನೇಶ್ವರಿ ವೃತ್ತಕ್ಕೆ ತಲುಪಿ ವಾಪಸ್ ಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಸಮಾವೇಶಗೊಂಡರು.

ಮೆರವಣೆಗೆಯಲ್ಲಿ ಬಿಜೆಪಿ ಮುಖಂಡ ಚಿಕ್ಕಕೂಸಪ್ಪ ಮಾತನಾಡಿ, ಜಿಲ್ಲಾ ಬಿಜೆಪಿ ಸರ್ವಾಧಿಕಾರಿ ಧೋರಣೆಯಿಂದ ವರ್ತಿಸುತ್ತಿದೆ. ಪ್ರಾಮಾಣಿಕ ಕಾರ್ಯಕರ್ತರಿಗೆ ಉಳಿಗಾಲವಿಲ್ಲ. ಕಾಂಗ್ರೆಸ್ ವಕ್ತಾರರಂತೆ ಜಿಲ್ಲಾ ಸಮಿತಿ ವರ್ತಿಸುತ್ತಿದೆ ಈ ಸಮಿತಿ ಇದ್ದರೆ ಜಿಲ್ಲೆಯಲ್ಲಿ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಬಳಗ ಎಂದು ತಾರತಮ್ಯ ಮಾಡುವ ಜತೆಗೆ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡುವ ಕೆಲಸ ನಿರಂತರವಾಗಿದೆ. ಇದಕ್ಕೆ ದಯಾನಿಧಿ ಅವರ ಉಚ್ಛಾಟನೆಯೇ ಸಾಕ್ಷಿಯಾಗಿದೆ ಎಂದರು.

ಇದನ್ನೂ ಓದಿ : ವೀರೇಂದ್ರ ಹೆಗ್ಗಡೆ, ಇಳಯರಾಜ,ವಿಜಯೇಂದ್ರ ಪ್ರಸಾದ್‌, ಪಿಟಿ ಉಷಾ, ರಾಜಸಭೆಗೆ ನಾಮನಿರ್ದೇಶನ

Advertisement

ಬಿಜೆಪಿ ಜಿಲ್ಲಾ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಪಕ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಕಡೆಗಣಿಸಿ, ಕೆಲವೇ ಮಂದಿ ಜಿಲ್ಲಾ ಬಿಜೆಪಿಯಲ್ಲಿ ಪ್ರಾಬಲ್ಯರಾಗುತ್ತಿದ್ದಾರೆ. ತಮಗಾಗದವರನ್ನು ತುಳಿಯಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.

ಮೆರವಣೆಗೆಯಲ್ಲಿ ರಮೇಶ್ ಬಾಬು, ಸುಪ್ರೀತ್ ವೀರನಪುರ, ಚೆಲುವರಾಜ್, ಶಶಿ, ಪ್ರಜ್ವಲ್ ನಾಯಕ, ಪ್ರವೀಣ್, ಗಿರೀಶ್ ಪುಣಜನೂರು, ಮಹೇಶ್, ಮಾಧುಮಂಗಲ, ದೇವರಾಜ್, ರಾಜಪ್ಪಮಂಗಲ, ಶಿವರುದ್ರಸ್ವಾಮಿ,ಕುರ್ಮಾ, ರವಿ, ನಾಗಶೆಟ್ಡಿ ಗುರುಪ್ರಸಾದ್ ಸೋಮವಾರಪೇಟೆ, ರಾಜ್ ಮಲ್ಲು, ಗಿರೀಶ್, ಅಭಿಷೇಕ್, ಸಂತೋಷ್ ಹೆಬ್ಬಸೂರು ಮುಂತಾದವರು ಭಾಗವಹಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next