Advertisement
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಯಾವ ಹಿನ್ನೆಲೆಯಲ್ಲಿ ಪತ್ರ ಬರೆದಿದ್ದಾರೋ ನನಗಂತೂ ಗೊತ್ತಿಲ್ಲ, ಈ ವಿಷಯವಾಗಿ ನೀವು ಅವರನ್ನೇ ಕೇಳುವುದು ಸೂಕ್ತ ಎಂದರು.
Related Articles
Advertisement
ಇಂಥ ಯಾವ ಘಟನೆಗಳು, ಪ್ರಕರಣಗಳ ಕುರಿತೂ, ಕೇಂದ್ರ ಸರ್ಕಾರ ನಡೆಸುವವರು, ಬಿಜೆಪಿ ನಾಯಕರು ಮಾತನಾಡುವುದಿಲ್ಲ. ಆದರತೆ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುವಾಗ ಸಲ್ಲದ ಆರೋಪ ಮಾಡಿ, ಕೋಮು ಗಲಭೆಗಳ ಗೂಬೆ ಕೂಡಿಸುವ ಕೆಲಸ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರು ರಾಜಕೀಯವಾಗಿ ಇಂಥ ಆರೋಪಗಳನ್ನು ಮಾಡುತ್ತ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ ಪತನವಾಗಲಿದೆ ಎಂದು ಗಿಮಿಕ್ ಮಾಡುತ್ತಿದ್ದಾರೆ. ಗಲಭೆಗಳಾಗುತ್ತಲೇ 24 ಗಂಟೆಗಳಲ್ಲೇ ಇವರು ಟೀಕೆ ಆರಂಭಿಸುತ್ತಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ಕೇಂದ್ರದಲ್ಲಿ 10 ವರ್ಷಗಳಿಂದ ಅಧಿಕಾರದಲ್ಲಿರವ ಬಿಜೆಪಿ, ಹಿಂದೂ-ಮುಸ್ಲಿಂ ಎನ್ನುತ್ತಲೇ ಬಂದಿದೆ. ಇಷ್ಟಕ್ಕೂ ಇವರು ಯಾವ ಹಿಂದೂ, ಯಾವ ಮುಸ್ಲಿಮರನ್ನು ಬಡ ರೇಖೆಯಿಂದ ಮೇಲೆ ಎತ್ತುವ ಕೆಲಸ ಮಾಡಿದ್ದಾರೆ. ಜನ ಕಲ್ಯಾಣಕ್ಕೆ ಮಾಡಿರುವ ಇವರ ಕೆಸಲಗಳನ್ನು ತೋರಿಸಿ ಎಂದು ಟೀಕಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಚಿವ ಸಂತೋಷ ಲಾಡ್, ಹಿಂದಿನ ಸರ್ಕಾರಗಳಲ್ಲೂ ಜಿಡಿಪಿ ಚನ್ನಾಗಿಯೇ ಇತ್ತು. ಭಾರತ ಐದನೇ ಸ್ಥಾನದಲ್ಲಿತ್ತು. ಈಗ ಮೂರನೇ ಸ್ಥಾನಕ್ಕೆ ಹೋಗಿದೆ ಎಂದರು.
ಇದನ್ನೂ ಓದಿ:Beauty Tips: ತ್ವಚೆಯ ಸೌಂದರ್ಯ ಹಾಗೂ ಆರೋಗ್ಯ ಕಾಪಾಡಲು ಕಾಫಿಪುಡಿ ಬಳಸಿ…
ಹಿಂದಿನವರು ಉತ್ತಮ ಆಡಳಿತ ನೀಡಿ ಐದನೇ ಸ್ಥಾನಕ್ಕೆ ತಂದಿದ್ದರಿಂದಲೇ ಮೂರನೇ ಸ್ಥಾನಕ್ಕೆ ಹೋಗಲು ಕಾರಣವಾಗಿದೆ. ಆದರೆ ಇವರ ಕಾಲದಲ್ಲಿ ಮಾತ್ರ ಜಿಡಿಪಿ ದರ ಎಲ್ಲಾ ಪ್ರಚಾರ ಮಾಡುತ್ತಿದ್ದಾರೆ. ಇಷ್ಟಕ್ಕೂ ಅಮೇರಿಕಾ, ಚೀನಾ ದೇಶಗಳ ಜಿಡಿಪಿ ದರ ಎಷ್ಟಿದೆ, ಚೀನಾ ವಿಶ್ವದಲ್ಲೇ ಅಧಿಕ ಜನಸಂಖ್ಯೆ ಹೊಂದಿದ್ದು, ನಾವು ಅವರಿಗಿಂತ ಕೆಳಗಿದ್ದೇವೆ ಎಂಬುದನ್ನು ಜನರ ಮುಂದಿಡಲಿ ಎಂದು ಆಗ್ರಹಿಸಿದರು.
ಲೋಸಕಸಭಾ ಚುನಾವಣೆ ಹತ್ತಿರ ಬರುತಿರುವ ಕಾರಣ ಬಿಜೆಪಿ ರಾಜಕೀಯ ಗಿಮಿಕ್ ಮಾಡುತ್ತಾರೆ, ಕಳೆದ ಚುನಾವಣೆ ಪೂರ್ವದಲ್ಲಿ ಪುಲ್ವಾಮಾ ಸೈನಿಕರ ಮೇಲಿನ ದಾಳಿ ಪ್ರಕರಣವನ್ನು ದಾಳವಾಗಿ ಮಾಡಿಕೊಂಡರು. 350 ಕೆ.ಜಿ.ಗೂ ಹೆಚ್ಚು ಆರ್.ಡಿ.ಎಕ್ಸ್. ಎಲ್ಲಿಂತ ಬಂತು, ಭಯೋತ್ಪಾದಕರು ಎಲ್ಲಿಂದ ಬರುತ್ತಾರೆ ಎಂದು ಪತ್ತೆ ಮಾಡುವಲ್ಲಿ ಕೇಂದ್ರ ಸರ್ಕಾರ ಮುಂದಾಗಲಿಲ್ಲ, ಈ ಬಗ್ಗೆ ಜನರಿಗೆ ಸತ್ಯವನ್ನೇ ಹೇಳಲಿಲ್ಲ ಎಂದು ಟೀಕಿಸಿದರು.
ಪುಲ್ವಾಮಾ ದಾಳಿಯ ವಿಷಯದಲ್ಲಿ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ. ದೇಶದೊಳಗೆ ಭಯೋತ್ಪಾದಕರು ನುಗ್ಗುತ್ತಾರೆ ಎಂದರೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ ಅವರು, ಮಾಧ್ಯಮಗಳಂತೂ ಪ್ರಧಾನಿ ಮೋದಿ ಹೊರತಾಗಿ ರಾಷ್ಟ್ರಪತಿಯೂ ಸೇರಿದಂತೆ ಯಾರೆಂದರೆ ಯಾರೂ ಕಾಣುವುದಿಲ್ಲ ಎಂದು ಕುಟುಕಿದರು.