ಅರಕಲಗೂಡು : ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ ಪಟ್ಟಣದ ಹೊರವಲಯ ಸಾಲುಮರದ ತಿಮ್ಮಕ್ಕ ಪಾರ್ಕ್ ಬಳಿ ಬೈಕ್ ರ್ಯಾಲಿ ನಡೆಸಿ ಭವ್ಯ ಸ್ವಾಗತ ಕೋರಲಾಯಿತು.
ಶುಕ್ರವಾರ ಮಧ್ಯಾಹ್ನ 2ಗಂಟೆಗೆ ತಾಲೂಕಿನ ಗಡಿಭಾಗ ಬೂವನಹಳ್ಳಿ ಮೂಲಕ ಪ್ರವೇಶ ಮಾಡಿದ ಯಾತ್ರೆಯನ್ನು ಸಾವಿರಾರು ಮಂದಿ ಬಿಜೆಪಿ ಪಕ್ಷದ ಕಾರ್ಯಕರ್ತರು ಘೋಷಣೆಗಳೊಂದಿಗೆ ಆತ್ಮೀ ಯವಾಗಿ ಬರಮಾಡಿಕೊಂಡರು. ಬಳಿಕ ಯಾತ್ರೆ ಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.
ಜನತೆ ಮುಂದೆ ರಿಪೋರ್ಟ್ ಕಾರ್ಡ್: ವಿಜಯ ಸಂಕಲ್ಪ ಯಾತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಸದಾನಂದಗೌಡ, ವಿಶೇಷವಾಗಿ ನಮ್ಮ ಪ್ರಧಾನಿ ಮೋದಿ ಜೀ ಅವರು ಜನತೆ ಎದುರು ನಿಮ್ಮ ಪ್ರಗ ತಿ ರಿಪೋ ರ್ಟ್ ಕಾರ್ಡ್ ಮೌಲ್ಯ ಮಾಪನಕ್ಕೆ ಇಡಿ ಎಂದು ಹೇಳಿದ್ದಾರೆ. ಅದರಂತೆ ಜನರ ಮುಂದೆ ಮೌಲ್ಯ ಮಾಪನಕ್ಕೆ ನಮ್ಮ ಅಭಿವೃದ್ಧಿ ಕೊಡುಗೆ ವರದಿ ನೀಡುತ್ತೇವೆ ಎಂದರು.
ಅದೇ ರೀತಿ ಜೆಡಿಎಸ್, ಕಾಂಗ್ರೆಸ್ ಅವ ಧಿಯಲ್ಲಿಯೂ ಕೂಡ ಆಗಿರುವ ಜನೋಪಯೋಗಿ ಕೆಲಸ ಕಾರ್ಯಗಳನ್ನು ಸಹ ಜನರ ಮುಂದೆ ಮೌಲ್ಯಮಾಪನ ಮಾಡುವ ಕೆಲಸ ಆಗಬೇಕಿದೆ ಎಂದರು.
Related Articles
ವಿಭಿನ್ನ ಚುನಾವಣೆಗೆ ಸಿದ್ಧತೆ : ಕಳೆದ 75ವರ್ಷಗಳ ಅವಧಿಯಲ್ಲಿ ನಡೆದಿರುವ ಚುನಾವಣೆಗಿಂತ್ತ ಮುಂಬರುವ ವಿಧಾನಸಭಾ ಚುನಾವಣೆ ಸೇರಿದಂತೆ ಇತರೆ ಚುನಾವ ಣೆಗಳನ್ನು ತುಂಬಾ ವಿಭಿನ್ನವಾಗಿ ನಡೆಸಲು ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ ಎಂದು ಮಾಜಿ ಸಿಎಂ ಸದಾನಂದಗೌಡ ತಿಳಿಸಿದರು.
ಈಗಾಗಲೇ 88 ಕ್ಷೇತ್ರಗಳಲ್ಲಿ ರಥಯಾತ್ರೆ ಸಂಚರಿಸಿದೆ. ಅದ್ಭುತವಾದ ಬೆಂಬಲ ಜನರಿಂದ ದೊರೆತ್ತಿದೆ. ಹಾಸನ ಜಿಲ್ಲೆಯಲ್ಲಿ ಈ ಹಿಂದೆ ನಾಲ್ಕು ಸ್ಥಾನ ಗಳಿಸಿದ್ದೇವೆ.ಇದು ಈ ಬಾರಿ ಮರುಕಳಿಸಲಿದೆ ಎಂದರು. ರಾಜ್ಯದಲ್ಲಿ ಯಾವುದೇ ಪಕ್ಷಗಳೊಂದಿಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ಸಂದರ್ಭ ಬರಲ್ಲ. ನಮಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಮಾನ ವಿರೋಧಿಗಳಾಗಿದ್ದಾರೆ. ಬಿಜೆಪಿ ಸಾಧನೆಗಳಿಂದ ಮುಂದಿನ ಚುನಾವಣೆಯಲ್ಲಿ 150ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯಾತ್ರೆಯಲ್ಲಿ ಮುಖಂಡರಾದ ವಿಜಯಶಂಕರ್, ಹುಲ್ಲಹಳ್ಳಿ ಸುರೇಶ್, ಯೋಗ ರಮೇಶ್,ದಿವಾಕರ್‌ಗೌಡ, ವಿಶ್ವನಾಥ್, ರಾಜೇಶ್, ಸೂರ್ಯ, ದರ್ಶನ್, ಮಹೇಶ್, ಶಿವಲಿಂಗಶಾಸ್ತ್ರಿ ಸೇರಿದಂತೆ ಇತರರು ಯಾತ್ರೆಯಲ್ಲಿ ಪಾಲ್ಗೊಂಡು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನ ಪರ ಯೋಜನೆಗಳ ಅನುಷ್ಠಾನ ಕುರಿತು ವಿಷಯ ಪ್ರಸ್ತಾಪಿಸಿದರು.
ಪಟ್ಟಣದ ಅನಕೃ ವೃತ್ತ, ದೊಡ್ಡಮ್ಮ ವೃತ್ತದ ಮೂಲಕ ಬೈಕ್ ರ್ಯಾಲಿಯಲ್ಲಿ ತೆರಳಿದ ಯಾತ್ರೆ ತಹಶೀಲ್ದಾರ್ ಕಚೇರಿ ಬಳಿ ಅಂಬೇಡ್ಕರ್ ಭಾವಚಿತ್ರಕ್ಕೆ ಮುಖಂಡರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. 2ಸಾವಿರಕ್ಕೂ ಅಧಿಕ ಸಂಖ್ಯೆಯ ಬೈಕ್‌ಗಳು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊ ಂಡಿದ್ದರು.