Advertisement

ಅಮರೀಂದರ್ ಸಿಂಗ್ ಬಿಜೆಪಿಯೊಂದಿಗೆ ಸೇರಿ ಕಾಗೆ ತಿನ್ನಲಿ : ಕಾಂಗ್ರೆಸ್ ಆಕ್ರೋಶ

07:52 PM Oct 20, 2021 | Team Udayavani |

ಹೊಸದಿಲ್ಲಿ : ಹೊಸ ಪಕ್ಷ ಕಟ್ಟಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಂಜಾಬ್ ವಿಧಾನಸಭಾ ಚುನಾವಣೆ ಎದುರಿಸಲು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಮುಂದಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಕಾಂಗ್ರೆಸ್ ಹಿರಿಯ ನಾಯಕ ಹರೀಶ್ ರಾವತ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಜಾತ್ಯಾತೀತ ಸಿದ್ದಾಂತಗಳನ್ನು ಅಮರೀಂದರ್ ಸಿಂಗ್ ಮರೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅವರು ಸರ್ವಧರ್ಮ ಸಂಭವ್ ಆಗಿದ್ದರು. ಅವರು ಕಾಗೆ ತಿನ್ನುವ ಕೆಲಸ ಬೇಕಾದರೆ ಮಾಡಲಿ, ಬಿಜೆಪಿಯೊಂದಿಗೆ ಹೋಗಲಿ, ತಡೆಯುವವರು ಯಾರು’ ಎಂದರು.

ರೈತರು ೧೦ ತಿಂಗಳಿನಿಂದ ಬಿಜೆಪಿ ಸರಕಾರದ ವಿರುದ್ಧ ಹೋರಾಡುತ್ತಿದ್ದಾರೆ, ಯಾರು ಮರೆಯುತ್ತಾರೆ, ಪಂಜಾಬ್ ಜನರು ಮರೆಯುವುದಿಲ್ಲ ಎಂದು ರಾವತ್ ಹೇಳಿದರು.

‘ಮುಂದಿನ ಚುನಾವಣೆಯ ಫಲಿತಾಂಶ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರ ಸರಾಕಾರದ ಕಾರ್ಯಕ್ಷಮತೆಯನ್ನು ಆಧರಿಸಿ ನಿರ್ಣಯವಾಗುತ್ತದೆ’ ಎಂದರು.

ಮೈತ್ರಿಗೆ ನಾವು ಸಿದ್ಧ

Advertisement

‘ಕ್ಯಾಪ್ಟನ್ ಅಮರೀಂದರ್ ಸಿಂಗ್ ಜೊತೆ ಮೈತ್ರಿಗೆ ನಾವು ಸಿದ್ಧರಿದ್ದೇವೆ’ ಎಂದು ಬಿಜೆಪಿಯ ಪಂಜಾಬ್ ಉಸ್ತುವಾರಿ ದುಷ್ಯಂತ್ ಗೌತಮ್ ಹೇಳಿದರು.

‘ಮೈತ್ರಿಗಾಗಿ ನಮ್ಮ ಬಾಗಿಲು ತೆರೆದಿವೆ, ಆದರೂ ನಮ್ಮ ಸಂಸದೀಯ ಮಂಡಳಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ’ ಎಂದರು.

”ರೈತರು ಕೂಡ ಇಂದು ನಮ್ಮೊಂದಿಗಿದ್ದಾರೆ. ನಾವು ಈ ಹಿಂದೆಯೂ ರೈತರ ಹಿತಕ್ಕಾಗಿ ಹೋರಾಡುತ್ತಿದ್ದೆವು. ಅಮರೀಂದರ್ ಸಿಂಗ್ ಕೂಡ ರೈತರ ಕಲ್ಯಾಣದ ಬಗ್ಗೆ ಮಾತನಾಡುತ್ತಿದ್ದಾರೆ.  ಪ್ರತಿಭಟನೆಯನ್ನು ಹೇಗೆ ಪರಿಹರಿಸಬೇಕೆಂದು ನಾವು ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ. ” ಎಂದು ದುಷ್ಯಂತ್ ಗೌತಮ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next