Advertisement

ಪ್ರಧಾನಿ ಸಂದೇಶವನ್ನೂ ಓದದ ಬಿಜೆಪಿ ಸಂಸದರು

06:15 AM Dec 29, 2017 | Team Udayavani |

ಹೊಸದಿಲ್ಲಿ: ನಾನು ಪ್ರತಿ ದಿನ ಬಿಜೆಪಿಯ ಎಲ್ಲ ಸಂಸದರಿಗೂ ಶುಭ ಮುಂ ಜಾನೆ ಎಂಬ ಸಂದೇಶ ಕಳುಹಿ ಸುತ್ತೇನೆ. ಅದರೆ ಯಾರೂ ನನಗೆ ಪ್ರತಿಯಾಗಿ ಶುಭ ಕೋರುವುದಿಲ್ಲ. ಕೇವಲ ಐದಾರು ಸಂಸದರಷ್ಟೇ ಪ್ರತಿ ಕ್ರಿಯಿಸುತ್ತಾರೆ…. ಹೀಗೆಂದು ಹೇಳಿದ್ದು ಹೊರಹಾಕಿದ್ದು ಪ್ರಧಾನಿ ನರೇಂದ್ರ ಮೋದಿ.

Advertisement

ಗುರುವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಬಿಜೆಪಿ ಸಂಸದರನ್ನು ಪ್ರಧಾನಿ ಮೋದಿ ತರಾಟೆಗೆ ತೆಗೆದು ಕೊಂಡರು. ನರೇಂದ್ರ ಮೋದಿ ಅಪ್ಲಿಕೇಶನ್‌ನಲ್ಲಿ ಸಂಸದರು ಸಕ್ರಿಯವಾಗಿರಬೇಕು. ನಾನು ಶುಭೋದಯ ಸಂದೇಶದ ಜತೆಗೆ ಮಹತ್ವದ ಮಾಹಿತಿಯನ್ನೂ ರವಾನಿಸುತ್ತೇನೆ. ಆದರೆ ಇದನ್ನು ಸಂಸದರು ಓದುವುದಿಲ್ಲ ಎಂದಿದ್ದಾರೆ. ಸಂಸದರು ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರಬೇಕು. ಇದರಿಂದ ಹೆಚ್ಚಿನ ಜನರನ್ನು ಒಂದೇ ಕ್ಷಣದಲ್ಲಿ ತಲುಪಬಹುದೆಂದು ಮೋದಿ ಸಂಸದರಿಗೆ ಸೂಚಿಸಿದ್ದಾರೆ. ಈ ಬಗ್ಗೆ “ಇಂಡಿಯಾ ಟುಡೇ’ ವರದಿ ಮಾಡಿದೆ.

ಈ ಹಿಂದೆ ಗುಜರಾತ್‌ ಚುನಾವಣೆಯ ವೇಳೆ ನರೇಂದ್ರ ಮೋದಿ ಆ್ಯಪ್‌ ಅನ್ನು ಸಕ್ರಿಯವಾಗಿ ಬಳಸಿದ್ದು, ಇದರ ವೀಡಿಯೋ ಚಾಟಿಂಗ್‌ ಸೌಲಭ್ಯದ ಮೂಲಕ ರಾಜ್ಯದ ಮಹಿಳಾ ಕಾರ್ಯಕರ್ತರ ಜತೆ ಮಾತುಕತೆ ನಡೆಸಿದ್ದರು. ಈ ಅಪ್ಲಿಕೇಶನ್‌ 2015ರಲ್ಲಿ ಪರಿಚಯಿ ಸಲಾಗಿತ್ತು. ಈ ಅಪ್ಲಿಕೇಶನ್‌ನಲ್ಲಿ ಪ್ರಧಾನಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ಇರುತ್ತದೆ ಮತ್ತು ಪ್ರಧಾನಿ ನೇರವಾಗಿ ವ್ಯಕ್ತಿಗಳಿಗೆ ಸಂದೇಶ ಹಾಗೂ ಇಮೇಲ್‌ಗ‌ಳನ್ನು ಕಳುಹಿಸಬಹುದಾಗಿದೆ. ಜನರೂ ಕೂಡ ಇದನ್ನು ಬಳಸಬಹುದಾಗಿದ್ದು, ಮನ್‌ಕಿ ಬಾತ್‌ ಕಾರ್ಯಕ್ರಮವನ್ನು ಕೇಳಬಹುದು. ಮೋದಿ ಈ ಹಿಂದೆಯೂ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಧಿವೇಶನಕ್ಕೆ ಹಾಜರಾಗದ ಸಂಸದರಿಗೆ 2019ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದಿರಬಹುದು ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next